ಮನೆ ರಾಜ್ಯ ಮೈಸೂರು: ಗಣೇಶ, ಗೌರಿ ಮೂರ್ತಿ ತಯಾರಿಕರಿಗೆ ಸನ್ಮಾನ

ಮೈಸೂರು: ಗಣೇಶ, ಗೌರಿ ಮೂರ್ತಿ ತಯಾರಿಕರಿಗೆ ಸನ್ಮಾನ

0

ಮೈಸೂರು(Mysuru): ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್  ವತಿಯಿಂದ ಕುಂಬಾರಗೇರಿಯಲ್ಲಿ 40 ವರ್ಷದಿಂದ ಗಣೇಶ ಹಾಗೂ ಗೌರಿ ಮೂರ್ತಿಯನ್ನು ತಯಾರಿಸುತ್ತಿರುವ ಮೂರ್ತಿ ತಯಾರಿಕರನ್ನು ಸನ್ಮಾನಿಸಲಾಯಿತು.

ಹಿರಿಯ ಮೂರ್ತಿ ತಯಾರಕರಾದ ಶಂಕ್ರಮ್ಮ ಶ್ರೀನಿವಾಸ್ ಮೂರ್ತಿ , ವಿ ವೆಂಕಟಮ್ಮ, ಶಾಂತಮ್ಮ, ನಿಂಗಮ್ಮ, ಶಾರದಾ, ಶಾರದಮ್ಮ  ಸನ್ಮಾನ ಸ್ವೀಕರಿಸಿದರು.

ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ಗಣೇಶ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನೇ ನಂಬಿ ಬದುಕುವ ಹಲವ ಕುಟುಂಬಗಳು ಜಿಲ್ಲೆಯಲ್ಲಿವೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣಪತಿ ಮೂರ್ತಿಗಳನ್ನು ಮಾರಾಟ ಮಾಡಿ ಒಂದಿಷ್ಟು ಹಣ ಸಂಪಾದಿಸುವ ವ್ಯಾಪಾರಿಗಳೂ ಇದ್ದಾರೆ ಎಂದರು.

ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ವಿಗ್ರಹಗಳ ತಯಾರಕರೂ ಚಿಂತಾಕ್ರಾಂತರಾಗಿದ್ದಾರೆ. ಸರ್ಕಾರ ಮೂರ್ತಿ ತಯಾರಕರಿಗೆ ವಿಶೇಷ ಸಹಾಯಧನ ನೀಡಬೇಕು. ಸರ್ಕಾರ ಮೂರ್ತಿ ತಯಾರಕರ ಹಿತ ಕಾಯಲು  ಮುಂದಾಗಬೇಕು, ಹಲವು ವರ್ಷಗಳಿಂದ ಮೂರ್ತಿ ತಯಾರಿಕೆ ಮಾಡಿ ಕೊಂಡು ಜೀವನ ನಡೆಸುತ್ತಿರುವ ವಿಶೇಷ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು.

ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್ ಮಾತನಾಡಿ, ಇಂದಿನ ಮಕ್ಕಳು ಪರಿಸರದೊಂದಿಗೆ ಬೆರೆಯುವ ಅವಕಾಶಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಣ್ಣು, ಪ್ರಕೃತಿಯ ಜೊತೆಗೆ ಬೆರೆಯುತ್ತಿಲ್ಲ. ಗಣಪತಿ ಹಬ್ಬ ಸಮೀಪವಿರುವುದರಿಂದ ಪ್ರತಿಯೊಬ್ಬರು ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ಮಣ್ಣಿನಿಂದ ಮಾಡಿದ ಪರಿಸರಸ್ನೇಹಿ ಗಣಪತಿಯನ್ನು ಮನೆ ಯಲ್ಲಿಟ್ಟು ಪೂಜೆ ಮಾಡಿದಾಗ ಪ್ರಕೃತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿಗಳನ್ನು ಬಳಸಿ ಪರಿಸರಕ್ಕೆ ಹಾನಿ ಉಂಟು ಮಾಡುವವರಿಗೆ ಮನವರಿಕೆ ಮಾಡಿ ಪರಿಸರ ಸ್ನೇಹಿ ಗಣಪತಿ ಬಳಸಲು ಪ್ರೇರೆಪಿಸಬೇಕಿದೆ ಎಂದರು.

ಮಕ್ಕಳಲ್ಲಿ ಜಾಗೃತಿ ಮೂಡಿಸುವುದರಿಂದ ಮನೆಯವರಿಗೆ ಹಾಗೂ ನೆರೆಹೊರೆಯವರಿಗೂ ಅರಿವು ಮೂಡಿಸಲು ಮುಂದಾಗುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗೌರಿ-ಗಣಪತಿಯನ್ನು ಬಳಸುವಂತಾಗಬೇಕಿದೆ ಎಂದರು.

ಈ ಸಂದರ್ಭದಲ್ಲಿ ಎಸ್ ಎನ್ ರಾಜೇಶ್, ರೇವಣ್ಣ, ಬಾಬಣ್ಣ, ಸೀನ, ಸತೀಶ್, ಪೃಥ್ವಿ ಸಿಂಗ್ ಚಂದ್ರಾವತ್, ಭೀಮರಾಜ್ ಪರಿಯಾರ್, ಪಂಕಜ್ ಪಾರೀಕ ಹಾಜರಿದ್ದರು

ಹಿಂದಿನ ಲೇಖನಮಕ್ಕಳ ದತ್ತು ಸ್ವೀಕಾರ ಪ್ರಕ್ರಿಯೆ ಸರಳಗೊಳಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್
ಮುಂದಿನ ಲೇಖನಮಹಿಳೆಗೆ ಲೈಂಗಿಕ ಕಿರುಕುಳ: ಮುರುಘಾ ಮಠದ ಆಡಳಿತಾಧಿಕಾರಿ ವಿರುದ್ಧ ದೂರು ದಾಖಲು