ಮೈಸೂರು(Mysuru): ಎನ್ ಟಿಎಂ ಶಾಲೆ ಕೆಡವಿ ವಿವೇಕಸ್ಮಾರಕ ನಿರ್ಮಾಣ ವಿವಾದ ಕನ್ನಡ ರಾಜ್ಯೋತ್ಸವದಂದು ಮುಂದುವರೆದಿದ್ದು, ಇಂದು ಕೂಡ ಕಾವಲುಪಡೆ ವತಿಯಿಂದ ನಗರದ ಡಾ.ರಾಜ್ ಕುಮಾರ್ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕೊಟ್ಟ ಮಾತನ್ನು ಉಳಿಸಿಕೊಳ್ಳಿ ರಾಮಕೃಷ್ಣ ಆಶ್ರಮದವರೆ, ವಿವೇಕಾನಂದರ ಹೆಸರಲ್ಲಿ ಕನ್ನಡ ಸ್ಮಾರಕ ಕೆಡುವುದು ಸರಿಯೇ?” ವಿವೇಕ ಸ್ಮಾರಕವಲ್ಲ..ಕನ್ನಡ ಶಾಲೆಯ ಸಮಾಧಿ, ಎನ್ ಟಿಎಂ ಶಾಲೆ ಉಳಿಸಿ” ಎಂದು ಘೋಷಣೆ ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮೊದಲ ಮಹಿಳಾ ಶಾಲೆ ಎಂಬ ಹೆಗ್ಗಳಿಕೆ ಹೊಂದಿದ್ದ ಎನ್ ಟಿಎಂ ಶಾಲೆ ಕೆಡವಿದ ಜಾಗದಲ್ಲಿ ಮರು ಶಾಲೆ ನಿರ್ಮಿಸಿ ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಮೋಹನ್ ಕುಮಾರ್ ಗೌಡ, ಹೊಸಕೋಟೆ ಬಸವರಾಜು, ಮರಂಕಯ್ಯ, ಸೇರಿದಂತೆ ಹಲವರು ಭಾಗಿಯಾಗಿದ್ದರು.