ಮೈಸೂರು: ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೇ ಮಹಿಳೆಯರು ನಾ ಮುಂದು ತಾ ಮುಂದು ಅಂತಾ ಬಸ್ ಗಳಲ್ಲಿ ನುಗ್ಗುತ್ತಿದ್ದಾರೆ. ಬಸ್ ನ ಕಿಟಿಕಿಗಳು,ಬಾಗಿಲುಗಳು ಸಹ ಪೀಸ್ ಪೀಸ್ ಆಗ್ತಿವೆ.
ಈ ನಡುವೆ ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್ ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡು ಕೈ ಕೈ ಮಿಲಾಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದೆರಡು ದಿನಗಳಲ್ಲೇ ಮಾರ್ಗಸೂಚಿ:
ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಮಹಿಳೆಯರ ದಂಡನ್ನು ಕಂಟ್ರೋಲ್ ಮಾಡೋಕೆ ಸಾರಿಗೆ ಇಲಾಖೆ ಮುಂದಾಗ್ತಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ನಿನ್ನೆ ಸಭೆ ನಡೆಸಿದ್ದಾರೆ. ಕಿಟಕಿ ಹೊಡೆಯೋದು, ಡೋರ್ ಒಡೆಯೋದು ಆದ್ರೇ ಕಷ್ಟ. ಶಿಸ್ತಿನಲ್ಲಿ ಬರಬೇಕು. ಸಪರೇಟ್ ಗೈಡ್ ಲೈನ್ಸ್ ತನ್ನಿ ಎಂದು ಸೂಚನೆ ನೀಡಿದ್ದಾರೆ.