ಮನೆ ಸುದ್ದಿ ಜಾಲ ಮೈಸೂರು: ಚೆಕ್ ಪೋಸ್ಟ್’ಗಳಿಗೆ ವೆಚ್ಚ ವೀಕ್ಷಕರ ಭೇಟಿ

ಮೈಸೂರು: ಚೆಕ್ ಪೋಸ್ಟ್’ಗಳಿಗೆ ವೆಚ್ಚ ವೀಕ್ಷಕರ ಭೇಟಿ

0

ಮೈಸೂರು: ಕೃಷ್ಣರಾಜ ಕ್ಷೇತ್ರದ ವೆಚ್ಚ ವೀಕ್ಷಕರಾದ ನಿತಿನ್ ಕುಮಾರ್ ಜೈಮಾನ್ ಅವರು ಕ್ಷೇತ್ರದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ ಚುನಾವಣೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದರು.

Join Our Whatsapp Group

ನಂತರ ಎಂ.ಸಿ.ಸಿ ತಂಡದೊಂದಿಗೆ ಸಭೆ ನಡೆಸಿ, 50 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಕೊಂಡೋಯುವ ಯಾವುದೇ ವ್ಯಕ್ತಿ ಮೇಲೆ ಕ್ರಮ ಕೈಗೊಳ್ಳಲು ತಿಳಿಸಿದರು ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಜವಾಬ್ದಾರಿಯಿಂದ ಕಾರ್ಯನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೃಷ್ಣ ರಾಜ ವಿಧಾನ ಸಭಾ ಕ್ಷೇತ್ರದ ನೋಡಲ್ ಅಧಿಕಾರಿಯಾದ ರುದ್ರೇಶ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.