ಮನೆ ಅಪರಾಧ ದಾವಣಗೆರೆ: ವೃದ್ಧ ದಂಪತಿಗಳ ಕೊಲೆ

ದಾವಣಗೆರೆ: ವೃದ್ಧ ದಂಪತಿಗಳ ಕೊಲೆ

0

ದಾವಣಗೆರೆ: ವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ದಾವಣಗೆರೆ ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ,

ಎಲೆ ಬೇತೂರು ಗ್ರಾಮದ ಗುರುಸಿದ್ದಯ್ಯ (80) ಹಾಗೂ ಸರೋಜಮ್ಮ (75) ಕೊಲೆಯಾದ ದಂಪತಿ.

ಮೂರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದ ದಂಪತಿ, ಮನೆಯಲ್ಲಿ ಇಬ್ಬರೇ ವಾಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಕೊಲೆ ಮಾಡಿ ಪರಾರಿಯಾಗಿದ್ದಾರೆ. ಪಕ್ಕದ ಮನೆಯವರು ಬೆಳಿಗ್ಗೆ ಸರೋಜಮ್ಮ ಅವರನ್ನು ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನನಿರ್ಮಲ ಸೀತರಾಮನ್ ಅವರ ನಾಲ್ಕನೇ ಬಜೆಟ್ ಮಂಡನೆಗೆ ಒಂದು ವಾರ ಬಾಕಿ: ಇಲ್ಲಿದೆ ಮಾಹಿತಿ
ಮುಂದಿನ ಲೇಖನಪತ್ರಕರ್ತರ ವಿರುದ್ಧ ಮಾನನಷ್ಟ ಪ್ರಕರಣಗಳಿಗೆ ಸುಪ್ರೀಂ ಅಸಮ್ಮತಿ