ಮನೆ ಕ್ರೀಡೆ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

0

ನವದೆಹಲಿ (New Delhi): ವೆಸ್ಟ್‌ ಇಂಡೀಸ್‌- ನ್ಯೂಜಿಲೆಂಡ್‌ ತಂಡದ ನಡುವಣ ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿಗೆ ಕಿವೀಸ್‌ ತಂಡ ಪ್ರಕಟಿಸಲಾಗಿದೆ.

ಕೇನ್‌ ವಿಲಿಯಮ್ಸನ್‌ ಮತ್ತು ಟ್ರೆಂಟ್‌ ಬೌಲ್ಟ್‌ ಅವರಂತಹ ಅನುಭವಿ ಸ್ಟಾರ್‌ ಆಟಗಾರರನ್ನು ಒಳಗೊಂಡ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಕಿವೀಸ್‌ ತಂಡ ಕೆರಿಬಿಯನ್‌ ಪ್ರವಾಸದಲ್ಲಿ ತಲಾ ಮೂರು ಪಂದ್ಯಗಳ ಟಿ20 ಮತ್ತು ಒಡಿಐ ಸರಣಿಗಳನ್ನು ಆಡಲಿದೆ. ಈ ಎರಡೂ ಸರಣಿಗಳಿಗೆ ಕಿವೀಸ್‌ ತಂಡದ ಆಯ್ಕೆ ಸಮಿತಿ ಒಂದೇ ತಂಡವನ್ನು ಆಯ್ಕೆ ಮಾಡಿದೆ.

ಎಂದಿನ ನಾಯಕ ಕೇನ್‌ ವಿಲಿಯಮ್ಸನ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದು, ವಿಶ್ರಾಂತಿಯಲ್ಲಿದ್ದ ಅನುಭವಿ ಎಡಗೈ ವೇಗದ ಬೌಲರ್‌ ಟ್ರೆಂಟ್‌ ಬೌಲ್ಟ್‌, ಟಿಮ್‌ ಸೌಥೀ ಮತ್ತು ಡೆವೋನ್‌ ಕಾನ್ವೇ ಕೂಡ ತಂಡಕ್ಕೆ ಹಿಂದಿರುಗಿದ್ದಾರೆ.

ಆಗಸ್ಟ್ 10ರಂದು ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಸಬಿನಾ ಪಾರ್ಕ್‌ ಕ್ರೀಡಾಂಗಣದಲ್ಲಿ ವೆಸ್ಟ್‌ ಇಂಡೀಸ್‌ ಮತ್ತು ನ್ಯೂಜಿಲೆಂಡ್‌ ನಡುವಣ ಸರಣಿ ಪ್ರಾರಂಭವಾಗಲಿದೆ.

ಕಿವೀಸ್‌ ತಂಡ : ಕೇನ್‌ ವಿಲಿಯಮ್ಸನ್‌ (ನಾಯಕ), ಫಿನ್‌ ಆಲೆನ್‌, ಟ್ರೆಂಟ್‌ ಬೌಲ್ಟ್‌, ಮೈಕಲ್‌ ಬ್ರೇಸ್‌ವೆಲ್‌, ಡೆವೋನ್‌ ಕಾನ್ವೇ, ಲಾಕಿ ಫರ್ಗ್ಯೂಸನ್‌, ಮಾರ್ಟಿನ್‌ ಗಪ್ಟಿಲ್‌, ಮ್ಯಾಟ್‌ ಹೆನ್ರಿ, ಟಾಮ್‌ ಲೇಥಮ್‌, ಡ್ಯಾರಿಲ್‌ ಮಿಚೆಲ್‌, ಜಿಮಿ ನೀಶಮ್, ಗ್ಲೆನ್‌ ಫಿಲಿಪ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಢಿ, ಟಿಮ್‌ ಸೌಥೀ.

ಹಿಂದಿನ ಲೇಖನ20 ವರ್ಷಗಳ ಹಿಂದೆಯೇ ಸಮಾಧಿ ನಿರ್ಮಿಸಿಕೊಂಡಿದ್ದ ವ್ಯಕ್ತಿ ನಿಧನ
ಮುಂದಿನ ಲೇಖನಸಮಾಜ, ದೇಶವೇ ಮೊದಲು: ಪ್ರಧಾನಿ ಮೋದಿ