ಮೈಸೂರು: ಕನ್ನಡ ಕಲಾ ಅಭಿಮಾನಿ ಸೇವ ಕ್ಷೌರಿಕ ಬಳಗದ ವತಿಯಿಂದ ದಸರಾ ಪ್ರಯುಕ್ತ ಮೈಸೂರು ಅರಮನೆ ಆವರಣದಲ್ಲಿ ಮಾವುತರಿಗೆ ಮತ್ತು ಕಾವಾಡಿಗಳ ಮಕ್ಕಳಿಗೆ ಹಾಗೂ ಗಾಡ್ಸ್ ಗಳಿಗೆ ಉಚಿತ ಕ್ಷೌರ ಮಾಡಲಾಯಿತು.
ಈ ಕಾರ್ಯಕ್ರಮವನ್ನು ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಹಿರಿಯ ಸಾಹಿತಿ ಬನ್ನೂರು ಕೆ ರಾಜು ಅವರು ಉದ್ಘಾಟನೆ ಮಾಡಿದರು.
ಸದರಿ ಸಂಸ್ಥೆಯು ಸುಮಾರು 17 ವರ್ಷಗಳಿಂದ ಉಚಿತ ಕ್ಷೌರ ಮಾಡಿಕೊಂಡು ಬರುತ್ತಿದೆ.
ಅಧ್ಯಕ್ಷತೆ ಕನ್ನಡ ಕಲ ಅಭಿಮಾನಿ ಸೇವಾ ಕ್ಷೌರಿಕ ಬಳಗದ ಅಧ್ಯಕ್ಷ ಪಿ ಎನ್ ನಟೇಶ್, ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಸುನಿಲ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್ ಬಾಲಕೃಷ್ಣ, ಸಮಾಜ ಸೇವಕ ವಿಕಾಸ ಸಿಂಹ ಎಂ ವಿ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ಸಮಾಜ ಸೇವಕ ಗಾಂಧಿ ಟಿ, ಚಲನಚಿತ್ರ ನಿರ್ಮಾಪಕರು ವೆಂಕಟೇಶ್, ಪೋಷಕ ನಟಿ ಅಂಬುಜಾ, ಪದಾಧಿಕಾರಿಗಳಾದ ಪಿ ಕೃಷ್ಣ, ಪಿ ಟಿ ನಾರಾಯಣ, ಪಿ ಆರ್ ರಾಮಚಂದ್ರ, ಪಿಕೆ ಶಿವು, ಪಿಕೆ ಹರೀಶ್, ಎನ್ ಲೋಕೇಶ್, ವಿ ರಾಜೇಶ್, ಡಿಕೆ ಶೇಖರ್ ಮುಂತಾದವರು ಭಾಗವಹಿಸಿದ್ದರು.