ಮನೆ ರಾಜಕೀಯ ಉಕ್ರೇನ್ ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ: ಹೆಚ್ ಡಿಕೆ

ಉಕ್ರೇನ್ ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿದ್ದಾರೆ: ಹೆಚ್ ಡಿಕೆ

0

ರಾಮನಗರ: ‘ಉಕ್ರೇನ್‌ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿದ್ದು, ಸರ್ಕಾರ ನೀಡುತ್ತಿರುವ ಮಾಹಿತಿ ಅತ್ಯಲ್ಪವಾಗಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಟೀಕಿಸಿದರು.

ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು,  ರಾಜ್ಯದ ಸಾಕಷ್ಟು ವಿದ್ಯಾರ್ಥಿಗಳು ವೈದ್ಯಕೀಯ ವಿದ್ಯಾಭ್ಯಾಸಕ್ಕೆಂದು ಉಕ್ರೇನ್‌ಗೆ ಹೋಗುತ್ತಿದ್ದಾರೆ. ಸರ್ಕಾರ ಮಾತ್ರ ಬೆರಳೆಣಿಕೆ ವಿದ್ಯಾರ್ಥಿಗಳ ದಾಖಲೆ ಕೊಡುತ್ತಿದೆ. ಎಲ್ಲರನ್ನೂ ಗುರುತಿಸಿ ಅವರನ್ನು ಕರೆತರುವ ಕೆಲಸ ಆಗಬೇಕಿದೆ’ ಎಂದು ಅವರು ಒತ್ತಾಯಿಸಿದರು.

ಉಕ್ರೇನ್‌ನಲ್ಲಿ ಸಿಲುಕಿರುವ ಚನ್ನಪಟ್ಟಣ ತಾಲ್ಲೂಕಿನ ನಿವೇದಿತಾ ಎಂಬ ವಿದ್ಯಾರ್ಥಿನಿ ಜೊತೆ ಮಾತನಾಡಿ ಮಾಹಿತಿ ಪಡೆದಿದ್ದೇನೆ. ಅಲ್ಲಿ ಸಿಲುಕಿರುವ ರಾಜ್ಯದ ಕೆಲವು ವಿದ್ಯಾರ್ಥಿಗಳ ಮಾಹಿತಿಯನ್ನು ರಾಯಭಾರ ಕಚೇರಿಗೆ ನೀಡಿದ್ದು, ಅವರನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿದ್ದೇನೆ. ವಿದ್ಯಾರ್ಥಿಗಳು ಒಂದು ವಾರ ಮುಂಚೆಯೇ ಬರಬೇಕಿತ್ತು. ಈಗ ಅಲ್ಲಿನ ವಿಮಾನ ನಿಲ್ದಾಣಗಳು ಮುಚ್ಚಿವೆ ಎಂದು ಎಂಬೆಸ್ಸಿ ಸಿಬ್ಬಂದಿ ಹೇಳುತ್ತಾರೆ ಎಂದು ಅವರು ವಿವರಿಸಿದರು.

ಹಿಂದಿನ ಲೇಖನಮೈಸೂರು ಪೊಲೀಸರಿಂದ ಯಶಸ್ವಿ ಕಾರ್ಯಚರಣೆ: ಆನ್ ಲೈನ್ ಮೂಲಕ ವಂಚನೆಗೊಳಗಾಗಿದ್ದವರಿಗೆ ಹಣ ಮರುಪಾವತಿ
ಮುಂದಿನ ಲೇಖನರಷ್ಯಾ-ಉಕ್ರೇನ್ ಸಂಘರ್ಷ: ಉಕ್ರೇನ್ ನ 137 ಮಂದಿ ಸಾವು