ಮನೆ ರಾಜ್ಯ ಮೈಸೂರು: ಸ್ವಾಸ್ಥ್ಯ ಕೇಂದ್ರ ಉದ್ಘಾಟನೆ

ಮೈಸೂರು: ಸ್ವಾಸ್ಥ್ಯ ಕೇಂದ್ರ ಉದ್ಘಾಟನೆ

0

ಮೈಸೂರು(Mysuru): ನಗರದ ರಾಜ್‌ಕುಮಾರ್‌ ರಸ್ತೆಯಲ್ಲಿ ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (ಸಿಜಿಎಚ್‌ಎಸ್)ಯಲ್ಲಿ ನಿರ್ಮಿಸಿರುವ ‘ಸ್ವಾಸ್ಥ್ಯ ಕೇಂದ್ರ’ವನ್ನು ಗುರುವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಈ ಕುರಿತು ಮಾತನಾಡಿದ ಸಂಸದ ಪ್ರತಾಪ ಸಿಂಹ,  ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಯಲ್ಲಿ 70ಸಾವಿರ ಕೇಂದ್ರ ಸರ್ಕಾರದ ನಿವೃತ್ತ ಉದ್ಯೋಗಿಗಳಿದ್ದೇವೆ. ನಮಗೊಂದು ಸಿಜಿಎಚ್ಎಸ್‌ ಆಸ್ಪತ್ರೆ ಮಾಡಿಸಿಕೊಡಿ ಎಂದು ಕೆಲ ವರ್ಷಗಳಿಂದ ನನ್ನನ್ನು ಕೇಳಿಕೊಳ್ಳುತಿದ್ದರು. ಪ್ರಧಾನಿ ನರೇಂದ್ರ ಮೋದಿ, ಹಿಂದಿನ ಅರೋಗ್ಯ ಸಚಿವ ಡಾ.ಹರ್ಷವರ್ಧನ್, ಹಾಲಿ ಸಚಿವ ಮನ್ಸೂಕ್ ಮಾಂಡೋವಿ ಅವರ ಸಹಕಾರದೊಂದಿಗೆ ದೇಶದ 77ನೇ ಸಿಜಿಎಚ್‌ಎಸ್‌ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ ಆರೋಗ್ಯ ಸೇವೆಯನ್ನು ಅಲ್ಲಿ ಒದಗಿಸಲಾಗುತ್ತಿದೆ ಎಂದಿದ್ದಾರೆ.