ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಪ್ರವಾಸಿ: ಕಾಫಿ ಕುಡಿದು ಬರೋವರೆಗೂ ಬಸ್ ಇರುತ್ತೇನಪ್ಪಾ…
ಕಂಡಕ್ಟರ್: ಇರುತ್ತೆ ಸಾರ್.
ಪ್ರವಾಸಿ: ಏನು ಗ್ಯಾರಂಟೆ?
ಕಂಡಕ್ಟ‌ರ್: ಡ್ರೈವರನ್ನು ಕರಕೊಂಡು ಹೋಗಿ ಸಾರ್ ಜೊತೇಲಿ!

Join Our Whatsapp Group

ಗುರುಗಳು: ಮಕ್ಕಳೇ ಇಂದು ನಾನು ಹೇಳುವ ಪಾಠ ತುಂಬ ಮಹತ್ವದ್ದು. ಇದನ್ನು ಎಲ್ಲರೂ ಲಕ್ಷ್ಯ ಕೊಟ್ಟು ಕೇಳಿರಿ.
ಸಂಪತ್: ಕ್ಷಮಿಸಿ ಸಾರ್. ನಾವು ಬಡವರು. ನಮ್ಮ ಹತ್ತಿರ ಲಕ್ಷ ರೂಪಾಯಿ ಇಲ್ಲ ಸರ್.

ಗುರುಗಳು: ಏನಯ್ಯ ಯಾವುದೋ ಒಳ್ಳೆಯ ಕೆಲಸಕ್ಕೆ ಸೇರಿಕೊಂಡಿದ್ದೀಯಂತೆ. ನಿಜವೇ?
ಮಲ್ಲಸರ್ಜ: ಹೌದು ಸ‌ರ್. ಬಿ.ಎಸ್.ಸಿ.ಯಲ್ಲಿ ಇದ್ದೇನೆ.
ಗುರುಗಳು: ಬಿ.ಎಸ್.ಸಿ. ಎಂದರೆ…
ಮಲ್ಲಸರ್ಜ: ಬಾಟಾ ಶೂ ಕಂಪನಿ.