ಮನೆ ರಾಜಕೀಯ ಮತದಾರರ ಖುದ್ದು ಭೇಟಿಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸಲಹೆ

ಮತದಾರರ ಖುದ್ದು ಭೇಟಿಗೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಸಲಹೆ

0

ಹಾಸನ: ಪ್ರತಿಯೊಬ್ಬ ಮತದಾರರನ್ನು ಖುದ್ದಾಗಿ ಭೇಟಿ ಮಾಡಿ ಅವರ  ಬಳಿ ಮತ ಯಾಚಿಸಬೇಕೆಂದು  ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಹಾಸನ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದರು.

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ಪಕ್ಷದ ಜಿಲ್ಲಾ ಕಚೇರಿಯಲ್ಲಿಂದು ನಡೆದ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಮನೆಗೂ ಭೇಟಿ ಕೊಟ್ಟಾಗ ಆ ಮನೆಯ ಸದಸ್ಯರ ಹೆಸರನ್ನು ಬರೆದುಕೊಳ್ಳುವುದು, ಆತ್ಮೀಯವಾಗಿ ಮಾತನಾಡಿ ಅವರ ಸಮಸ್ಯೆಗಳನ್ನು ಕೇಳಿ ಅವುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಪದವೀಧರ ಮತದಾರರ ಪಟ್ಟಿಯನ್ನು ತಯಾರಿಸಿ ನನಗೆ ನೀಡಿದರೆ ನಾನೇ ಖುದ್ದಾಗಿ ಅವರಿಗೆ ಕರೆ ಮಾಡಿ ನಮ್ಮ ಪಕ್ಷದ ಅಭ್ಯರ್ಥಿ ರವಿಶಂಕರ್ ಅವರ ಪರವಾಗಿ ಮತ ಕೇಳುತ್ತೇನೆ. ಇದರ ಜವಾಬ್ದಾರಿಯನ್ನು ಶಾಸಕರಾದ ಪ್ರೀತಂಗೌಡ ಅವರು ವಹಿಸಿಕೊಳ್ಳಬೇಕು.

ಗೆಲುವಿನ ಕಾರ್ಯತಂತ್ರವನ್ನು ರೂಪಿಸುವ ಕೆಲಸವನ್ನು ನಾವು ಮಾಡಬೇಕು ಎಂದರು.

ಹೆಚ್ಚಿನ ಪದವೀಧರ ಮತದಾರರು ಹಾಸನ ಜಿಲ್ಲೆಯಲ್ಲಿಯೇ ಬರುತ್ತಾರೆ.ಈ ಮತದಾರರು ಮತ್ತು ಅವರ ಕುಟುಂಬಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳನ್ನು ಮನವರಿಕೆ ಮಾಡುವುದು  ಮತ್ತು ಯಾವ ಯೋಜೆನಯಿಂದ ನಿಮ್ಮ ಕುಟುಂಬದ ಸ್ಥಿತಿ ಸುಧಾರಿಸಿದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಂದಲ್ಲ ಒಂದು ಯೋಜನೆಯ‌ ಲಾಭವನ್ನು ಪ್ರತಿಕುಟುಂಬಗಳು ಪಡೆದುಕೊಂಡಿವೆ ಎಂದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಸುರೇಶ್, ಶಾಸಕ ಪ್ರೀತಂಗೌಡ, ರೇಣುಕುಮಾರ್,ಅಣ್ಣಪ್ಪ,ಯೋಗಾ ರಮೇಶ್,‌ ವೇಣುಗೋಪಾಲ್ ಇತರರು ಉಪಸ್ಥಿತರಿದ್ದರು.

ಹಿಂದಿನ ಲೇಖನನೇಮಕಾತಿ ಅಕ್ರಮ‌ ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವುದಿಲ್ಲ: ಸಚಿವ ಕೆ.ಗೋಪಾಲಯ್ಯ
ಮುಂದಿನ ಲೇಖನಕರ್ನಾಟಕ ವಿಧಾನ ಪರಿಷತ್ತಿನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ವೇಳಾಪಟ್ಟಿ ಪ್ರಕಟ