ಮನೆ ರಾಜ್ಯ ನಂಜನಗೂಡು: ಭಾರಿ ಮಳೆಗೆ ಕುಸಿದ ಮನೆ, ಅತಂತ್ರ ಸ್ಥಿತಿಯಲ್ಲಿ ಕುಟುಂಬ

ನಂಜನಗೂಡು: ಭಾರಿ ಮಳೆಗೆ ಕುಸಿದ ಮನೆ, ಅತಂತ್ರ ಸ್ಥಿತಿಯಲ್ಲಿ ಕುಟುಂಬ

0

ನಂಜನಗೂಡು(Nanjangudu): ಶುಕ್ರವಾರ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಕಪ್ಪಸೋಗೆ ಗ್ರಾಮದಲ್ಲಿ ಮನೆಯೊಂದು ಕುಸಿದಿದೆ.

ಗ್ರಾಮದ ಒಂದನೇ ವಾರ್ಡ್ ನ ನಾಯಕ ಸಮುದಾಯದ ಬೀದಿಯಲ್ಲಿನ ದೇವಮ್ಮ ಅವರಿಗೆ ಸೇರಿದ ಮನೆಯ ಬಹುತೇಕ ಭಾಗ ಮಳೆಗೆ ಬಿದ್ದು ಹೋಗಿದ್ದು, ಮನೆ ಸಂಪೂರ್ಣ ಹಾನಿಯಾಗಿದೆ.

ಈ ಕುರಿತು ಮಾತನಾಡಿರುವ ದೇವಮ್ಮ ಅವರ ಪುತ್ರ ಶಿವಕುಮಾರ್, ಭಾರಿ ಮಳೆಗೆ ಶುಕ್ರವಾರ ರಾತ್ರಿ 1ಗಂಟೆ ಸುಮಾರಿಗೆ ಮನೆಯ ಎರಡು ಗೋಡೆಗಳು ಬಿದ್ದಿವೆ. ನಾನು, ತಾಯಿ ದೇವಮ್ಮ, ಅಜ್ಜಿ ಮೂವರು ಮಲಗಿದ್ದೆವು. ಗೋಡೆ ಮನೆಯ ಹೊರಭಾಗಕ್ಕೆ ಕುಸಿದು ಬಿದ್ದಿದ್ದೆ. ಹಾಗಾಗಿ ಅದೃಷ್ಟವಶಾತ್ ನಾವು ಬದುಕುಳಿದೆವು. ಇಲ್ಲದಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಹೆಚ್ಚಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ಮನೆ ಕಳೆದುಕೊಂಡ ಗ್ರಾಮದ ದೇವಮ್ಮ ಅವರು ಕಡು ಬಡವರಾಗಿದ್ದು, ಈಗ ಮನೆ ಇಲ್ಲದೇ ಅತಂತ್ರರಾಗಿದ್ದಾರೆ. ಹಾಗಾಗಿ ತಕ್ಷಣವೇ ಕ್ಷೇತ್ರದ ಶಾಸಕರು ಹಾಗೂ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮನೆ ಮಂಜೂರು ಮಾಡಬೇಕು ಯುವ ಮುಖಂಡ ಮೂರ್ತಿ ರಾಮನಾಯಕ ಒತ್ತಾಯಿಸಿದ್ದಾರೆ.

ಮಳೆ ಬಂದ ಸಂದರ್ಭಗಳಲ್ಲಿ ಮನೆಯೊಳಗೆ ಮಳೆ ನೀರು ನುಗ್ಗುತ್ತಿತ್ತು. ಆ ಸಂದರ್ಭದಲ್ಲಿ ಮಲಗಲು ತೊಂದರೆಯಾಗುತ್ತಿತ್ತು. ಈ ಕುರಿತು ಗ್ರಾಮದ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಮನೆ ನಿರ್ಮಿಸಿಕೊಡಲಿಲ್ಲ ಎಂದು ದೇವಮ್ಮ ಬೇಸರ ವ್ಯಕಪಡಿಸಿದರು.

ಹಿಂದಿನ ಲೇಖನಸೋನಾಲಿ ಪೋಗಾಟ್ ಸಾವು: ರೆಸ್ಟೊರೆಂಟ್ ಮಾಲೀಕ, ಶಂಕಿತ ಡ್ರಗ್ ಸಾಗಣೆದಾರ ಬಂಧನ
ಮುಂದಿನ ಲೇಖನಭ್ರಷ್ಟಚಾರ ತಡೆಗಟ್ಟದಿದ್ದರೆ ರಾಜ್ಯಾದ್ಯಂತ ಹೋರಾಟ: ಕೊಪ್ಪಳ ಜಿಲ್ಲಾ ಗುತ್ತಿಗೆದಾರರ ಸಂಘ