ಮನೆ ಸುದ್ದಿ ಜಾಲ ಮೈಸೂರು: ಪೊಲೀಸ್ ಬಿಗಿ ಭದ್ರತೆಯೊಂದಿಗೆ ಪ್ರದರ್ಶನಗೊಂಡ `ಟಿಪ್ಪು ನಿಜ ಕನಸುಗಳು’ ನಾಟಕ

ಮೈಸೂರು: ಪೊಲೀಸ್ ಬಿಗಿ ಭದ್ರತೆಯೊಂದಿಗೆ ಪ್ರದರ್ಶನಗೊಂಡ `ಟಿಪ್ಪು ನಿಜ ಕನಸುಗಳು’ ನಾಟಕ

0

ಮೈಸೂರು(Mysuru): ಅನೇಕ ವಿವಾದಗಳ ನಡುವೆ `ಟಿಪ್ಪು ನಿಜ ಕನಸುಗಳು’ ನಾಟಕದ ಮೊದಲ ಪ್ರದರ್ಶನವು ಇಲ್ಲಿನ ರಂಗಾಯಣದ ಭೂಮಿಗೀತದಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಭಾನುವಾರ ಪ್ರದರ್ಶನಗೊಂಡಿತು.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ರಚನೆ ಹಾಗೂ ನಿರ್ದೇಶನದ ಈ ನಾಟಕವನ್ನು ರೆಪರ್ಟರಿ ಕಲಾವಿದರು ಅಭಿನಯಿಸಿದರು.

ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ, ಲೇಖಕ ಡಾ.ಪ್ರಧಾನ ಗುರುದತ್ತ, ಶಾಸಕ ಕೆ.ಜಿ.ಬೋಪಯ್ಯ, ಆರ್‌ಎಸ್‌ಎಸ್‌ ಮುಖಂಡ ಮಾ.ವೆಂಕಟರಾಮ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ, ಸಂಸದ ಪ್ರತಾಪ ಸಿಂಹ ಪತ್ನಿ ಅರ್ಪಿತಾ ಸಿಂಹ ವೀಕ್ಷಿಸಿದರು.

ಆವರಣದ ಸುತ್ತಲೂ ಪೊಲೀಸ್‌ ವಾಹನಗಳೇ ಹೆಚ್ಚಿದ್ದವು. ಟಿಕೆಟ್‌ ಇದ್ದವರಿಗೆ ಮಾತ್ರವೇ ಪ್ರವೇಶ ನೀಡಲಾಯಿತು.

ಫೋಟೊ, ವಿಡಿಯೊಗೆ ನಿಷೇಧ: ಪ್ರದರ್ಶನಕ್ಕೆ ಕೆಲವೇ ನಿಮಿಷಗಳಿದ್ದಾಗ ಪತ್ರಕರ್ತರು ಹಾಗೂ ಛಾಯಾಗ್ರಾಹಕರಿಗೆ ಅವಕಾಶ ಕೊಡಲಾಯಿತು. ಫೋಟೊ ಹಾಗೂ ವಿಡಿಯೊ ಮಾಡಲು ನಿಷೇಧ ಹೇರಲಾಗಿತ್ತು.  ‘ಭೂಮಿಗೀತ’ದ 209 ಸೀಟುಗಳೂ ಭರ್ತಿಯಾಗಿದ್ದವು.

ಪೊಲೀಸ್ ಬಿಗಿಭದ್ರತೆ: ಡಿಸಿಪಿಗಳಾದ ಪ್ರದೀಪ್‌ ಗುಂಟಿ ಹಾಗೂ ಎಂ.ಎಸ್‌.ಗೀತಾ ಪ್ರಸನ್ನ ನೇತೃತ್ವದಲ್ಲಿ ಮೀಸಲು ಪಡೆಯ 250ಕ್ಕೂ ಹೆಚ್ಚು ಪೊಲೀಸರನ್ನು ರಂಗಾಯಣ ಹಾಗೂ ಕಲಾಮಂದಿರದ ಸುತ್ತ ನಿಯೋಜಿಸಲಾಗಿತ್ತು. ಹುಣಸೂರು ರಸ್ತೆ, ಕುಕ್ಕರಹಳ್ಳಿ ಕೆರೆ ರಸ್ತೆಯಲ್ಲೂ ಪೊಲೀಸರಿದ್ದರು.

ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಪ್ರವೇಶ ದ್ವಾರದ ಬಳಿ ಎಲ್ಲರನ್ನೂ ಸ್ವಾಗತಿಸಿದರು.

ನಾಟಕ ಪ್ರದರ್ಶನಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸದಂತೆ ರಂಗಾಯಣ ಅರ್ಜಿ ಸಲ್ಲಿಸಿತ್ತು. 200ಕ್ಕೂ ಹೆಚ್ಚು ಟಿಕೆಟ್‌ಗಳು ಆನ್‌’ಲೈನ್‌ ಮೂಲಕ ಮಾರಾಟವಾಗಿವೆ. ಸೋಮವಾರವೂ ಪ್ರದರ್ಶನ ಇದೆ ಎಂದು ಕಾರ್ಯಪ್ಪ ತಿಳಿಸಿದರು.

ಹಿಂದಿನ ಲೇಖನಚಿಕ್ಕಮಗಳೂರು: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ
ಮುಂದಿನ ಲೇಖನಮಂಗಳೂರು ಸ್ಫೋಟದಲ್ಲಿ ಗಾಯಗೊಂಡವ ಶಾರೀಕ್ ಎಂಬುದನ್ನು ದೃಢಪಡಿಸಿದ ಪೋಷಕರು