ಮನೆ ರಾಜ್ಯ ಮೈಸೂರು-ಧರ್ಮಸ್ಥಳ ನಡುವೆ ಹೊಸ ಬಸ್‌ಸಂಚಾರ; ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ಮುಖಾಂತರ ಸಂಚಾರ..!

ಮೈಸೂರು-ಧರ್ಮಸ್ಥಳ ನಡುವೆ ಹೊಸ ಬಸ್‌ಸಂಚಾರ; ಕುಕ್ಕೆ ಸುಬ್ರಹ್ಮಣ್ಯ ಮಾರ್ಗ ಮುಖಾಂತರ ಸಂಚಾರ..!

0

ಮೈಸೂರು : ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ ಪಟ್ಟಣದ ಮುಖಾಂತರ ಕುಕ್ಕೆಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ನೂತನ ಬಸ್‌ ಮಾರ್ಗವನ್ನು ಪ್ರಾರಂಭಿಸಲಾಗಿದ್ದು, ಜನತೆಗೆ ಅನುಕೂಲವಾಗಿದೆ. ರಾಜ್ಯ ಸಾರಿಗೆ ಸಂಸ್ಥೆ ಧರ್ಮಸ್ಥಳ ಘಟಕದ ವತಿಯಿಂದ ಮೈಸೂರಿನಿಂದ ಪಟ್ಟಣದ ಮುಖಾಂತರ ಕುಕ್ಕೆಸುಬ್ರಹ್ಮಣ್ಯ ಧರ್ಮಸ್ಥಳಕ್ಕೆ ತೆರಳುವ ನೂತನ ಬಸ್‌ಸಂಚಾರದ ಮಾರ್ಗವನ್ನು ಪ್ರಾರಂಭಿಸಲಾಗಿದೆ.

ಈ ವಾಹನವು ಪ್ರತಿದಿನ ಬೆಳಗ್ಗೆ 6 ಗಂಟೆಗೆ ಮೈಸೂರು ಬಿಟ್ಟು ನಂತರ ಕೃಷ್ಣರಾಜನಗರ, ಹಳ್ಳಿಮೈಸೂರು, ಸಂತೆಮೇಲೂರು, ಅರಕಲಗೂರು, ಶನಿವಾರಸಂತೆ, ಬಿಸಿಲೆ ಮಾರ್ಗ ಕುಕ್ಕೆ ಸುಬ್ರಹಣ್ಯ ಮುಖಾಂತರ ಧರ್ಮಸ್ಥಳಕ್ಕೆ ಮಧ್ಯಾಹ್ನ 1.30ಕ್ಕೆ ತಲುಪುತ್ತದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್‌ನಲ್ಲಿ ಪ್ರಯಾ­ಣಿಸುವ ವೇಳೆ ರಸ್ತೆ ಅಪಘಾತ ಪ್ರಕರ­ಣ­ಗಳಲ್ಲಿ ಮೃತರ ಕುಟುಂಬದವರಿಗೆ ಮಧ್ಯಂತರ ಪರಿಹಾರವಾಗಿ ಪಾವತಿಸುವ ಮೊತ್ತ­ವನ್ನು ಅಂತಿಮ ಪರಿಹಾರದಲ್ಲಿ ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ವಾಹನ ಅಪಘಾತಗಳ ಪರಿಹಾರ ನ್ಯಾಯಾಧಿಕರಣ (ಎಂಎಸಿಟಿ) ಆದೇಶ ಪ್ರಶ್ನಿಸಿ ಮೃತ ಮಹಿಳೆಯ ಪತಿ ರಾಮಪ್ಪ ಮತ್ತವರ ಮಗ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿಜಯ್‌ಕುಮಾರ್‌ ಪಾಟೀಲ್‌ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ‘‘ಕೆಎಸ್‌ಆರ್‌ಟಿಸಿಯು ಅಪಘಾತ ನಡೆದ ಸಂದರ್ಭದಲ್ಲಿ ತತ್‌ಕ್ಷಣದ ಪರಿಹಾರ ಪಾವತಿಗಾಗಿ 2002ರಿಂದ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್‌ ನಿರ್ವಹಣೆ ಮಾಡುತ್ತಿದೆ. ನಿಧಿಗಾಗಿ ಬಸ್‌ ಪ್ರಯಾಣಿಕರು 100 ರೂ.ಗಳಿಗೂ ಅಧಿಕ ಮೊತ್ತದ ಟಿಕೆಟ್‌ ಖರೀದಿಸಿದಲ್ಲಿ ಪ್ರತಿ ಟಿಕೆಟ್‌ನಲ್ಲಿ1 ರೂಪಾಯಿ ಸಂಗ್ರಹಿಸುತ್ತಿದೆ.

ರಸ್ತೆ ಅಪಘಾತಗಳಲ್ಲಿ ಮೃತಪಟ್ಟ ಪ್ರಯಾ­ಣಿಕರ ಕುಟುಂಬಗಳಿಗೆ ಮಧ್ಯಂತರ ಪರಿಹಾರ ನೀಡಲು ಟ್ರಸ್ಟ್‌ 2017ರ ಮಾರ್ಚ್ ತಿಂಗಳಲ್ಲಿ ನಿರ್ಧರಿಸಿದೆ. ಹಾಗಾಗಿ, ಘಟನೆ ನಡೆದ ಸಂದರ್ಭದಲ್ಲಿ ಮಧ್ಯಂತರ ಪರಿಹಾರ ಮೊತ್ತವು ಮೃತರ ಕುಟುಂಬಕ್ಕೆ ತಕ್ಷಣಕ್ಕೆ ನೀಡುವುದಾಗಿದ್ದು, ಅಂತಿಮ ಪರಿಹಾರದಲ್ಲಿ ಆ ಮೊತ್ತವನ್ನು ಕಡಿತಗೊಳಿಸಿ ಪಾವತಿಸು­ವುದು ನಿಯಮಗಳಿಗೆ ವಿರುದ್ಧ­ವಾಗಿರ­ಲಿದೆ,’’ ಎಂದು ಪೀಠ ಹೇಳಿದೆ. ನ್ಯಾಯಾಧಿಕರಣದ ಆದೇಶ ಮಾರ್ಪಡಿಸಿರುವ ನ್ಯಾಯ­ಪೀಠ, ಮೃತರ ಕುಟುಂಬದವರ ಪರಿಹಾರ ಮೊತ್ತವನ್ನು 6.21 ಲಕ್ಷ ರೂ.ಗಳಿಗೆ ಹೆಚ್ಚಳ ಮಾಡುತ್ತಿರುವುದಾಗಿ ಆದೇಶದಲ್ಲಿ ತಿಳಿಸಿದೆ.