ಮಂಡ್ಯ, ಸೆ.12: ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ನಿನ್ನೆ(ಸೆ.11) ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ಮಾಡಿದ್ದರು. ಈ ಹಿನ್ನಲೆ ಪೊಲೀಸ್ ಠಾಣೆ ಎದುರು ಗಣಪತಿ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ಕೂಡ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗಲಭೆ ಸಂಬಂಧ 150 ಜನರ ವಿರುದ್ಧ ಕರ್ತವ್ಯ ನಿರತ ಪಿಎಸ್ಐ ಬಿ.ಜೆ.ರವಿ ಅವರ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಘಟನೆ ಹಿನ್ನಲೆ BNS 2023ರ ಅಡಿಯಲ್ಲಿ ಪ್ರಕರಣವನ್ನು ದಾಖಲು ಮಾಡಿರುವ ಪೊಲೀಸರು, 109, 115(2), 118(1), 121(1), 132, 189(2), 189(3), 189(4), 190,191(1), 191(2), 191(3), 324(4),324(5),326(F),326(G) BNS ಅಡಿಯಲ್ಲಿ ಕರ್ತವ್ಯ ನಿರತ ಪಿಎಸ್ಐ ಬಿ.ಜೆ.ರವಿ ದೂರು ಆಧರಿಸಿ ಕೇಸ್ ದಾಖಲು ಮಾಡಲಾಗಿದೆ. ಬದ್ರಿಕೊಪ್ಪಲು ಗ್ರಾಮದ ಕಿರಣ, ಭರತ ಬಿನ್ ಪುಟ್ಟರಾಜು, ಅಭಿಷೇಕ್, ಗೋವಿಂದ, ಅರುಣ, ಸಂಜಯ್, ಕೀರ್ತಂ ಬಿನ್ ಮೂರ್ತ, ಪೃಥ್ವಿ, ಹೇಮಂತ ಬಿನ್ ಲೇಟ್ ಕೇಶವಶೆಟ್ಟಿ, ಚಂದ್ರಶೇಖರ ಬಿನ್ ಲೇಟ್ ಸುಬ್ಬಾಶೆಟ್ಟಿ, ಶ್ರೀನಿವಾಸ್ ಬಿನ್ ಲೇಟ್ ಸುಬ್ರಾಶೆಟ್ಟಿ, ಶಿವು ಬಿನ್ ಕುಮಾರ, ರಾಮಚಂದ್ರ ಬಿನ್ ನಂಜಪ್ಪ, ಹರೀಶ ಬಿನ್ ಕುಮಾರ್, ದಿವಾಕರ ಬಿನ್ ಲೇಟ್ ಅಂಜನಮೂತರ್ ನಾಗಮಂಗಲ ಟೌನ್ನ ಮೇಗಲಕೇರಿಯ ವಿನಯ್ ಅಲಿಯಾಸ್ ಡಾಗ್ ವಿನಿ, ಮಾರಿಗುಡಿ ಸರ್ಕಲ ಪ್ರವೀಣ್ ಕುಮಾರ್, ಕೆ.ಎಸ್.ಟಿ ದೇವಸ್ಥಾನದ ಹಿಂಭಾಗದ ಮನೆಯ ಸುನೀಲ್, ಮೇಗಲಕೇರಿ ಸತೀಶ ಅಲಿಯಾಸ್ ಹಂಡೆ ಮತ್ತು ಇತರೆ 100 ರಿಂದ 150 ಜನರು ಪಟಾಕಿಯನ್ನು ಸಿಡಿಸಿ ಡ್ಯಾನ್ಸ್ ಮಾಡಿಕೊಂಡು ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ.
ಸುಮಾರು 10 ನಿಮಿಷಗಳ ಕಾಲ ಅಲ್ಲಿಯೇ ಡ್ಯಾನ್ಸ್ ಮಾಡುತ್ತಿದ್ದು, ಸ್ಥಳದಲ್ಲಿ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪಿಎಸ್ಐ B.J.ರವಿ ಸೇರಿ ಇತರ ಪೊಲೀಸರು ಮೆರವಣಿಗೆಯನ್ನು ಮಸೀದಿಯಿಂದ ಮುಂದಕ್ಕೆ ಹೋಗಲು ಹೇಳುತ್ತಾರೆ. ಮಸೀದಿ ಪಕ್ಕದಲ್ಲಿ ಇದ್ದಂತಹ ಮುಸ್ಲಿಂ ಕೋಮಿನವರಾದ ಇರ್ಷಾದ್ ಪಾಷ, ಇಮ್ರಾನ್ ಪಾಷ, ಸನ್ ಬಿನ್ ಮುನೀರ್ ಅಹಮದ್ ಇದ್ರೀಷ್ ಪಾಷ, ಫಾಜಿಲ್ ಖಾನ್, ತೌಫೀಕ್ ಪಾಷ @ ಜಮ್ಮ ಬಿನ್ ಜಮೂನ್, ಸಯೀದ್ ಪಾಷ ಬಿನ್ ಗೌಸ್ ಪಾಷ, ಸಾದತ್ ಪಾಷ @ ಇಮಾದ್ ಪಾಷ, ಮೊಹಮ್ಮದ್ ಆಸೀಫ್ @ ಆಸೀಫ್ ಪಾಷ, ಮುದಾಸೀರ್ ಪಾಷ, ನದೀಮ್ ಪಾಷ ಬಿನ್ ಸೈಯದ್ ಪಾಷ, ವಾಸೀಂ ಉಲ್ಲಾ, ಪಾಪ, ಸದ್ದಾಂ ಪಾಷ ಬಿನ್ ಲೇಟ್ ಗೌಸ್ ಪಾಷ, ಅಮೀರುಲಾ ಬಿನ್ ಜಿಯಾವುಲ್ಲಾ, ಕಲೀಂ ಉಲಾ ಬಿನ್ ಜಿಯಾವುಲಾ, ಮಹಮದ್ ಇರ್ಫಾನ್ ಬಿನ್ ಮಕ್ಯೂಲ್ ಅಹಮದ್, ನಯಾಜ್ ಆಹಮದ್ ಬಿನ್ ಮಹಮದ್ ಗೌಸ್, ಮಹಮದ್ ಕ್ರೈಫ್ ಬಿನ್ ಮುನಿರ್ ಅಹಮದ್, ಸಲ್ಮಾನ್ ಬಿನ್ ಶಫೀವುಲಾ ಖಾನ್, ನವೀದ್ ಪಾಷ ಬಿನ್ ಲೇಟ್ ನಜೀರ್ ಅಹಮದ್, ಯೂಸಫ್ ಬಿನ್ ಲೇಟ್ ಹೈದರ್, ಅಫೋಜ್ ಬಿನ್ ಅಕ್ರಂಪಾಷ ಬಿನ್ ಲೇಟ್ ಆಲಿಜಾನ್, ಜಾಫರ್ ಬಿನ್ ಮಹಮದ್ ಷರೀಪ್, ಸಿದ್ದಿಕ್ ಪಾಷ ಬಿನ್ ಲೇಟ್ ಖಲೀಲ್, ತೌಸೀಫ್ ಉಲ್ಲಾಖಾನ್ ಬಿನ್ ಲೇಟ್ ಅಪ್ರೋಜ್ ಉಲಾ ಖಾನ್, ಸುಹೇಲ್ ಆಹಮದ್ ಬಿನ್ ಬಾಷ, ಮುಜಾಮಿಲ್ ಪಾಷ ಬಿನ್ ಮುಜಾಹಿದ್ ಪಾಷ, ಏಜಾಜ್ ಪಾಷ ಬಿನ್ ಲೇಟ್ ಸನಾವುಲಾ.., ಆಯನ್ ಬಿನ್ ಲೇಟ್ ಅಕ್ರಂ ಪಾಷ, ತಂಜೀಂ ಪಾಷ ಬಿನ್ ಲೇಟ್ ರೋಜ್ ಪಾಷ ಇತರೆ 100 ರಿಂದ 150 ಜನರು ಏಕಾಏಕಿ ಅಕ್ರಮವಾಗಿ ಗುಂಪುಕಟ್ಟಿಕೊಂಡು ಗಣೇಶ ಮೆರವಣಿಗೆಯಲ್ಲಿದ್ದವರು ಕೂಗುತ್ತಿದ್ದ ಜೈಶ್ರೀರಾಮ್ ಘೋಷಣೆಗೆ ಪ್ರತಿಯಾಗಿ ಅಲಾಹ್ ಆಕ್ಬರ್ ಎಂಬುದಾಗಿ ಘೋಷಣೆ ಕೂಗುತ್ತಿದಾಗ ನಾನು ಮತ್ತು ನಮ್ಮ ಇಲಾಖಾ ಸಿಬ್ಬಂದಿಯವರು ಎರಡು ಕೋಮಿನವರಿಗೆ ಸಮಾಧಾನ ಮಾಡುತ್ತಿದ್ದಾಗ ಎರಡು ಕೋಮಿನವರು ಪರಸ್ಪರ ಕೈಕೈ ಮಿಲಾಯಿಸಿದರಿಂದ ಘರ್ಷಣೆ ಉಂಟಾಗಿ ಎರಡು ಕೋಮಿನವರು ಪರಸ್ಪರ ಕಲ್ಲು ತೂರಾಟ ನಡೆಸಿದರು ಎಂದು ದಾಖಲಿಸಲಾಗಿದೆ.
ನಡೆದದ್ದೇನು ?
ಬದರಿಕೊಪ್ಪಲಿನಲ್ಲಿ ನಿನ್ನೆ ಮಧ್ಯಾಹ್ನ 1.30ಕ್ಕೆ ಗಣೇಶ ವಿಸರ್ಜಣೆ ಕಾರ್ಯ ಪ್ರಾರಂಭವಾಗುತ್ತದೆ. ನಂತರ ಸಂಜೆ 7.30ಕ್ಕೆ ಮಸೀದಿ ಹತ್ತಿರ ಬಂದ 80 ರಿಂದ 90 ಜನ ಯುವಕರ ಗುಂಪು ಡ್ಯಾನ್ಸ್, ಪಟಾಕಿಯನ್ನು ಹೊಡೆದು ಘೋಷಣೆ ಕೂಗಿದ್ದರು. ಡ್ಯಾನ್ಸ್ ಘೋಷಣೆ ಕೂಗುತ್ತಿದ್ದಂತೆ ಮಸೀದಿ ಕಡೆಯಿಂದ 40ಕ್ಕೂ ಹೆಚ್ಚು ಯುವಕರು ಸೇರಿಕೊಳ್ಳುತ್ತಾರೆ. ಬಳಿಕ ಕಲ್ಲೆಸೆತವಾಗುತ್ತದೆ. ಸರಿಯಾಗಿ 7.45ಕ್ಕೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಲಾಠಿಚಾರ್ಜ್ ಶುರುಮಾಡಿ, ಬಲವಂತವಾಗಿ ಪೊಲೀಸರು ಗಣೇಶನ ಮೆರವಣೆಗೆಯನ್ನು ಮುಂದಕ್ಕೆ ಸಾಗಿಸುತ್ತಾರೆ.
ನಂತರ 200 ಮೀಟರ್ ದೂರದಲ್ಲಿರುವ ಪೊಲೀಸ್ ಠಾಣೆಗೆ 7.55ಕ್ಕೆ ಯುವಕರು ಜಮಾವಣೆವಾಗುತ್ತಾರೆ. ಫೋನ್ ಕಳೆದು ಹೋಯಿತು, ಪೊಲೀಸರು ನಮಗೆ ತಳ್ಳಿ ಗಾಯ ಆಗಿದೆ ಎಂದು ಪ್ರತಿಭಟನೆಗೆ ಮುಂದಾಗುತ್ತಾರೆ. 8.30ರ ತನಕ ಪ್ರತಿಭಟನೆಯನ್ನು ಮಾಡುತ್ತಿರುತ್ತಾರೆ. ನಂತರ ಯುವಕರ ಗುಂಪುಗಳು ಎರಡು ಕಡೆಯವರು ಫೋನ್ ಮಾಡಿ ಇಬ್ಬರ ಕಡೆಯವರನ್ನ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಠಾಣೆ ಎದುರು ಸೇರಿಸುತ್ತಾರೆ. ಬಳಿಕ ಘೋಷಣೆಗಳು, ಕಲ್ಲು ತೂರಾಟ ಶುರುವಾಗುತ್ತದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಾರೆ. ಸ್ವಲ್ಪ ಸಮಯದ ನಂತರ ಬೈಕ್ ಟೈಯರ್ಗೆ ಎರಡು ಕಡೆಗಳಿಂದ ಬೆಂಕಿ ಹಚ್ಚಲು ಪ್ರಾರಂಭವಾಗುತ್ತದೆ.














