ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ 2021-2022 ನೇ ಶೈಕ್ಷಣಿಕ ಸಾಲಿನಲ್ಲಿ 32,2040 ವಿವಿಧ ಪದವೀಧರರು 539 ಪಿ.ಎಚ್.ಡಿ ಪದವೀಧರರು 5627 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರುತ್ತಾರೆ. ಅಕ್ಟೋಬರ್ 18 ರಂದು ಬೆಳಗ್ಗೆ 10:30 ಕ್ಕೆ ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧ ಭವನದಲ್ಲಿ 103 ನೇ ಘಟಿಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎನ್.ಕೆ. ಲೋಕನಾಥ್ ರವರು ತಿಳಿಸಿದರು
ಇಂದು ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಬಾರಿ ಬೆಂಗಳೂರು ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಶ್ರಾಂತ ವೈದ್ಯಕೀಯ ಪ್ರಾಧ್ಯಾಪಕರಾದ ಡಾ. ಪಿ.ಎಸ್ ಶಂಕರ್, ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು ದಿನಪತ್ರಿಕೆ ಪ್ರಧಾನ ಸಂಪಾದಕರಾದ ಕೆ.ಬಿ ಗಣಪತಿ, ವಿಶ್ರಾಂತ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರು ಮತ್ತು ಐಸಿಸಿ ಕ್ರಿಕೆಟ್ ಪಂದ್ಯಾವಳಿಗಳ ತೀರ್ಪುಗಾರರಾದ ಜಾವಗಲ್ ಶ್ರೀನಾಥ್ ಈ ಮೂರು ಮಂದಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ಹಾಗೂ ಪದವಿ ಪ್ರಧಾನಕ್ಕೆ ಸಂಬAಧಿಸಿದAತೆ 32240 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ನೀಡಲಾಗುತ್ತಿದ್ದು ಅವರಲ್ಲಿ 20189(62.62%) ಮಹಿಳೆಯರು ಮತ್ತು 12051 (37.37%) ಪುರುಷರು ಇದ್ದಾರೆ.
ವಿವಿಧ ವಿಷಯಗಳಲ್ಲಿ 539 ಅಭ್ಯರ್ಥಿಗಳಿಗೆ ಪಿ.ಹೆಚ್.ಡಿ ಪದವಿಯನ್ನು ಪ್ರಧಾನ ಮಾಡಲಾಗುವುದು. ಅವರಲ್ಲಿ 248 (46.01%) ಮಹಿಳೆಯರು ಮತ್ತು 291(53.98%) ಪುರುಷರು ಇದ್ದಾರೆ.
ಒಟ್ಟು 420 ಪದಕಗಳು ಮತ್ತು 275 ಬಹುಮಾನಗಳನ್ನು 49 ಅಭ್ಯರ್ಥಿಗಳು ಪಡೆದುಕೊಂಡಿದ್ದು ಅವರಲ್ಲಿ 180 (72.%)ಮಹಿಳೆಯರು ಇದು ಪುರುಷರು 69 (22%) ಇದ್ದಾರೆ.
5,627 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಪ್ರಧಾನ ಮಾಡಲಾಗುವುದು. ಅವರಲ್ಲಿ 3799 (67.51%) ಮಹಿಳೆಯರು ಪುರುಷರು 26,074 ಅಭ್ಯರ್ಥಿಗಳಿಗೆ ಸ್ನಾತಕ ಪದವಿಯನ್ನು ಪದವಿಯನ್ನು ಪ್ರಧಾನ ಮಾಡಲಾಗುವುದು ಅವರಲ್ಲಿ 16,142(61,90%) ಮಹಿಳೆಯರು, 9935(38.00%) ಪುರುಷರು ಪದವಿಯನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾನ್ವಿತ ಕರ್ನಾಟಕ ರಾಜ್ಯದ ರಾಜ್ಯಪಾಲರು ಹಾಗೂ ಕುಲಾಧಿಪತಿಗಳಾದ ಥಾವರ್ ಚಂದ್ ಗೆಹ್ಲೋಟ್ ರವರು ವಹಿಸಲಿದ್ದಾರೆ. ಘಟಿಕೋತ್ಸವದ ಭಾಷಣವನ್ನು ರಕ್ಷಣಾ ಸಂಶೋದನಾ ಮತ್ತು ಅಭಿಯವೃದ್ದಿ ಸಂಸ್ಥೆಯ ವಿಶ್ರಾಂತ ಮಹಾ ನಿರ್ದೇಶಕರಾದ ಪದ್ಮವಿಭೂಷಣ ಡಾ. ವಾಸುದೇವ ಕೆ. ಆತ್ರೆ ಅವರು ಮಾಡುವರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ ಸುಧಾಕರ್ ಉಪಸ್ಥಿತರಿರುವರು.
ಪತ್ರಿಕಾಗೋಷ್ಟಿಯಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವರಾದ ಶೈಲಜಾ ಅವರು ಉಪಸ್ಥಿತರಿದ್ದರು.