Saval TV on YouTube
ಮೈಸೂರು(Mysuru): ಬೆಂಗಳೂರಿನಲ್ಲಿ ನಡೆಯುತ್ತಿರುವ ೬೦ನೇ ವರ್ಷದ ರಾಷ್ಟ್ರೀಯ ಮಟ್ಟದ ಇನ್ಲೈನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯ ಒನ್ ಲ್ಯಾಪ್ ರೇಸ್’ನಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಆರವ್ ಕಿರಣ್ ಚಿನ್ನದ ಪದಕ ಗೆದ್ದಿದ್ದಾರೆ.
ಜಿಲ್ಲೆಯ ಕೊಡಗಹಳ್ಳಿ ನಿವಾಸಿಯಾದ ಕಿರಣ್ ಶಿವ ಹಾಗು ದೀಪಿಕಾ ಅವರ ಪುತ್ರರಾಗಿರುವ ಆರವ್, ಮೈಸೂರಿನ ಐ ಕ್ಯಾನ್ ದಿ ಲರ್ನಿಂಗ್ ಸೆಂಟರ್ ವಿದ್ಯಾ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿದ್ದಾರೆ.
ಎಲೈಟ್ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್’ನಲ್ಲಿ ಎಂ. ಜಿ. ಉಮಾ ಹಾಗೂ ಆದಿತ್ಯ ಎಸ್. ರಾವ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದಾರೆ.















