ಮನೆ ಮನರಂಜನೆ ಹೊಸಬರ ಸಿನಿಮಾ ‘ಗದಾಯುದ್ಧ’ ಬಿಡುಗಡೆ

ಹೊಸಬರ ಸಿನಿಮಾ ‘ಗದಾಯುದ್ಧ’ ಬಿಡುಗಡೆ

0

ಸಂಪೂರ್ಣ ಹೊಸಬರ ತಂಡ ಸೇರಿ ಮಾಡಿರುವ “ಗದಾಯುದ್ಧ’ ಸಿನಿಮಾ ಇಂದು ತೆರೆಕಾಣುತ್ತಿದೆ. “ನಿತಿನ್‌ ಶಿರಗುರ್ಕರ್‌ ಫಿಲಂಸ್‌’ ಬ್ಯಾನರ್‌ ನಲ್ಲಿ ನಿತಿನ್‌ ಶಿರಗುರ್ಕರ್‌ ನಿರ್ಮಿಸಿರುವ “ಗದಾಯುದ್ದ’ ಚಿತ್ರವನ್ನು ಶ್ರೀವತ್ಸ ರಾವ್‌ ನಿರ್ದೇಶಿಸಿದ್ದಾರೆ.

Join Our Whatsapp Group

ಇನ್ನು “ಗದಾಯುದ್ಧ’ ಸಿನಿಮಾದ ಮೂಲಕ ಕರ್ನಾಟಕದ ಯುವ ಕ್ರಿಕೆಟಿಗ ಸುಮಿತ್‌ ನಾಯಕನಾಗಿ ಭೀಮನ ಪಾತ್ರದಲ್ಲಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಾಯಕ ಸುಮಿತ್‌ ಮಾತನಾಡಿ, ನಾನು ಅಭಿನಯಿಸಿರುವ ಮೊದಲ ಚಿತ್ರ ರಿಲೀಸಾಗುತ್ತಿರುವ ಖುಷಿಯಿದೆ. ಚಿತ್ರದಲ್ಲಿ ನಾನು ಭೀಮ ಎನ್ನುವ ಮೆಡಿಕಲ್‌ ಸ್ಟೂಡೆಂಟ್‌ ಪಾತ್ರ ಮಾಡಿದ್ದೇನೆ. ಇಡೀ ತಂಡ ತುಂಬಾ ಎಫ‌ರ್ಟ್‌ ಹಾಕಿದ್ದಾರೆ. ಆಕ್ಷನ್‌, ಕಾಮಿಡಿ, ಥ್ರಿಲ್ಲರ್‌, ಸೈಂಟಿಫಿಕ್‌ ವಿವರಣೆ ಇದೆ. ನಮ್ಮ ಸುತ್ತಲೂ ಏನೆಲ್ಲ ನಡೆಯುತ್ತಿದೆ ಅಂತ ಹೇಳುವ ಚಿತ್ರ ಎಂದು ವಿವರ ನೀಡಿದರು.

ನಾಯಕಿ ಧನ್ಯ ಪಾಟೀಲ್‌ ಮಾತನಾಡಿ, ಮಾಟಗಾರ ಡ್ಯಾನಿಯಲ್‌ ಕುಟ್ಟಪ್ಪ ಅವರ ಮಗಳು ಪ್ರತ್ಯಕ್ಷ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕೆಲ ಹುಡುಗಿಯರ ಮೈಂಡ್‌ ಸೆಟ್‌ ಬೇರೆ ಥರ ಇರುತ್ತದೆ. ನಾನು ಬ್ಲಾಕ್‌ ಮ್ಯಾಜಿಕ್‌ ನಂಬಲ್ಲ, ಆದರೆ ಆ ಬಗ್ಗೆ ತಿಳಿದುಕೊಳ್ಳಬೇಕಾದಂಥ ಸಾಕಷ್ಟು ವಿಷಯಗಳು ಚಿತ್ರದಲ್ಲಿ ವೆ ಎಂದರು.

ಚಿತ್ರದಲ್ಲಿ ನಾಯಕ ಸುಮಿತ್‌ ಅವರೊಂದಿಗೆ ಸಾಧು ಕೋಕಿಲ, ಶರತ್‌ ಲೋಹಿತಾಶ್ವ, ಡ್ಯಾನಿ ಕುಟ್ಟಪ್ಪ, ಅಯ್ಯಪ್ಪ ಶರ್ಮ, ಮಹೇಶ್‌ ಕೃಷ್ಣ, ಅರವಿಂದ ರಾವ್‌, ರಮೇಶ್‌ ಭಟ್‌, ಸ್ಪರ್ಶ ರೇಖಾ, ಐಶ್ವರ್ಯ ಸಿಂಧೋಗಿ ನಟಿಸಿದ್ದಾರೆ.