ಮನೆ ರಾಜ್ಯ ‘ರಾಷ್ಟ್ರೀಯ ಎಂಜಿನಿಯರ್‌ಗಳ ದಿನ’: ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರಿಂದ ಶುಭಾಶಯ

‘ರಾಷ್ಟ್ರೀಯ ಎಂಜಿನಿಯರ್‌ಗಳ ದಿನ’: ಸಿಎಂ ಬೊಮ್ಮಾಯಿ ಸೇರಿದಂತೆ ಗಣ್ಯರಿಂದ ಶುಭಾಶಯ

0

ಬೆಂಗಳೂರು(Bengaluru): ‘ರಾಷ್ಟ್ರೀಯ ಎಂಜಿನಿಯರ್‌ಗಳ ದಿನ’ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ನಿತಿನ್ ಗಡ್ಕರಿ  ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನದಂದು (ಸೆ.15) ಭಾರತದಲ್ಲಿ ಎಂಜಿನಿಯರ್‌ಗಳ ದಿನ ಆಚರಿಸಲಾಗುತ್ತದೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ಎಲ್ಲ ಎಂಜಿನಿಯರ್‌ಗಳಿಗೂ ಪ್ರೇರಣೆ ಎಂದೇ ಬಿಂಬಿತವಾಗಿರುವ ಮಹಾಮೇಧಾವಿ, ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮದಿನದಂದು ಇಂಜಿನಿಯರ್ಸ್ ದಿನ ಆಚರಿಸುತ್ತಿರುವುದು ಆ ಮಹಾನ್ ಚೇತನಕ್ಕೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದು ಉಲ್ಲೇಖಿಸಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ,  ಆತ್ಮ ನಿರ್ಭರ ಭಾರತದ ದೃಷ್ಟಿಕೋನದಲ್ಲಿ ಎಂಜಿನಿಯರ್‌ಗಳು ನವ ಭಾರತವನ್ನು ನಿರ್ಮಿಸುತ್ತಿದ್ದಾರೆ. ರಾಷ್ಟ್ರ ನಿರ್ಮಾಣದಲ್ಲಿ ಅವರ ಅಮೂಲ್ಯ ಪಾತ್ರಕ್ಕಾಗಿ ನಾನು ಕಠಿಣ ಪರಿಶ್ರಮಿ ಎಂಜಿನಿಯರ್‌ಗಳಿಗೆ ವಂದಿಸುತ್ತೇನೆ. ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನದಂದು ಅವರಿಗೆ ನಮನಗಳು ಎಂದು ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ 1861 ಸೆಪ್ಟೆಂಬರ್ 15ರಂದು ವಿಶ್ವೇಶ್ವರಯ್ಯನವರು ಜನಿಸಿದರು. 1955ರಲ್ಲಿ ಅವರ ಸಾಧನೆ ಪರಿಗಣಿಸಿ ದೇಶದ ಅತ್ಯುನ್ನತ ‘ಭಾರತ ರತ್ನ’ ಪುರಸ್ಕಾರದೊಂದಿಗೆ ಗೌರವಿಸಲಾಯಿತು.

ಹಿಂದಿನ ಲೇಖನತಾಂತ್ರಿಕ ದೋಷ: ಮೆಟ್ರೊ ರೈಲು ಸಂಚಾರದಲ್ಲಿ ವ್ಯತ್ಯಯ
ಮುಂದಿನ ಲೇಖನಲಖಿಂಪುರ ಖೇರಿ: ದಲಿತ ಸಹೋದರಿಯರ ಅತ್ಯಾಚಾರ ಕೊಲೆ ಪ್ರಕರಣ- 6 ಮಂದಿ ಬಂಧನ