ಮನೆ ರಾಷ್ಟ್ರೀಯ ನಿತೀಶ್ ಕುಮಾರ್, ಎಂ.ಕೆ.ಸ್ಟಾಲಿನ್ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ

ನಿತೀಶ್ ಕುಮಾರ್, ಎಂ.ಕೆ.ಸ್ಟಾಲಿನ್ ಜನ್ಮದಿನ: ಶುಭಾಶಯ ಕೋರಿದ ಪ್ರಧಾನಿ ಮೋದಿ

0

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನ್ಮದಿನದ ಶುಭಾಶಯ ಕೋರಿದ್ದಾರೆ.

ಜೆಡಿಯು ನಾಯಕರಾಗಿರುವ ನಿತೀಶ್ ಕುಮಾರ್ 72ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಡಿಎಂಕೆ ಪಕ್ಷದ ನಾಯಕರಾಗಿರುವ ಸ್ಟಾಲಿನ್ 70ನೇ ವರ್ಷದ ಸಂಭ್ರಮದಲ್ಲಿದ್ದಾರೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ ನಲ್ಲಿ, ಸ್ಟಾಲಿನ್‌ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ದೇವರು ಆರೋಗ್ಯಕರ ಜೀವನವನ್ನು ಆಶೀರ್ವದಿಸಲಿ ಎಂದು ಪ್ರಧಾನಿ ಮೋದಿ ಹಾರೈಸಿದ್ದಾರೆ.

ಹಿಂದಿನ ಲೇಖನದೆಹಲಿ ಸಂಪುಟಕ್ಕೆ ಅತಿಶಿ, ಸೌರಭ್ ಭಾರದ್ವಾಜ್ ಹೆಸರು ಶಿಫಾರಸ್ಸು
ಮುಂದಿನ ಲೇಖನರಾಜ್ಯದಲ್ಲಿನ ‘ಬೇಚರಾಕ್’ ಗ್ರಾಮಗಳ ಮಾಹಿತಿ ಸಲ್ಲಿಸಲು ಸರ್ಕಾರಕ್ಕೆ ಸೂಚಿಸಿದ ಹೈಕೋರ್ಟ್