ರಾಮನಗರ: ಇಂದು ಚನ್ನಪಟ್ಟಣ ತಾಲ್ಲೂಕಿನ ಗುಡ್ಡೆತಿಮ್ಮಸಂದ್ರ ಗ್ರಾಮದಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಬಮೂಲ್ ನಿರ್ದೇಶಕರಾದ ಹೆಚ್. ಸಿ. ಜಯಮುತ್ತು ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳಾದ ಜೀತೇಂದ್ರ, ವಿಸ್ತರಣಾಧಿಕಾರಿಗಳಾದ ಆನಂದ್, ಶ್ರೀಧರ್, ಗುಡ್ಡೆತಿಮ್ಮಸಂದ್ರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಶಂಕರಪ್ಪ, ಉಪಾಧ್ಯಕ್ಷರಾದ ರಾಜೇಗೌಡ ಮತ್ತು ಆಡಳಿತ ಮಂಡಳಿಯ ನಿರ್ದೇಶಕರಾದ ಲೋಕೇಶ್ ರವರು ಪುಟ್ಟಸ್ವಾಮಿ, ಶಿವಮ್ಮ, ಕೆಂಪೇಗೌಡ, ಟಿ. ಪಿ. ಲೋಕೇಶ್, ಬೋರಯ್ಯ, ಪುಟ್ಟಸ್ವಾಮಿ, ನಿಂಗರಾಜು, ಲತಾ, ಪವಿತ್ರ ಹಾಗೂ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಟಿ. ಎನ್. ಪ್ರದೀಪ್ ಹಾಗೂ ಸಿಬ್ಬಂದಿ ವರ್ಗದವರು ಮತ್ತು ಗುಡ್ಡೆತಿಮ್ಮಸಂದ್ರ ಗ್ರಾಮಸ್ಥರು ಹಾಜರಿದ್ದರು.
