ಬೆಂಗಳೂರು(Bengaluru): ಪ್ರತಿ ಲೀಟರ್ ನಂದಿನಿ ಹಾಲು ಹಾಗೂ ಮೊಸರಿನ ಬೆಲೆ 2 ರೂ ಏರಿಕೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೆಎಂಎಫ್ ಬಾಲಚಂದ್ರ ಜಾರಕಿಹೊಳಿ, ಕೆಎಂಎಫ್ ನಂದಿನಿ ಹಾಲು ಲೀಟರ್ ಗೆ 2 ರೂಪಾಯಿ ಹೆಚ್ಚಿಸಿದ್ದು, ಮೊಸರು ಒಂದು ಲೀಟರ್ ಗೆ 45ರಿಂದ 47 ರೂಪಾಯಿಗೆ ಏರಿಕೆಯಾಗಿದೆ. ನಂದಿನಿ ಹಾಗೂ ಮೊಸರಿನ ಪರಿಸ್ಕೃತ ದರ ನಾಳೆಯಿಂದಲೇ (ನವೆಂಬರ್ 24) ಜಾರಿಗೆ ಬರಲಿದೆ. ಎಂದಿದ್ದಾರೆ.
ಇಂದು ಬೆಂಗಳೂರಿನಲ್ಲಿ ನಡೆದ ಕೆಎಂಎಫ್ ನಿರ್ದೇಶಕರ ಸಭೆಯಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ. ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಈ ಮೂಲಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ 31ರಿಂದ 32 ರೂಪಾಯಿ ಸಿಗಲಿದೆ. ಹಾಲು ಉತ್ಪಾದಕರಿಗೆ ಪ್ರಸ್ತುತ 29 ರೂಪಾಯಿ ನೀಡಲಾಗುತ್ತಿತ್ತು. ಒಂದೊಂದು ಒಕ್ಕೂಟ ಒಂದೊಂದು ದರ ನಿಗದಿ ಮಾಡಲಾಗಿದೆ. ಹಾಲು ಉತ್ಪಾದಕರಿಗೆ ಸರಾಸರಿ 31ರಿಂದ 32 ರೂಪಾಯಿ ಸಿಗಲಿದೆ ಎಂದು ತಿಳಿಸಿದರು.
ಹಾಲಿನ ದರ ಸಂಬಂಧ ಕಳೆದ 15 ದಿನಗಳಿಂದ ಸರ್ಕಾರ ಹಾಗೂ ಕೆಎಂಎಫ್ ಮಧ್ಯೆ ಹಗ್ಗಜಗ್ಗಾಟ ನಡೆದಿದೆ. ಮೊನ್ನೇ ಅಷ್ಟೇ ಕೆಎಂಎಫ್ ಹಾಲಿನ ದರ ಹೆಚ್ಚಿಸಿತ್ತು. ಆದರೆ ಇದನ್ನು ಸಿಎಂ ಬಸವರಾಜ ಬೊಮ್ಮಾಯಿ ತಡೆಹಿಡಿದಿದ್ದರು. ಇದೀಗ ಮತ್ತೆ ಕೆಎಂಎಫ್ ಸಭೆ ಸೇರಿ ಅಂತಿಮವಾಗಿ ನಂದಿನಿ ಹಲು ಹಾಗೂ ಮೊಸರಿನ ದರ ಹೆಚ್ಚಿಸಿದೆ.
ಹಾಲಿನ ದರದ ಮಾಹಿತಿ
- ನಂದಿನಿ ಟೋನ್ಡ್ ಹಾಲು ಲೀಟರ್ ಗೆ 37ರಿಂದ 39 ರೂ.
- ಹೋಮೋಜಿನೈಸ್ಡ್ ಟೋನ್ಡ್ ಹಾಲು 38ರಿಂದ 40 ರೂ.
- ಹೋಮೋಜಿನೈಸ್ಡ್ ಹಸುವಿನ ಹಾಲು 42ರಿಂದ 44 ರೂ.
- ಕೆಎಂಎಫ್ ನಂದಿನಿ ಸ್ಪೆಷಲ್ ಹಾಲು 43ರಿಂದ 45 ರೂ.
- ಹೋಮೋಜಿನೈಸ್ಡೇ ಸ್ಟ್ಯಾಂಡರ್ಡ್ ಹಾಲು 44ರಿಂದ 46 ರೂ.
- ನಂದಿನಿ ಸಮೃದ್ಧಿ ಹಾಲು 48ರಿಂದ 50 ರೂ.
- ಸಂತೃಪ್ತಿ ಹೋಮೋಜಿನೈಸ್ಡ್ ಹಾಲು 50ರಿಂದ 52 ರೂ. ಹಾಗೂ
- ಮೊಸರು ಒಂದು ಲೀಟರ್ ಗೆ 45ರಿಂದ 47 ರೂಪಾಯಿಗೆ ಏರಿಕೆ ಮಾಡಲಾಗಿದೆ.