Saval TV on YouTube
ರಾಯಲ್ ಎನ್’ಫೀಲ್ಡ್ ಕಂಪನಿ ದೇಶದ ಮಾರುಕಟ್ಟೆಗೆ ಹೊಸ ಮಾದರಿಯ ಸೂಪರ್ ಮೆಟರ್ 650 ಸಿಸಿ ಬುಲೆಟ್ ಅನ್ನು ಬಿಡುಗಡೆ ಮಾಡಿದ್ದು, ಗ್ರಾಹಕರಿಗೆ ಶೀಘ್ರವೇ ಲಭಿಸಲಿದೆ.
ಸ್ಟಾಂಡರ್ಡ್ ಮತ್ತು ಟೂರರ್ (Tourer) ಎಂಬ ಎರಡು ಮಾದರಿಗಳಲ್ಲಿ ಲಭ್ಯವಾಗಲಿದೆ. ಹಿಂದಿನ ಎರಡು ಆವೃತ್ತಿಗಳಿಗೆ ಹೋಲಿಕೆ ಮಾಡಿದರೆ ಹೊಸತರಲ್ಲಿ ಹೆಚ್ಚು ಮೆಟಲ್ ಕಾಂಪನೆಂಟ್’ಗಳು ಇವೆ. 6 ಸ್ಪೀಡ್ ಗಿಯರ್ ಬಾಕ್ಸ್, ಟ್ಯೂಬ್ಲೆಸ್ ಟೈರ್, ಅಲೊಯ್ ವ್ಹೀಲ್ಗಳನ್ನು ಹೊಂದಿದೆ.
ಹೊಸ ಬೈಕ್’ನಲ್ಲಿ ಟ್ರಿಪ್ಪರ್ ನ್ಯಾವಿಗೇಷನ್ ಸಿಸ್ಟಮ್ ಅನ್ನು ಹೊಂದಿದೆ. ಬೈಕ್ನ ಅಂದಾಜು ಬೆಲೆ 3.5 ಲಕ್ಷ ರೂ.(ಎಕ್ಸ್’ಶೋರೂಮ್) ಇರುವ ಸಾಧ್ಯತೆಗಳು ಇವೆ. ಅದರ ಪ್ರಿ-ಬುಕಿಂಗ್ ಈಗಾಗಲೇ ಶುರುವಾಗಿದೆ.