ಮೈಸೂರು(Mysuru) : ವಿಶ್ವವಿಖ್ಯಾ ಮೈಸೂರು ದಸರಾ 2022 ರ ಅಂಗವಾಗಿ ಇಂದು ಅರಮನೆ ಆವರಣದಲ್ಲಿ ರಾಜ್ಯದ ಎಲ್ಲ ಜಿಲ್ಲೆಯ ಕೆಎಸ್ಆರ್ಪಿ ಪೊಲೀಸ್ ವಾದ್ಯ ವೃಂದ ತಂಡದಿಂದ ತಾಲೀಮು ನಡೆಸಲಾಯಿತು.
280ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ವಾದ್ಯ ವೃಂದದ ಮೂಲಕ ಇಂಗ್ಲಿಷ್ ಬ್ಯಾಂಡ್, ಶಾಸ್ತ್ರೀಯ ಸಂಗೀತ ಹಾಗೂ ಪಾಶ್ಚಾತ್ಯ ಸಂಗೀತ ಗೀತೆಗಳನ್ನ ಹಾಡುವ ಮುಖಾಂತರ ನಾಡಿನ ಕಲೆ ಹಾಗೂ ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಅರಮನೆ ಆವರಣದಲ್ಲಿ ಸಿಬ್ಬಂದಿಗಳ ಮೊದಲ ಹಂತದ ತಾಲೀಮು ನಡೆದಿದ್ದು, ಅಕ್ಟೋಬರ್ 1 ರಂದು ಸಮೂಹ ವಾದ್ಯ ವೃಂದ ಪ್ರಸ್ತುತ ಪಡಿಸಲಿದ್ದಾರೆ.
Saval TV on YouTube