ಮನೆ ರಾಷ್ಟ್ರೀಯ ನೀಟ್ 2023 ಫಲಿತಾಂಶ ಪ್ರಕಟ: ಪ್ರಬಂಜನ್ ಜೆ, ಬೋರಾ ವರುಣ್ ಚಕ್ರವರ್ತಿಗೆ ಮೊದಲ ಸ್ಥಾನ

ನೀಟ್ 2023 ಫಲಿತಾಂಶ ಪ್ರಕಟ: ಪ್ರಬಂಜನ್ ಜೆ, ಬೋರಾ ವರುಣ್ ಚಕ್ರವರ್ತಿಗೆ ಮೊದಲ ಸ್ಥಾನ

0

ದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಯುಜಿ 2023 ರ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು, ಪ್ರಬಂಜನ್ ಜೆ ಮತ್ತು ಬೋರಾ ವರುಣ್ ಚಕ್ರವರ್ತಿ ಎಂಬ ಇಬ್ಬರು ವಿದ್ಯಾರ್ಥಿಗಳು 720 ಅಂಕಗಳನ್ನು ಗಳಿಸುವ ಮೂಲಕ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Join Our Whatsapp Group

NEET ಯುಜಿ ಪ್ರವೇಶ ಪರೀಕ್ಷೆಯು ಭಾರತದಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ವಿವಿಧ ಪದವಿಪೂರ್ವ ಕೋರ್ಸ್‌ ಗಳಿಗೆ ಪ್ರವೇಶಕ್ಕಾಗಿ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಯಾಗಿದೆ.

NEET UG 2023 ರಲ್ಲಿ ಟಾಪ್ 20 ಸ್ಕೋರರ್‌ ಗಳ ಪಟ್ಟಿಯು ಗಮನಾರ್ಹ ಅಂಕಗಳನ್ನು ಗಳಿಸಿದ ಹಲವಾರು ಪ್ರತಿಭಾವಂತ ವ್ಯಕ್ತಿಗಳನ್ನು ಒಳಗೊಂಡಿದೆ.

ಕೌಸ್ತವ್ ಬೌರಿ 716 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದರೆ, ಪ್ರಾಂಜಲ್ ಅಗರ್ವಾಲ್, ಧ್ರುವ ಅಡ್ವಾಣಿ, ಸೂರ್ಯ ಸಿದ್ಧಾರ್ಥ್ ಎನ್, ಶ್ರೀನಿಕೇತ್ ರವಿ, ಸ್ವಯಂ ಶಕ್ತಿ ತ್ರಿಪಾಠಿ, ವರುಣ್ ಎಸ್, ಪಾರ್ಥ್ ಖಂಡೇಲ್ವಾಲ್, ಆಶಿಕಾ ಅಗರ್ವಾಲ್, ಸಿಯಾನ್ ಪ್ರಧಾನ್, ಹರ್ಷಿತ್ ಬನ್ಸಾಲ್, ಶಶಾಂಕ್ ಕುಮಾರ್, ಕಾಂಚನ್ ಗಯಂತ್ ರಾಗ್ ರೆಡ್ಡಿ, ಶುಭಂ ಬನ್ಸಾಲ್, ಭಾಸ್ಕರ್ ಕುಮಾರ್, ದೇವ್ ಭಾಟಿಯಾ, ಅರ್ನಾಬ್ ಪತಿ ಮತ್ತು ಶಶಾಂಕ್ ಸಿನ್ಹಾ ಎಲ್ಲರೂ 715 ಅಂಕಗಳನ್ನು ಗಳಿಸಿದ್ದಾರೆ.

ಬೆಂಗಳೂರಿನ ಹುಡುಗ ಧ್ರುವ ಅಡ್ವಾಣಿ ರಾಜ್ಯದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಮಂಗಳವಾರ (ಜೂನ್ 13) ತಡರಾತ್ರಿ ಬಿಡುಗಡೆಯಾದ NEET 2023 ಫಲಿತಾಂಶದಲ್ಲಿ ಬೆಂಗಳೂರಿನ ಜಿಆರ್ ಇಂಟರ್‌ ನ್ಯಾಶನಲ್ ಶಾಲೆಯ ವಿದ್ಯಾರ್ಥಿ ಧ್ರುವ್ ಅಖಿಲ ಭಾರತ ಮಟ್ಟದಲ್ಲಿ 5 ನೇ ರ‍್ಯಾಂಕ್ (ಅಂಕ 715) ಗಳಿಸಿದ್ದಾರೆ. ಅವರು 12 ನೇ ತರಗತಿ CBSE ವಿಜ್ಞಾನ ಸ್ಟ್ರೀಮ್‌ ನಲ್ಲಿ 99.4% ಗಳಿಸಿದ್ದಾರೆ ಮತ್ತು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಗೆ ಸೇರುವ ಗುರಿ ಹೊಂದಿದ್ದಾರೆ.

ಫಲಿತಾಂಶಗಳನ್ನು ಅಧಿಕೃತ ವೆಬ್‌ ಸೈಟ್ neet.nta.nic.in ನಲ್ಲಿ ಪ್ರಕಟಿಸಲಾಗಿದೆ.