ಬೆಂಗಳೂರು: ನಂದಿನಿ ಹಾಲಿನ ಪ್ಯಾಕೆಟ್ಗಳಲ್ಲಿ ಪ್ರಮಾಣ ತುಸು ಹೆಚ್ಚಿಸಿ ದರ ಪರಿಷ್ಕರಣೆ ಮಾಡಿದ್ದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಇದೀಗ ನಂದಿನಿ ಮೊಸರು, ಮಜ್ಜಿಗೆ ಹಾಗೂ ಲಸ್ಸಿಯ ದರ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕೆಲವೆಡೆ ವರದಿಯಾಗಿದೆ. ಆದರೆ ಇದು ಸುಳ್ಳು ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ದರ ಪರಿಷ್ಕರಣೆ ಪ್ರಸ್ತಾವ ಇಲ್ಲ. ಅಂಥ ವದಂತಿಗಳನ್ನು ನಂಬಬಾರದು ಎಂದು ಸಾರ್ವಜನಿಕರಲ್ಲಿ ಕೆಎಂಎಫ್ ವಿನಂತಿ ಮಾಡಿದೆ.
ದರ ಪರಿಷ್ಕರಣೆ ಸಂಬಧಿತ ವದಂತಿಗಳ ಬಗ್ಗೆ ಕೆಎಂಎಫ್ ಮಾರುಕಟ್ಟೆ ಅಧಿಕಾರಿ ರಘುನಂದನ್ ‘ಪ್ರತಿಕ್ರಿಯೆ ನೀಡಿದ್ದು, ಮೊಸರು, ಮಜ್ಜಿಗೆ ಅಥವಾ ಲಸ್ಸಿಯ ದರ ಹೆಚ್ಚಳ ಮಾಡುವ ಯಾವುದೇ ಪ್ರಸ್ತಾವ ಇಲ್ಲ. ವಿನಾ ಕಾರಣ ಸಮಾಜಿಕ ಮಾಧ್ಯಮಗಳಲ್ಲಿ ವದಂತಿ ಹರಡಲಾಗುತ್ತಿದೆ. ಅಂಥ ವದಂತಿಗಳು, ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅವರು ವಿನಂತಿಸಿಕೊಂಡಿದ್ದಾರೆ.