ಮನೆ ರಾಷ್ಟ್ರೀಯ ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ನಾಮಪತ್ರ ಸಲ್ಲಿಕೆ

ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿ ಜಗದೀಪ್ ಧಂಕರ್ ನಾಮಪತ್ರ ಸಲ್ಲಿಕೆ

0

ಹೊಸದಿಲ್ಲಿ(New Delhi): ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧಂಖರ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಸಂಪುಟದ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸಾಥ್ ನೀಡಿದರು.

ಹಾಲಿ ಪಶ್ಟಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿರುವ ಜಗದೀಪ್ ಧಂಖರ್ ಅವರನ್ನು  ಬಿಜೆಪಿ ಸಂಸದೀಯ ಸಭೆಯಲ್ಲಿ ಉಪ ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು.

ಪ್ರತಿಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವ ಹಿರಿಯ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವಾ ಸ್ಪರ್ಧಿಸಲಿದ್ದು, ಆಗಸ್ಟ್ ೬ ರಂದು ಚುನಾವಣೆ ನಡೆಯಲಿದೆ.

ಹಿಂದಿನ ಲೇಖನಶ್ರೀಕೃಷ್ಣ, ಅರ್ಜುನನ ಗರ್ವಭಂಗ ಮಾಡಿದ ಕಥೆ
ಮುಂದಿನ ಲೇಖನಕಬಿನಿ, ಕೆಆರ್’ಎಸ್ ಜಲಾಶಯ ಭರ್ತಿ: ಜು.20 ರಂದು ಬಾಗೀನ ಅರ್ಪಿಸಲಿರುವ ಸಿಎಂ ಬೊಮ್ಮಾಯಿ