ಮನೆ ಸುದ್ದಿ ಜಾಲ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಎನ್ ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ 

ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಎನ್ ಸಿಸಿ ನೇತೃತ್ವ ವಹಿಸಿದ ಮೈಸೂರು ವಿದ್ಯಾರ್ಥಿನಿ 

0

ಮೈಸೂರು: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ನಡೆದ 73ನೇ ಗಣರಾಜ್ಯೋತ್ಸವದ ಐತಿಹಾಸಿಕ ಪಥ ಸಂಚಲನದಲ್ಲಿ ಎನ್ ಸಿಸಿ ತಂಡದ ನೇತೃತ್ವವನ್ನು ಮೈಸೂರಿನ ವಿದ್ಯಾರ್ಥಿನಿ ವಹಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಮೈಸೂರಿನ ಮಹಾರಾಣಿ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಪ್ರಮೀಳಾ ಕುನ್ವರ್ ನೇತೃತ್ವದ ಎನ್ ಸಿಸಿ ತಂಡ ಪಥಸಂಚಲನದಲ್ಲಿ ಭಾಗಿಯಾಗಿತ್ತು.

ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿರುವ ಪ್ರತಾಪ್ ಸಿಂಗ್ ಮತ್ತು ಪುಷ್ಪಾ ಕುನ್ವರ್ ದಂಪತಿಯ ಪುತ್ರಿಯಾಗಿರುವ ಪ್ರಮಿಳಾ, ಎನ್ ಸಿಸಿ ಸೀನಿಯರ್ ಅಂಡರ್ ಆಫೀಸರ್ ಆಗಿದ್ದಾರೆ.

ಪ್ರಮೀಳಾ ಅವರ ತಂದೆ ಮೈಸೂರು ನಗರದ ಕಾಳಿದಾಸ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡು ಮಗಳನ್ನು ಓದಿಸುತ್ತಿದ್ದಾರೆ. 2018 ದಸರಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎನ್ ಸಿಸಿ ತಂಡದ ನೇತೃತ್ವ ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸಿದ್ದ ಪ್ರಮೀಳಾ ಅವರಿಗೆ 2022ರ ಗಣರಾಜ್ಯೋತ್ಸವ ಪರೇಡ್ನಲ್ಲಿ ಎನ್ ಸಿಸಿ ತಂಡದ ನೇತೃತ್ವ ವಹಿಸಿರುವುದು ಪೋಷಕರಲ್ಲಿ ಸಂತಸವನ್ನುಂಟು ಮಾಡಿದೆ.

ಮೈಸೂರಿನಿಂದ ಒಟ್ಟು 19 ಕೆಡೆಟ್ಗಳಲ್ಲಿ 10 ಯುವಕರು ಮತ್ತು 9 ಯುವತಿಯರು ಕರ್ನಾಟಕ ಮತ್ತು ಗೋವಾ ಎನ್ಸಿಸಿ ಡೈರೆಕ್ಟೊರೇಟ್ ಪಡೆಯನ್ನು ಪ್ರತಿನಿಧಿಸಿದ್ದಾರೆ. ನವದೆಹಲಿಯಲ್ಲಿ ಪ್ರತಿವರ್ಷ ಗಣರಾಜ್ಯೋತ್ಸವ ಕ್ಯಾಂಪ್‌ಗಾಗಿ ಭಾರತದ 17 ಡೈರೆಕ್ಟೊರೇಟ್ಗಳಿಂದ ಕೆಡೆಟ್ಗಳನ್ನು ಆಯ್ಕೆ ಮಾಡಲಾಗುತ್ತದೆ. ಕೊರೊನಾ ಸೋಂಕಿನಿಂದಾಗಿ ಕಳೆದ ವರ್ಷ ಮತ್ತು ಈ ವರ್ಷ ಎನ್ಸಿಸಿ ಕ್ಯಾಂಪ್ ಗೆ ಆಯ್ಕೆ ಮಾಡುವ ಕೆಡೆಟ್‌ಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಪ್ರಸಕ್ತ ವರ್ಷ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟ್‌ನಿಂದ ಒಟ್ಟು 54 ಕೆಡೆಟ್ಗಳನ್ನು ಆಯ್ಕೆ ಮಾಡಲಾಗಿದ್ದು, 2 ತಿಂಗಳ ಹಿಂದೆಯೇ ನವದೆಹಲಿ ತಲುಪಿದ್ದರು.

ಹಿಂದಿನ ಲೇಖನ75 ಸರ್ಕಾರಿ ಶಾಲೆಗಳನ್ನು ‘ನೇತಾಜಿ ಅಮೃತ ಶಾಲೆ’ಗಳೆಂದು ಘೋಷಿಸಿದ ಸರ್ಕಾರ
ಮುಂದಿನ ಲೇಖನಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ:ವಿಪಕ್ಷ ನಾಯಕ ಸಿದ್ದರಾಮಯ್ಯ