ಮನೆ ರಾಜ್ಯ ಆತಂಕಕಾರಿ ಮಟ್ಟದಲ್ಲಿದೆ, ಮೈಸೂರಿನ ಏರ್ ಕ್ವಾಲಿಟಿ..!

ಆತಂಕಕಾರಿ ಮಟ್ಟದಲ್ಲಿದೆ, ಮೈಸೂರಿನ ಏರ್ ಕ್ವಾಲಿಟಿ..!

0

ಮೈಸೂರು : ಬೆಂಗಳೂರಿನ ವಾಯುಗುಣಮಟ್ಟ ಇಂದು ಹದಗೆಟ್ಟ ಸ್ಥಿತಿಯಲ್ಲೇ ಇದೆ. ಆದರೆ ಇದನ್ನೂ ಮೀರಿಸುವಂತೆ ಮೈಸೂರಿನ ಏರ್ ಕ್ವಾಲಿಟಿ ಕುಸಿದಿದ್ದು, ಆತಂಕ ಸೃಷ್ಟಿಸಿದೆ. ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 166ಕ್ಕೆ ತಲುಪಿದೆ.

ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇರುವಾಗಲೇ ಮೈಸೂರಿನ AQI 185 ತಲುಪಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ – ಬೆಂಗಳೂರು –166, ಮಂಗಳೂರು-102, ಮೈಸೂರು –185, ಬೆಳಗಾವಿ – 64, ಕಲಬುರ್ಗಿ-82, ಶಿವಮೊಗ್ಗ – 126, ಬಳ್ಳಾರಿ – 120, ಹುಬ್ಬಳ್ಳಿ- 84, ಉಡುಪಿ –93, ವಿಜಯಪುರ –119..,

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ? – ಉತ್ತಮ- 0-50, ಮಧ್ಯಮ – 50-100, ಕಳಪೆ – 100-150, ಅನಾರೋಗ್ಯಕರ – 150-200, ಗಂಭೀರ – 200 – 300, ಅಪಾಯಕಾರಿ – 300 -500+..,