ಮನೆ ರಾಜ್ಯ ಮಂಡ್ಯ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

ಮಂಡ್ಯ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ

0

ಮಂಡ್ಯ(Mandya): ಕಳೆದ ಹಲವು ದಿನಗಳಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದ್ದ ಚಿರತೆ ಇಂದು ಮುಂಜಾನೆ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.

ತಾಲೂಕಿನ ಲೋಕಸರ ಗ್ರಾಮದಲ್ಲಿ ಹಲವು ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿದ್ದು, ನಾಯಿ ಸೇರಿದಂತೆ ಸಾಕು ಪ್ರಾಣಿಗಳ ಮೇಲೆ ದಾಳಿ ನಡೆಸಿತ್ತು. ಗ್ರಾಮಸ್ಥರು ಭಯಭೀತಗೊಂಡಿದ್ದರು.

ಬಳಿಕ ಅರಣ್ಯ ಇಲಾಖೆ ಸಿಬ್ಬಂದಿಗಳು ಇತ್ತೀಚೆಗೆ ಬೋನು ಇರಿಸಿದ್ದರು. ಪರಿಣಾಮ ಸೋಮವಾರ ಮುಂಜಾನೆ ಚಿರತೆ ಬೋನಿಗೆ ಬಿದ್ದಿದೆ. ಚಿರತೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಜಮಾಯಿಸಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಯನ್ನು ಕಾಡಿಗೆ ಬಿಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಹಿಂದಿನ ಲೇಖನಮೈಸೂರು: ಯುವಕನ ಮೇಲೆ ಚಿರತೆ ದಾಳಿ
ಮುಂದಿನ ಲೇಖನಇನ್ಲೈನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆ: ಒನ್ ಲ್ಯಾಪ್ ರೇಸ್’ನಲ್ಲಿ ಚಿನ್ನದ ಪದಕ ಗೆದ್ದ ಮೈಸೂರಿನ ಆರವ್ ಕಿರಣ್