ಮನೆ ಅಪರಾಧ ನವದೆಹಲಿ: ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

ನವದೆಹಲಿ: ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

0

ನವದೆಹಲಿ(NewDelhi): ನಗರದ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರ್ಮ್‌ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ಸಂಬಂಧಪಟ್ಟ ನಾಲ್ಲರೂ ರೈಲ್ವೆ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ

ಆರೋಪಿಗಳಾದ ಸತೀಶ್ ಕುಮಾರ್( 35), ವಿನೋದ್ ಕುಮಾರ್(38), ಮಂಗಲ್ ಚಂದ್(33), ಜಗದೀಶ್ ಚಂದ್(37) ಎಂದು ಗುರುತಿಸಲಾಗಿದೆ.

ಘಟನೆಯ ನಂತರ ಸಂತ್ರಸ್ತ ಮಹಿಳೆಯು ಪೊಲೀಸ್‌ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ದೂರು ಸಲ್ಲಿಸಿದ್ದು ಈಪ್ರಕರಣ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ರೈಲ್ವೆ ಡಿಸಿಪಿ ಹರೇಂದ್ರ ಸಿಂಗ್‌ ಅವರು ಮಾಹಿತಿ ನೀಡಿದ್ದಾರೆ.