ಜನಾಂಗೀಯ ತಾರತಮ್ಯ ಅತ್ಯಂತ ಕಠೋರವಾಗಿದ್ದ ಮತ್ತು ಕಪ್ಪು ಜನರನ್ನು ಜಗತ್ತಿನಾದ್ಯಂತ ಕೀಳಾಗಿ ಕಾಣುತ್ತಿದ್ದ ಕಾಲವೂಂದಿತ್ತು.ಕರಿಯರಿಗೆ ಭೀಕರ ಕೊಲೆ ಬೆದರಿಕೆಗಳನ್ನು ಒಡ್ಡಲಾಗಿತ್ತು ಮತ್ತು ಅವರು ಸದಾ ಭಯದಿಂದಲೇ ಬದುಕುತ್ತಿದ್ದರು ಇವರೆಲ್ಲದರ ಕರಿಯ ಪಾದ್ರಿ ನಿರ್ವಹಿಸುತ್ತಿದ್ದ ಚರ್ಚೆಂದು ಇತ್ತು.ನಿಯಮಿತವಾಗಿ ಎಲ್ಲಾ ಜನರನ್ನೂ ಒಳಗೊಂಡ ಪ್ರಾರ್ಥನಾ ಸಭೆಗಳನ್ನು ನಡೆಸುತ್ತಿದ್ದ ಆ ಪಾದ್ರಿ ಬಹುಜನಪ್ರಿಯರಾಗಿದ್ದರು ಒಮ್ಮೆ ಕೆಲವು ದುಷ್ಕರ್ಮಿಗಳು ಕರಿಯ ಆ ಪಾದ್ರಿಆಡಳಿತ ನಡೆಸುತ್ತಿದ್ದಾರಂಬ ಕಾರಣಕ್ಕಾಗಿ ಚರ್ಚ್ ಮೇಲೆ ದಾಳಿ ನಡೆಸಿ ಅದನ್ನು ಸುಟ್ಟುಹಾಕಲು ಮುಂದಾದರು ಅದೇ ಪುಂಡರು ಪಾದ್ರಿ ಮೇಲೆ ಹಲ್ಲೆಗೆ ಯತ್ನಿಸಿದಾಗ ಅವರು ಹಿಂದೆ ಸರಿದು ನಿಂತು ಹೀಗೆ ಹೇಳಿದರು…..
ಪ್ರಶ್ನೆಗಳು
ಕರಿಯ ಪಾದ್ರಿ ಆ ದುಷ್ಕಮಿಗಳಿಗೆ ಏನು ಹೇಳಿದರು
ಈ ಕಥೆ ಪರಿಣಾಮವೇನು
ಉತ್ತರಗಳು
1. ನಾನು ಅಜ್ಞಾನಿ ಎಂಬ ಕಾರಣಕ್ಕಾಗಿ ನೀವು ನನ್ನನ್ನು ಇಷ್ಟ ಪಡುವುದಿಲ್ಲವಾದರೆ ನನ್ನನ್ನು ಶಾಲೆಗೆ ಕಳುಹಿಸಿ ವಿದ್ಯೆ ಕಲಿಸಬಹುದು. ನಾನು ಕೊಳಕನೆಂಬ ಕಾರಣಕ್ಕೆ ನೀವು ನನ್ನನ್ನು ಇಷ್ಟಪಡುವುದಿಲ್ಲವಾದರೆ ನನಗೆ ಸ್ಥಾನ ಮಾಡುವ ಮತ್ತು ಶುಚಿತ್ವ ಕಾಪಾಡಿಕೊಳ್ಳುವ ರೀತಿ ತಿಳಿಸಿಕೊಡಬಹುದು. ನೀವು ನನ್ನ ಅಸಾಮಾಜಿಕ ವರ್ತನೆಯನ್ನು ಇಷ್ಟಪಡುವುದಿಲ್ಲವೆಂದರೆ ಸಮಾಜದಲ್ಲಿ ಬದುಕುವುದು ಹೇ ಗೆಂದು ನನಗೆ ಕಲಿಸಿಕೊಡಬಹುದು. ಆದರೆ ನೀವು ನನ್ನ ಚರ್ಮದ ಬಣ್ಣದ ಕಾರಣಕ್ಕಾಗಿ ಇಷ್ಟಪಡುವುದಿಲ್ಲವಾದರೆ ನಾನು ನಿಮ್ಮ ಈ ಆಹವಾಲನ್ನು ನನ್ನನ್ನು ಸೃಷ್ಟಿಸಿದ ದೇವರಿಗೇ ಸಲ್ಲಿಸಬಹುದಷ್ಟೇ.”
2.ಚರ್ಮದ ಬಣ್ಣ ನಮ್ಮ ಹುಟ್ಟಿನೊಂದಿಗೆ ಬರುವ ಬಳುವಳಿ ಹಾಗೂ ಅದನ್ನು ನಮ್ಮಿಚ್ಛಯಂತೆ ಬದಲಾಸಲಾಗುದು. ಅದರಿಂದ ತಾರತಮ್ಮ ಮಾಡಲು ಜನರಿಗೆ ಅದೊಂದು ನೆಪವಾಗಬಹುದು.














