ಮನೆ ಅಪರಾಧ ಮೈಸೂರು: ಸ್ವಗೃಹದಲ್ಲಿಯೇ ಇಂಜಿನಿಯರ್ ನಿಗೂಢ ಸಾವು

ಮೈಸೂರು: ಸ್ವಗೃಹದಲ್ಲಿಯೇ ಇಂಜಿನಿಯರ್ ನಿಗೂಢ ಸಾವು

0

ಮೈಸೂರು: ಸ್ವಗೃಹದಲ್ಲಿಯೇ ಇಂಜಿನಿಯರ್ ಒಬ್ಬರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ನಗರದ ಭೋಗದಿ 2ನೇ ಹಂತದ ಬಳಿ ನಡೆದಿದೆ.

ಬೆಂಗಳೂರಿನ ಕರ್ನಾಟಕ ನವೀಕರಿಸಹುದಾದ ಇಂಧನ ಅಭಿವೃದ್ಧಿ ನಿಯಮಿತದಲ್ಲಿ ಸೋಲಾರ್ ಎನರ್ಜಿ ಇಲಾಖೆಯ ಇಂಜಿನಿಯರ್ ಡಿ ಕೆ ದಿನೇಶ್ ಕುಮಾರ್ (50) ಮೃತ ವ್ಯಕ್ತಿ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಇವರು ಮೈಸೂರಿನಲ್ಲಿ ಕುಟುಂಬದ ಜೊತೆ ನಗರದ ಬೋಗಾದಿ 2ನೇ ಹಂತದ ನಿರ್ಮಿತಿ ಕೇಂದ್ರದ ಬಳಿ ಮನೆ ಮಾಡಿಕೊಂಡು, ಪತ್ನಿ ಮತ್ತು 12 ವರ್ಷದ ಮಗನೊಂದಿಗೆ ವಾಸವಿದ್ದರು.

ಭಾನುವಾರ ರಾತ್ರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ದಿನೇಶ್ ಕುಮಾರ್ ಅವರನ್ನು ಖಾಸಗಿ ಆಸ್ಪತ್ರೆಗೆ ಕೆಲಸಗಾರರು ಸೇರಿಸಿದ್ದರು. ಇದರ ಜೊತೆಗೆ ಮನೆಯಲ್ಲೇ ಇದ್ದ ಪತ್ನಿ ಹಾಗೂ ಪುತ್ರ ಸಹ ಅಸ್ವಸ್ಥಗೊಂಡಿದ್ದು, ಅವರು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಮಧ್ಯೆ ಆಸ್ಪತ್ರೆಗೆ ಕರೆತರುವ ಹೊತ್ತಿಗೆ ದಿನೇಶ್ ಕುಮಾರ್ ಮೃತಪಟ್ಟಿದ್ದು, ದೇಹ ಉಬ್ಬಿಕೊಂಡ ಸ್ಥಿತಿಯಲ್ಲಿತ್ತು. ಇದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಡಿ ಕೆ ದಿನೇಶ್ ಕುಮಾರ್ ಅವರ ಮೃತದೇಹ ಉಬ್ಬಿಕೊಂಡಿದ್ದು, ಬಾಯಲ್ಲಿ ರಕ್ತ ಬಂದಿದೆ. ದೇಹದ ಕೆಲವು ಭಾಗಗಳಿಗೆ ಗಾಯವಾಗಿದೆ. ಇದರಿಂದ ಇವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ತನಿಖೆ ಮಾಡಬೇಕೆಂದು ಮೃತ ದಿನೇಶ್ ಕುಮಾರ್ ಅಕ್ಕನ ಮಗ ನಾರಾಯಣ ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಮೃತರ ಪತ್ನಿ, ಮಗ ಹಾಗೂ ಮನೆ ಕೆಲಸಗಾರರ ಮೇಲೆ ಅನುಮಾನ ಇದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಹಿಂದಿನ ಲೇಖನಕೋವಿಡ್ ಲಸಿಕೆ ಸಾವುಗಳಿಗೆ ಸರ್ಕಾರವನ್ನು ಹೊಣೆ ಮಾಡುವಂತಿಲ್ಲ ಎಂದು ಸುಪ್ರೀಂಗೆ ತಿಳಿಸಿದ ಕೇಂದ್ರ
ಮುಂದಿನ ಲೇಖನಸಿ.ಟಿ.ರವಿ ಬಹಳ ಕಮ್ಯುನಲ್ ಫೆಲೊ: ಸಿದ್ದರಾಮಯ್ಯ