ಮನೆ ಜ್ಯೋತಿಷ್ಯ ಪ್ರಥಮ ಋತುಮತಿಯಾದ ನಕ್ಷತ್ರಗಳ ಫಲವು

ಪ್ರಥಮ ಋತುಮತಿಯಾದ ನಕ್ಷತ್ರಗಳ ಫಲವು

0

 ಅರ್ಥ : ಸ್ತ್ರೀಗಳು ಶ್ರೀ ನಕ್ಷತ್ರದಲ್ಲಿ ಪ್ರಥಮ ಋತುಮತಿಯಾದವಳು ಸೌಭಾಗ್ಯವತಿಯೂ, ಪುತ್ರ ಸಂಪತ್ತ ನ್ನುಳ್ಳವಳೂ, ಸರ್ವ ಕಾಲಬಿರುಚಿಗಳಲ್ಲಿ ಮರ್ಯಾದೆಯನ್ನು ಹೊಂದಿ ರುವಿಕೆಯೂ ಕುಲಶ್ರೇಷ್ಠಳೂ, ಬಂಧು ಬಳಗದವರಲ್ಲಿ ಮರ್ಯಾದೆ ಯುಳ್ಳಾಕೆಯೂ ಆಗುವಳು.

Join Our Whatsapp Group

 ಭರಣಿ ನಕ್ಷತ್ರದಲ್ಲಿ   ಪುಷ್ಪತ್ತಿಯಾದ ಸ್ತ್ರೀಯರು ಮರಣ ಸದೃಶ ದೃಶ್ಯ ಕಂಟಕವನ್ನು ಹೊಂದಿರುವವಳೂ,  ಪತಿಗೆ ಅನಿಷ್ಟ ತರುವವಳೂ ದುಷ್ಟ ಸ್ವಭಾವದವಳೂ, ಪರರ ಸೇವೆಯಲ್ಲಿ ತೊಡಗುವವಳೂ, ತನ್ನಿಷ್ಟದಂತೆ ನಡೆಯುವವಳಕ ಆಗುತ್ತಾಳೆ.

 ಕೃತಿಕಾ ನಕ್ಷತ್ರದಲ್ಲಿ ಪ್ರಥಮ ಋತುಮತಿಯಾದವಳು ಎಂಟು ವಿಧಗಳಲ್ಲಿ ದಾರಿದ್ರಳೂ ಧನ ಹೀನಳೂ  ದುರಾಚರಣೆಯಲ್ಲಿ ಆಸಕ್ತಳೂ ಆಗಿರುತ್ತಾಳೆ .

 *ರೋಹಿಣಿ ನಕ್ಷತ್ರದ ಋತುಮತಿ ಯಾದವಳು ಮುಂದೆ ಧನ ಧಾನ್ಯ ಸುಖ ಸಮೃದ್ಧಿಯನ್ನು ತರುವಂತವಳೂ, ಪತಿಗೆ ಹಿತವನ್ನು ತರುವಂತವಳೂ, ಪತಿವೃತೆಯೂ  ಆಗುತ್ತಾಳೆ. ಸಂತಾನ ಲಕ್ಷ್ಮಿಯಾಗಿರುವವಳಲ್ಲದೆ ಪತಿಭಕ್ತಿ ಪಾರಾಯಣಗಳು ಆಗುತ್ತಾಳೆ.

 ಮೃಗಶಿರ ನಕ್ಷತ್ರದಲ್ಲಿ ಋತುಮತಿ ಆದವಳು ಪತಿಭಕ್ತಿ ಪಾರಾಯಣಗಳೂ, ಪತಿಯ ಇಚ್ಛೆಯನ್ನು ಅರಿತು ನಡೆಯುವವಳೂ, ಪತಿಯೊಂದಿಗೆ ಕೂಡಿ ನಡೆಯುವವಳೂ ಆಗುತ್ತಾಳೆ. ದಾನ  ಧರ್ಮ ಸತ್ಕಾರಗಳಲ್ಲಿ ಅಭಿಲಾಷೆವುಳ್ಳವಳೂ ಆಗುತ್ತಾಳೆ.

 ಹರಿದ್ರ ನಕ್ಷತ್ರದಲ್ಲಿ ಋತುಮತಿ ಯಾದವಳು ನಿರುಭಾಗ್ಯಳೂ, ಸಿಡಿಕಿನವಳೂ, ಪತಿಯ ಕೂಡ ಕಲಹವನ್ನುಂಟು ಮಾಡುವವಳೂ, ಸೋಮಾರಿಯೂ ಅಲ್ಪಸಂತಾನವುಳ್ಳವಳೂ ಆಗುತ್ತಾಳೆ.

 ಪುನರ್ವಸು ನಕ್ಷತ್ರದಲ್ಲಿ ಪ್ರಪ್ರಥಮ ಪುಷ್ವವತಿಯಾದವರು ಸುಗುಣೆಯೂ ಪತಿವ್ರತಾ ಶಿರೋಮಣಿಯೂ, ಒಳ್ಳೇ ಮಕ್ಕಳನ್ನು ಹೆರುವಾಕೆಯೂ,ಬಂದಧು ಬಳಗದಲ್ಲಿ ಜಾನಾನುರಾಗಿಯೂ, ಎಲ್ಲರಿಗೂ ಬೇಕಾದವಳೂ, ಸತತೋದ್ಯೋಗಿಯೂ  ಆಗುತ್ತಾಳೆ.

 ಪುಷ್ಪ ನಕ್ಷತ್ರದಲ್ಲಿ ಋತುಮತಿ ಯಾದವಳು ಪ್ರತಿರತೆಯು ಪತಿವ್ರತೆಯೂ, ಪತಿಗೆ  ತಕ್ಕ ಸತಿಯಾಗಿ ಅನುಕೂಲ ಸಿಂಧುವಾಗಿ  ಬಂಧು ಬಳಗದವರಿಂದ ಸೈ ಎನಿಸಿಕೊಳ್ಳುವ ಗುಣವತಿಯಾಗುವಲ್ಲದೇ ಆರೋಗ್ಯ ಭಾಗ್ಯಗಳನ್ನು ಪಡೆದ ಲಕ್ಷ್ಮಿ ಕಟಾಕ್ಷಳೂ ಆಗುತ್ತಾಳೆಂಬುದರಲ್ಲಿ ಸಂಶಯವಿಲ್ಲ.

 ಆಶ್ಲೇಷ ನಕ್ಷತ್ರ ಈ ನಕ್ಷತ್ರದಲ್ಲಿ ಪ್ರಥಮ ಪುಷ್ಪವತಿಯಾದವಳು ವೈಶ್ಯಾ ಚಾರಿತ್ರ್ಯ ವುಳ್ಳವಳಾಗುವಳು. ಪತಿ ದ್ರೋಹಿಯು, ದುಷ್ಟ ಮಕ್ಕಳ ಫಲವನ್ನು ಹೊಂದುವಳು. ಸದಾ ರೋಗಿಷ್ಟೇ ದರಿದ್ರಳು, ಆಲಸಿ ಹಾಗೂ ಶೃಂಗಾರ ಪ್ರಿಯಳಾಗುವಳು.  ಬಂಧು ಬಳಗದರಿಂದ ದೂರವಾಗಿರಲು ಇಚ್ಛೆಯುಳ್ಳವಳು  ಆಗುವಳು.

 ಮಘ ನಕ್ಷತ್ರದಲ್ಲಿ ಪುಷ್ಪತ್ತಿ ಯಾದವಳು ಬಂಧು ಬಳಗದವರನ್ನು ದೂಷಿಸಿವಳು, ರೋಗದಿಂದ ಘಾಸಿಗೊಳ್ಳುವವಳು ಆದರೆ ಕಲಾವಿದಳು, ಕಾಲ ಪ್ರಿಯಳು. ಹೆಚ್ಚಾಗಿ ತವರು ಮನೆಯಲ್ಲಿ ಇರಲು ಆಸೆ ಮಾಡುವ ಸ್ವಭಾವದವಳಿದ್ದರೂ ಪತಿಯ ಪ್ರೇಮವನ್ನು ಸಂಪಾದಿಸುವವಳೂ ಆಗುತ್ತಾಳೆ.

 ಹುಬ್ಬ ನಕ್ಷತ್ರ ಪತಿಗೆ ದ್ರೋಹ ಬಗೆಯುವದರಲ್ಲಿ ಹಿಂದೆ ಮುಂದೆ ನೋಡುದವಳು, ಪರರ ಕೆಲಸದಲ್ಲಿ ನಿರತಳೂ ದುಷ್ಟ ಮಕ್ಕಳನ್ನು ಹೊಂದಿ, ಮುಂದೆ ಅವರಿಂದ ಕಷ್ಟಕ್ಕೊಳಗಾಗುವವಳೂ ಆಗುತ್ತಾಳೆ ಹೃದಯ ದುರ್ಬಲಕ್ಕೂ ಕೋಪಿಷ್ಟಳೂ ಆಗುವಳು.

 ಉತ್ತರ ನಕ್ಷತ್ರ  ಈ ನಕ್ಷತ್ರದಲ್ಲಿ ಪ್ರಥಮ ಋತುಮತಿಯಾದವಳು ಮಕ್ಕಳ ಸಂಪತ್ತುಳ್ಳವಳು, ಧರ್ಮ ಪಾರಾಯಣಗಳೂ, ಬಂಧು ಬಳಗದವರಿಂದ ಮುನ್ನಣೆ ಹೊಂದುವವಳೂ, ವಿರೋಧವನ್ನು ಯಾರಲ್ಲಿಯೂ ಬಯಸಿದವಳು ಆಗುತ್ತಾಳೆ. ಆದರೆ ತವರು ಮನೆಯ ಅಭಿಮಾನವುಳ್ಳಾಕೆ.