ಮನೆ ರಾಜಕೀಯ ಹರ್ಷನನ್ನು ಮುಸ್ಲಿಮರೇ ಕೊಲೆ ಮಾಡಿದ್ದಾರೆ ಎಂದು ಎಸ್ಪಿಯೇ ಹೇಳಿದ್ದು: ಕೆ.ಎಸ್. ಈಶ್ವರಪ್ಪ ಸಮರ್ಥನೆ

ಹರ್ಷನನ್ನು ಮುಸ್ಲಿಮರೇ ಕೊಲೆ ಮಾಡಿದ್ದಾರೆ ಎಂದು ಎಸ್ಪಿಯೇ ಹೇಳಿದ್ದು: ಕೆ.ಎಸ್. ಈಶ್ವರಪ್ಪ ಸಮರ್ಥನೆ

0

ಬೆಂಗಳೂರು: ಮುಸ್ಲಿಮರೇ ಹರ್ಷನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನನಗೆ ಮಾಹಿತಿ ನೀಡಿದರು. ಅದಕ್ಕಾಗಿ ನಾನು ಆ ರೀತಿ ಹೇಳಿಕೆ ನೀಡಿದ್ದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ‘ಭಜರಂಗದಳ ಕಾರ್ಯಕರ್ತನಾಗಿದ್ದ ಹರ್ಷನನ್ನು ಮುಸ್ಲಿಂ ಗೂಂಡಾಗಳು ಕೊಲೆ ಮಾಡಿದ್ದಾರೆ ಎಂದು ನಾನು ಹೇಳಿಕೆ ನೀಡಿರುವುದರ ಹಿಂದೆ ಸೂಕ್ತ ಮಾಹಿತಿ ಇತ್ತು’ ಎಂದು ಈಶ್ವರಪ್ಪ ಮಂಗಳವಾರ ಶಿವಮೊಗ್ಗದಲ್ಲಿ ಸ್ಪಷ್ಟನೆ ನೀಡಿದ್ದಾರೆ.

‘ಹರ್ಷನ ಕೊಲೆ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಎಸ್‌ಪಿಗೆ ಕರೆ ಮಾಡಿದ್ದ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಗಳು ಕೊಲೆ ಮಾಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಬಳಿಕ ಕೊಲೆಯಾದ ಸ್ಥಳದ ಅಕ್ಕಪಕ್ಕದ ನಿವಾಸಿಗಳೂ ಸಹ ಮುಸ್ಲಿಮರೇ ಹರ್ಷನನ್ನು ಕೊಲೆ ಮಾಡಿದ್ದಾರೆ ಎಂದು ಖಚಿತ ಪಡಿಸಿದರು’ ಎಂದು ಈಶ್ವರಪ್ಪ ಹೇಳಿದರು.

ಪ್ರಕರಣ ಸಂಬಂಧ ಈಗಾಗಲೇ ಮೂವರ ಬಂಧನ ಆಗಿದ್ದರೆ, 12 ಜನರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರೇ ಹೇಳಿಕೆ ನೀಡಿದ್ದಾರೆ. ನಿನ್ನೆ ಬಂಧನ ಆದವರ ಹೆಸರು ನೋಡಿ, ಮುಸ್ಲಿಮರೇ ಇದ್ದಾರೆ. ನಾನು ಹೇಳಿದ್ದರಲ್ಲಿ ತಪ್ಪೇನಿದೆ ಎಂದು ಅವರು ಸಮರ್ಥಿಸಿಕೊಂಡರು.

ಹಿಂದಿನ ಲೇಖನಉಕ್ರೇನ್ ಬಿಕ್ಕಟ್ಟು: ಭಾರತೀಯರ ಕರೆತರಲು ಹೊರಟ ಏರ್‌ಇಂಡಿಯಾ ವಿಶೇಷ ವಿಮಾನ
ಮುಂದಿನ ಲೇಖನಇಂದಿನ ನಿಮ್ಮ ರಾಶಿ ಭವಿಷ್ಯ