ವಿವರವಾಗಿ ಅಲ್ಲದಿದ್ದರೂ ಸಂಕ್ಷಿಪ್ತವಾಗಿ ನಮ್ಮ ಶರೀರ ರಚನೆಯನ್ನು ವಿಶೇಷವಾಗಿ ನಮ್ಮ ದೇಹದಲ್ಲಿರುವ ನಾಡಿಗಳು ಮತ್ತು ಚಕ್ರಗಳನ್ನು ನಾವು ಅರಿತುಕೊಳ್ಳಬೇಕು, ನಮ್ಮ ಶರೀರದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುವ 72,000 ನಾಡಿಗಳಿವೆ. ಅವು ದೇಹದಲ್ಲಿ ಗಾಳಿ, ನೀರು, ರಕ್ತ ಮತ್ತು ಪಾಚಕ ವಸ್ತುಗಳು ದೇಹದ ವಿವಿಧ ಭಾಗಗಳಿಗೆ ತಲುಪಿಸುವ ಕಾಲ್ವೆಗಳು. (ಒಟ್ಟಿನಲ್ಲಿ ಪ್ರಾಣಶಕ್ತಿ ವಾಹಕಗಳು ಎನ್ನಬಹುದು) ನಮ್ಮ ಹೃದಯ ಮತ್ತು ಹೊಕ್ಕಳಿನ ಪ್ರದೇಶದಿಂದ ಹೊರಟು ದೇಹದ ತುಂಬಾ ಪಸರಿಸುತ್ತದೆ.
1. ಅವುಗಳಲ್ಲಿ ಅತಿ ಮುಖ್ಯವಾದದ್ದು ಹೊಕ್ಕಳಿನಿಂದ ಹೊರಡುವ ಸುಷುಮ್ನಾ ನಾಡಿ ಇದು ಬೆನ್ನುಪ್ರಿಯ ಮಧ್ಯ ಭಾಗದ ಮೂಲಕ ತಲೆಯ ಮೇಲ್ಬಾಗಕ್ಕೆ ಹೋಗುತ್ತಿದ್ದು, ಅದು ಅಗ್ನಿಸತ್ವ ಮತ್ತು ಪ್ರಭೆಯ ಮುಖ್ಯ ವಾಹಕವಾಗಿದೆ.
2. ಎಡ ನಾಡಿಯು ಅದರಲ್ಲಿ ಅಂದರೆ ಬೆನ್ನುಹುರಿಯ ಎಡಬಾಗದಿಂದ ಹೊರಟು ಎಡನಾಸಿಕಕ್ಕೆ ಹೋಗುತ್ತಿದ್ದು ಶೀತ (ಚಂದ್ರ) ಅಥವಾ ತಮಸ್ (ಜಡತ್ವ)ಗಳ ವಾಹಕವಾಗಿದೆ.
3. ಪಿಂಗಳ ನಾಡಿಯು ಬೆನ್ನುಹುರಿಯ ಬಲಭಾಗದಿಂದ ಹೊರಟು ಬಲನಸಿಕಕ್ಕೆ ಹೋಗುತ್ತಿದ್ದು ಉಷ್ಣ (ಸೂರ್ಯ) ಮತ್ತು ರಜಸ್ (ಚಟುವಟಿಕೆ)ಗಳ ವಾಹಕವಾಗಿದೆ.
ಇನ್ನು ಈ ಚಕ್ರ ಎಂದರೆ ಇವು ಶಕ್ತಿ ಕೇಂದ್ರಗಳು. ರಚನೆಯಲ್ಲಿ ಗುಂಡಗೆ ವೃತ್ತಾಕಾರದಲ್ಲಿರುವ ಇವುಗಳು ಸಂಬಂಧಪಟ್ಟ ನಾಡಿಗಳ ಮೂಲಕ ದೇಹದಲ್ಲಿ ನಡೆಯುವ ವಿವಿಧಕಾರ್ಯಗಳ ಸಂಪೂರ್ಣ ನಿರ್ವಹಣೆ ಮಾಡುತ್ತದೆ. ಇವುಗಳಲ್ಲಿ ಏಳು ಚಕ್ಕುಗಳ ಪ್ರಮುಖವಾಗಿದ್ದು, (ಹಲವಾರು ಉಪಚಕ್ರ ಗಳು ಇವೆ. ಅಷ್ಟೇ ಅಲ್ಲ ಹಾಗೆ ನೋಡಿದರೆ ಉಪಚಕ್ರಗಳು, ಇನ್ನೂ ಚಿಕ್ಕ ಚಕ್ರಗಳು ಅಂತಿಮವಾಗಿ ಪ್ರತಿಯೊಂದು ಜೀವಕೋಶವು ಒಂದು ಶಕ್ತಿ ಕೇಂದ್ರವೇ ಅಂದರೆ ಚಕ್ರವೇ ಆಗಿದೆ. ಎಂದರೆ ಹೆಚ್ಚು ಸಮಂಜಸವಾಗುತ್ತದೆ ಇರಲಿ) ಅವುಗಳು ಈ ಕೆಳಗಿನಂತಿವೆ.
1.ಮೂಲಧಾರ ಚಕ್ರ :-
ಇದು ಗುದದ್ವಾರದ ಸಮೀಪದಲ್ಲಿ,ಜನನೇಂದ್ರೀಯ ಮತ್ತು ಗುದದ್ವಾರಗಳ ಮಧ್ಯದಲ್ಲಿದೆ. (ಪೃಥ್ವಿ ತತ್ವದ ಮೇಲೆ ಇದರ ಕಾರ್ಯನಿರ್ವಹಣೆ) ಇದು ಜೀರ್ಣಾಂಗ ಮತ್ತು ಶುದ್ಧೀಕರಣ ಮೂಲವಾಗಿದ್ದು ಇದರಿಂದಲೇ ಆರೋಗ್ಯ ದಕ್ಷತೆ ಕೌಶಲ್ಯ ಗುಣಗಳ ವಿಕಾಸವಾಗುತ್ತದೆ ಮತ್ತು ಶಕ್ತಿಯ ಮುಖ್ಯ ಆಧಾರವೇ ಈ ಮೂಲಾಧಾರ ಚಕ್ರವಾಗಿದೆ
2. ಸ್ವಾದಿಷ್ಟಾನ ಚಕ್ರ :-
ಮೂಲದ್ವಾರ ಚಕ್ರದ ಮೇಲೆ ಕಿಬ್ಬೊಟ್ಟೆಯ ಸಮೀಪದಲ್ಲಿ ಕೆಳಭಾಗದಲ್ಲಿದೆ. (“ನೀರು ಅಥವಾ ಆಪ್” ತತ್ವದ ಮೇಲೆ ಕಾರ್ಯನಿರ್ವಹಣೆ) ಲೈಂಗಿಕ ಅರ್ಥಾತ್ ಸಂತಾನೋತ್ಪತ್ತಿಯ ನಿರ್ವಹಣೆ ಆರೋಗ್ಯ ಬಲ ರೋಗನಿರೋಧಕ ಶಕ್ತಿಗಳ ವೃದ್ಧಿ.
3. ಮಣಿಪೂರ ಚಕ್ರ :-
ಹೊಕ್ಕುಳದ ಮೇಲ್ಭಾಗದಲ್ಲಿದೆ. ʼಬೆಂಕಿ ಅಥವಾ ಸೂರ್ಯʼ ತತ್ವದ ಮೇಲೆ ಕಾರ್ಯನಿರ್ವಹಣೆ. ಜಠರಂಗಗಳ ನಿರ್ವಹಣೆ ಮತ್ತು ಆಯುರ್ವೃದ್ದಿ.
4. ಅನಾಹತ ಚಕ್ರ :-
ಹೃದಯದ ಭಾಗದಲ್ಲಿದೆ. (ʼವಾಯುʼ ತತ್ವದ ಮೇಲೆ ಕಾರ್ಯನಿರ್ವಹಣೆ) ಬೌದ್ಧಿಕ ಮತ್ತು ಆಧ್ಯಾತ್ಮಿಕ ಎರಡು ಕಾರ್ಯಗಳ ನಿವಾರಣೆ ಶಕ್ತಿಜ್ಞಾನಿಗಳ ಅಭಿವೃದ್ಧಿ ಮತ್ತು ಇದು ಸ್ಪರ್ಶಗುಣ ಸಂವಾದಿಯೂ ಆಗಿದೆ.
5. ವಿಶುದ್ಧಿ ಚಕ್ರ :-
ಕಂಠ ಭಾಗದಲ್ಲಿದೆ. (ಆಕಾಶ ತತ್ವದ ಮೇಲೆ ಕಾರ್ಯನಿರ್ವಹಣೆ) ಇದು ವಿಜ್ಞಾನಮಯ ಕೋಶದ ಪ್ರತಿನಿಧಿಯಾಗಿದ್ದು, ಬುದ್ಧಿ ಮಟ್ಟದ ಉನ್ನತಿಯಾಗುತ್ತದೆ. ಮಾತಿನ ನಿಖರತೆ ವೃದ್ಧಿ ಮತ್ತು ಸಮರ್ಪಕ ಥೈರಾಯಿಡ್ ನಿರ್ವಹಣೆಯಾಗುವುದು.
6. ಆಜ್ಙಾ ಚಕ್ರ :-
ಭೂಮಧ್ಯದಲ್ಲಿದೆ. ಇದು ಎರಡು ಕಣ್ಣು ಹುಬ್ಬುಗಳ ನಡುವಿನ ತಿಲಕ ಅಥವಾ ಕುಂಕುಮ ಇರುವ ಸ್ಥಳ. (ʼಮನಸ್ʼ ತತ್ವದ ಮೇಲೆ ಕಾರ್ಯ ನಿರ್ವಹಣೆ) ಆನಂದಮಯ ಕೋಶದ ಪ್ರತಿನಿಧಿಯಾಗಿದ್ದು ಸಂಪೂರ್ಣ ದೇಹದ ಕಾರ್ಯಗಳ ಹತೋಟಿ ಮತ್ತು ಆಧ್ಯಾತ್ಮಿಕ ಗುಣಮಟ್ಟದ ಹೆಚ್ಚಳವಾಗುತ್ತದೆ.
7. ಸಹಸ್ರಾರ ಚಕ್ರ :-
ತಲೆಯ ಮೇಲ್ಭಾಗದಲ್ಲಿದೆ. ಹೆಸರೇ ಸೂಚಿಸುವಂತೆ ಸಾಹಸ್ರ ದಳಗಳನ್ನು ಒಳಗೊಂಡ, ಇದು ಸುಷುಮ್ನಾ ಅಥವಾ ಬ್ರಹ್ಮ ನಾಡಿಯ ತುತ್ತ- ತುದಿಯಲ್ಲಿದೆಯೆಂದು ಹೇಳಲಾಗುತ್ತದೆ.(ಇದು ಪರಬ್ರಹ್ಮನ ಆವಾಸಸ್ಥಾನ ಎನ್ನುತ್ತಾರೆ) ಬ್ರಹ್ಮರಂದ್ರವು ಇದರಲ್ಲಿಯೇ ಇದ್ದು, ಇದರ ಮೂಲಕವೇ ದೈವಿಶಕ್ತಿ ಅಥವಾ (cosmic energy-ಕಾಸ್ಮಿಕ್ ಎನರ್ಜಿ) ನಮ್ಮ ದೇಹವನ್ನು ಪ್ರವೇಶಿಸುತ್ತದೆಯೆಂದು ಹೇಳಲಾಗುತ್ತದೆ!!
ಪಂಚಪ್ರಾಣಗಳು : ಊಸಿರಿನ ಮೂಲಕ ನಮ್ಮ ದೇಹವನ್ನು ಪ್ರವೇಶಿಸುವ ಪ್ರಾಣಾಯಾಮವೂ, ಐದು ವಿಭಾಗಗಳಲ್ಲಿ, ಐದು ಮುಖ್ಯ ಪ್ರಾಣಗಳಾಗಿ ಹಂಚಿಹೋಗಿ, (ಅದುವೇ ಸಾಂಕೇತಿಕವಾಗಿ ಪಂಚಮುಖಿ ಹನುಮಾನನನ್ನು ನಮ್ಮೊಳಗೆ ಪ್ರತಿನಿಧಿಸುತ್ತದೆ) ಕೆಳಗೆ ವಿವರಿಸಿದಂತೆ ಶರೀರದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಅದೇ ರೀತಿಯಲ್ಲಿ ಐದು ಉಪ-ಪ್ರಾಣಗಳಾಗಿ ಸಹಾಯಕ ಘಟಕಗಳಲ್ಲಿಯೂ ಅದು ಕಾರ್ಯನಿರ್ವಹಿಸುತ್ತದೆ.
1. ಪ್ರಾಣವಾಯು :(ಅಧಿದೇವತೆ-ಹನುಮಾನ್) ಇದರ ಸ್ಥಳ ಹೃದಯ ಈ ವಾಯು ದೇಹದ ಮುಂಡ ಭಾಗದಲ್ಲಿ ಚಲಿಸುತ್ತಾ ಉಸಿರಾಟವನ್ನು ನಿಯಂತ್ರಿಸುತ್ತದೆ, ಉಸಿರಿನ ಮೂಲಕ ಪ್ರಕೃತಿಯ ಚೈತನ್ಯ ಶಕ್ತಿಯನ್ನು ಹೀರುತ್ತದೆ.
2. ಅಪಾನವಾಯು : (ಅಧಿದೇವತೆ-ವರಾಹ) ಸ್ಥಳ ಕೆಳ ಹೊಟ್ಟೆ ಮೂಲಾಧಾರದಲ್ಲಿ ಸಂಚರಿಸುತ್ತಾ ಮಲ,ಮೂತ್ರ ಸಂಬಂಧಿ ಕಶ್ಮಾಲಗಳನ್ನು ಹೊರ ಹಾಕುತ್ತದೆ
3. ಸಮಾನವಾಯು : (ಅಧಿದೇವತೆ-ನಾರಸಿಂಹ) ಸ್ಥಳ ನಾಭಿ. ಇದು ಜಠರಾಗ್ನಿಯನ್ನು ಹೊತ್ತಿಸಿ ಜೀರ್ಣಶಕ್ತಿಯನ್ನು ಪ್ರಚೋದಿಸಿ ಒಟ್ಟು ಶರೀರ ಚಲನವಲನಗಳನ್ನು ಹದಗೊಳಿಸಿ ಹೊಟ್ಟೆ ಅಂಗವಿಕಲ ಸಮತೋಲವನ್ನು ಕಾಪಾಡುತ್ತದೆ.
4. ಉದಾನ ವಾಯು : (ಅಧಿದೇವತೆ-ಗರುಡ) ಸ್ಥಳ ಕಂಠ (ವಿಶುದ್ಧ). ಈ ಪ್ರಾಣವಾಯು ಗಂಟಲಿನ ಪ್ರದೇಶದಲ್ಲಿ ಸಂಚರಿಸುತ್ತ ಧ್ವನಿಯನ್ನು ನಿಯಂತ್ರಿಸಿ ಉಸಿರಾಟ ಮತ್ತು ಆಹಾರ ಸೇವನೆಯ ಕಾರ್ಯಕ್ಕೆ ಸಹಾಯಮಾಡುತ್ತದೆ.
5. ವ್ಯಾನ ವಾಯು : (ಅದಿದೇವತೆ-ಕುದುರೆ) ಸ್ಥಳ ಶರೀರದಲ್ಲೇಡೆ ಅಂದರೆ 72,000 ನಾಡಿಗಳು ನಮ್ಮ ಶರೀರದಲ್ಲಿದೆ. ಈ ವಾಯು ಶರೀರದಲ್ಲಿಡೆ ಸಂಚರಿಸುತ್ತ, ಆಹಾರ ಮತ್ತು ಗಾಳಿಗಳಿಂದ ಸಂಚಯನಗೊಂಡು ಶಕ್ತಿ ಚೇತನ್ಯಗಳು ರಕ್ತ ನಾಳಗಳ ಮತ್ತು ನರಗಳ ಮೂಲಕ ಇನ್ನುಳಿದ ಮಹತ್ವದ ಚಕ್ರಗಳಾದ ಸ್ವಾದಿಷ್ಠಾನ ಚಕ್ರ (ಪ್ರಚಂಡ ಶಕ್ತಿಯ ಆವಾಸಸ್ಥಾನವಾದ ಇದು ಮೂತ್ರಪಿಂಡಗಳ ಸಮೀಪದಲ್ಲಿದ್ದು ಸೌರಜಾಲದ ಕಾರ್ಯ ನಿರ್ವಹಣೆ ಮಾಡುವುದು) ಆಜ್ಞಾಚಕ್ರ (ಇದು ಎರಡು ಹುಬ್ಬಗಳ ನಡುವೆ ಭೂಮಧ್ಯದಲ್ಲಿದ್ದು ಮೆದುಳಿನಲ್ಲಿರುವ ಪಿಟ್ಯೂರಿಯ ಗ್ರಂಥಿಯ ಕಾರ್ಯನಿರ್ವಹಣೆಯನ್ನು ಜೊತೆಗೆ ಮನಸ್ಸನ್ನು ಮತ್ತು ದೇಹದ ಕೆಳಭಾಗದ ಉಳಿದ ಎಲ್ಲಾ ಚಕ್ರಗಳನ್ನು, ಇದು ನಿಯಂತ್ರಿಸುವುದು) ಸಹಸ್ರಾರ ಚಕ್ರ (ಇದು ಮೆದುಳಿನ ಭಾಗದಲ್ಲಿದ್ದು ಇಡೀ ದೇಹದ ದೈಹಿಕ, ಮಾನಸಿಕ ನಿಯಂತ್ರಣ ಇದರ ಕಾರ್ಯಜೊತೆಗೆ ದೈವಿ ಶಕ್ತಿ ಮತ್ತು ಆತ್ಮ ಪರಮಾತ್ಮರ ನಡುವಿನ ಸಂಪರ್ಕ ಸೇತುವೆ ಆಗಿ ಅಥವಾ ಕೊಂಡಿಯಾಗಿಯೂ ಇದರ ಕಾರ್ಯ ತುಂಬಾ ಮಹತ್ವದ್ದು) ಇತ್ಯಾದಿಗಳನ್ನು ಸೇರಿಸಿ ಇಡೀ ದೇಹಕ್ಕೆ ವಿತರಿಸುತ್ತದೆ.
ಐದು ಉಪಪ್ರಾಣಗಳು (ಸಹಾಯಕ ಘಟಕಗಳು)
1. ನಾಗ : ಇದರಿಂದ ತೇಗು ಹೊರಬಂದು ಹೊಟ್ಟೆಯಭಾರ ಕಡಿಮೆಯಾಗುತ್ತದೆ.
2. ಕೂರ್ಮ : ಇದು ಕಣ್ರೆಪ್ಪೆಗಳ ಚಲನೆಯನ್ನು ಕಣ್ಣೊಳಗೆ ಸೇರಬಹುದಾದ ಕಶ್ಮಾಲಗಳನ್ನು ತಡೆದು ಆಕುಂಚನ-ಪ್ರಸರಣದೊಂದಿಗೆ ಕಣ್ಣಿನೊಳಗೆ ಸೇರುವ ಬೆಳಕಿನ ನಿಯಂತ್ರಣ ಮಾಡುವುದು.
3. ಕ್ರಕರ : ಇದು ಸೀನು ಅಥವಾ ಕೆಮ್ಮಿಗೆ ಮೂಲವಾಗಿದ್ದು ಗಂಟಲು ನೋವುಗಳಿಗೆ ತಡೆಯುತ್ತದೆ.
4. ದೇವದತ್ತ : ಇದು ಆಕಳಿಕೆಯ ಮೂಲಕ ನಿದ್ರೆಯನ್ನು ಪ್ರಚೋದಿಸುತ್ತದೆ.
5. ಧನಂಜಯ : ಇದು ಹೊಟ್ಟೆಯೊಳಗೆ ಶೇಷ್ಮವನ್ನು ತಯಾರಿಸುತ್ತದೆ. (ಹಲವು ಬಾರಿ ಅದು ಕರಗಿಹೋಗುತ್ತದೆ. ಪ್ರಾಣವಿಸರ್ಜನೆಯ ನಂತರ ದೇಹ ಊದಿಕೊಂಡು ದಪ್ಪವಾಗುತ್ತದೆ, ಅದು ಕರಗದೆ ಅಲ್ಲಿಯೇ ಉಳಿದುಕೊಳ್ಳುವುದರಿಂದ) ವಾತ, ಪಿತ್ತ, ಕಫ ಎಂಬ ದೇಹದ ಮೂರು ಮುಖ್ಯ ದೋಷಗಳಲ್ಲೊಂದು ವಾತಾವೂ ಕೂಡ (ಅಂದರೆ ಅನಾರೋಗ್ಯದಿಂದ ಮತ್ತು ಇದು ಅಯಾಚಿತವಾದದ್ದು ಕೂಡ) ಇನ್ನೊಂದು ರೀತಿಯ ಪ್ರಾಣ ಎನ್ನುತ್ತದೆ ಆಯುರ್ವೇದ.