ಮನೆ ಮನರಂಜನೆ ವಿಕ್ರಂ ವೇದಾ: ಸೈಫ್ ಅಲಿ ಖಾನ್ ಫಸ್ಟ್ ಲುಕ್ ಬಿಡುಗಡೆ

ವಿಕ್ರಂ ವೇದಾ: ಸೈಫ್ ಅಲಿ ಖಾನ್ ಫಸ್ಟ್ ಲುಕ್ ಬಿಡುಗಡೆ

0

ಬೆಂಗಳೂರು: 2017ರಲ್ಲಿ ತೆರೆಕಂಡ ತಮಿಳು ಚಿತ್ರ ‘ವಿಕ್ರಂ ವೇದಾ’ ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು, ನಟ ಹೃತಿಕ್ ರೋಷನ್, ಸೈಫ್‌ ಅಲಿ ಖಾನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ವಿಕ್ರಂ ವೇದಾ ಚಿತ್ರದಲ್ಲಿನ ಸೈಫ್ ಅಲಿ ಖಾನ್ ಅವರ ಫಸ್ಟ್ ಲುಕ್ ಅನ್ನು ಹೃತಿಕ್‌ ರೋಷನ್‌ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್‌ ಪಾತ್ರದಲ್ಲಿ  ಸೈಫ್ ಅಲಿ ಖಾನ್ ನಟಿಸುತ್ತಿದ್ದು, ಟೀ ಶರ್ಟ್ ಹಾಗೂ ಕಪ್ಪು ಕನ್ನಡಕವನ್ನು ಧರಿಸಿ ಒರಟು ನೋಟವನ್ನು ಬೀರಿದ್ದಾರೆ.

‘ಅತ್ಯುತ್ತಮ ನಟರಲ್ಲಿ ಒಬ್ಬರು’ ಎಂದು ಸೈಫ್ ಅವರ ಕುರಿತು ಹೃತಿಕ್‌ ಬರೆದುಕೊಂಡಿದ್ದಾರೆ. ‘ಹಲವು ವರ್ಷಗಳಿಂದ ನಾನು ಮೆಚ್ಚಿದ ಅತ್ಯುತ್ತಮ ನಟ ಮತ್ತು ಸಹೋದ್ಯೋಗಿಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಈ ಅನುಭವವನ್ನು ಖಂಡಿತವಾಗಿಯೂ ನಾನು ಸಂಭ್ರಮಿಸುತ್ತೇನೆ’ ಎಂದೂ ಹೃತಿಕ್‌ ತಿಳಿಸಿದ್ದಾರೆ.

 ಪುಷ್ಕರ್‌ ಗಾಯತ್ರಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ ‘ವಿಕ್ರಂ ವೇದಾ’ ಸಿನಿಮಾ ಬಿಡುಗಡೆಯಾಗಲಿದೆ.