ಮನೆ ಅಪರಾಧ ನಂಜನಗೂಡು: ದರೋಡೆಕೋರರ ಬಂಧನ

ನಂಜನಗೂಡು: ದರೋಡೆಕೋರರ ಬಂಧನ

0

ನಂಜನಗೂಡು : ನಂಜನಗೂಡು ನಗರವು ಸೇರಿದಂತೆ ಹಲವಾರು ಕಡೆ ದರೋಡೆ ನಡೆಸಿದ ನಾಲ್ವರನ್ನು ಹೆಡೆಮುರಿ ಕಟ್ಟುವಲ್ಲಿ ನಂಜನಗೂಡು ಪೊಲೀಸರು  ಯಶಸ್ವಿಯಾಗಿದ್ದಾರೆ.    

Join Our Whatsapp Group

ಬುಧವಾರ ಬೆಳಗಿನ ಜಾವ ನಂಜನಗೂಡು ನಗರ ಠಾಣೆ ಇನ್ಸ್ಪೆಕ್ಟರ್ ಬಸವರಾಜು ಹಾಗೂ ಸಿಬ್ಬಂದಿಗಸ್ತು ನಡೆಸುತ್ತಿದ್ದಾಗ ಕಾರು ನಿಲ್ಲಿಸಿಕೊಂಡಿದ್ದ ನಾಲ್ವರು ಆಸಾಮಿಗಳ ಚಲನವಲನಗಳ ಬಗ್ಗೆ ಅನುಮಾನ ಬಂದು ಕಾರನ್ನು ಪರೀಕ್ಷಿಸಿದಾಗ ಕಾರಿನ ಡಿಕ್ಕಿಯಲ್ಲಿ ಮಚ್ಚು, ವೈರು, ರೋಪು, ಬ್ಯಾಟರಿ ಚಾಲಿತ ಕಟ್ಟರ್, ಸ್ಕ್ರೂ ಡ್ರೈವರ್, ಕಟ್ಟಿಂಗ್ ಪ್ಲೇಯರ್, ಹಾಕಿ ಸ್ಟಿಕ್, ಕೈ ಗ್ಲೋಸುಗಳು ಕಂಡುಬಂದಿದ್ದು ಹೆಚ್ಚಿನ ವಿವರಣೆ ನಡೆಸಿದಾಗ ನಾಲ್ವರು ಅನೇಕ ಅಪರಾಧಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ.

ಕಳೆದ ಮೇ ತಿಂಗಳಲ್ಲಿ ನಂಜನಗೂಡು ನಗರದ ಮಾರ್ಕೆಟ್ ಬಾಳೆಹಣ್ಣಿನ ಅಂಗಡಿ ಬೀಗ ಒಡೆದು 2 ಲಕ್ಷ. ರೂ. ಕಳ್ಳತನ ಮಾಡಿರುವುದು, ಇತ್ತೀಚಿಗೆ ನಗರದ ಸಿಟಿಜನ್ ಶಾಲಾ ರಸ್ತೆಯ ದಿನಸಿ ಅಂಗಡಿಗಳಲ್ಲಿ ಹತ್ತಾರು ಮೂಟೆ ಅಕ್ಕಿ, ಬೇಳೆ ಕಳವು, ಬನ್ನೂರು ಠಾಣಾ ವ್ಯಾಪ್ತಿಯ ನಂದಿನಿ ಪಾರ್ಲರ್ ನಲ್ಲಿ ಕಳ್ಳತನ, ಟಿ. ನರಸೀಪುರ ಪಟ್ಟಣ ವ್ಯಾಪ್ತಿಯಲ್ಲಿ ಲಿಂಕ್ ರಸ್ತೆಯಲ್ಲಿನ ದಿನಸಿ ಅಂಗಡಿಗಳ ಕಳ್ಳತನ ಪ್ರಕರಣದಲ್ಲಿ ಇವರು ಭಾಗಿಯಾಗಿರುವುದು ತಿಳಿದು ಬಂದಿದೆ.

ಇದಲ್ಲದೆ ಮೈಸೂರುನಗರ ಹಾಗೂ ಪಾಂಡವಪುರದಲ್ಲೂ ಅನೇಕ ಕಳ್ಳತನ ಹಾಗೂ ಸುಲಿಗೆ ಪ್ರಕರಣಗಳಲ್ಲಿ ಈ ಆರೋಪಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

ಆರೋಪಿಗಳು ತಾವು ಕಳ್ಳತನ ಮಾಡಿದ್ದ 1,86,778 ರೂ. ಮೊತ್ತದ ದಿನಸಿ ಸಾಮಗ್ರಿಗಳು ಮಾರಾಟಕ್ಕಾಗಿ ಮೈಸೂರಿನ ಶಾಂತಿನಗರ ಮನೆಯಲ್ಲಿ ಇಟ್ಟಿರುವುದಾಗಿ ತಿಳಿಸಿದ್ದು, ಪೊಲೀಸ್ ಅಧಿಕಾರಿ ಬಸವರಾಜು ಇನ್ನಿತರರು ಮೈಸೂರಿಗೆ ತೆರಳಿ ಆ ಸಾಮಗ್ರಿಗಳು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಗಳಿಂದ 75,000 ನಗದು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಚರಣೆಯಲ್ಲಿ ಭಾಗವಹಿಸಿದ್ದ ಇನ್ಸ್ಪೆಕ್ಟರ್ ಬಸವರಾಜು, ಪಿಎಸ್ಐ ಪ್ರಕಾಶ, ಶಿವಣ್ಣ, ಸತೀಶ, ಸಿಬ್ಬಂದಿಗಳಾದ ನಾರಾಯಣ, ಜಯರಾಮ್, ಶಿವಕುಮಾರ್, ತಿಮ್ಮಯ್ಯ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಸೀಮಾ ಲಾಟ್ಕರ್ ಅಭಿನಂದಿಸಿದ್ದಾರೆ.