ಮನೆ ರಾಜಕೀಯ ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕತೆಗೆ ಅವಕಾಶವಿಲ್ಲ: ಪ್ರತಾಪ್ ಸಿಂಹ

ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕತೆಗೆ ಅವಕಾಶವಿಲ್ಲ: ಪ್ರತಾಪ್ ಸಿಂಹ

0

ಮೈಸೂರು: ಹಿಜಾಬ್ ಹಾಕಿಕೊಂಡು, ಟೋಪಿ ಹಾಕಿಕೊಂಡು ನೀವು ಕಲಿಯಬೇಕು ಎಂಬುದಾದರೆ ಮದರಾಸಗೆ ಹೋಗಿ. ಮದರಸದಲ್ಲಿ ನಿಮ್ಮ ಪ್ರತ್ಯೇಕ ಭಾವನೆ ಕಾಪಾಡಿ ಕೊಳ್ಳಬಹುದು. ಆದರೆ ಸರ್ಕಾರಿ ಶಾಲೆಗಳಲ್ಲಿ ಈ ಪ್ರತ್ಯೇಕತೆ ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದರು.

ಇದು ಬ್ರಿಟಿಷರ ಭಾರತವಲ್ಲ, ಇದು ಭರತ ಖಂಡ. ಹಿಂದೂ ಧರ್ಮದ ಬುನಾದಿ ಮೇಲೆ ಇರುವ ದೇಶವಿದು. ಇಲ್ಲಿ ಗಣಪತಿ ಪೂಜೆ, ಹೆಣ್ಣು ಮಕ್ಕಳ ಕುಂಕುಮ‌ ಸಂಸ್ಕೃತಿಯ ಭಾಗ. ಇದನ್ನು ಯಾರು ಪ್ರಶ್ನಿಸುವಂತಿಲ್ಲ. ಇಸ್ಲಾಂ, ಕ್ರಿಶ್ಚಿಯನ್ ಮರುಭೂಮಿಯಲ್ಲಿ ಹುಟ್ಟಿ ನೆಲೆಗಾಗಿ ಹುಡುಕಿಕೊಂಡು ಇಲ್ಲಿಗೆ ಬಂದಿವೆ. ಇಲ್ಲಿಗೆ ಬಂದ ಮೇಲೆ ಹಿಂದೂ ಸಂಸ್ಕೃತಿಯನ್ನು ಒಪ್ಪಿಕೊಳ್ಳಬೇಕು. ಕ್ರಿಶ್ಚಿಯನ್, ಇಸ್ಲಾಂ ಧರ್ಮದ ಏರಿಕೆ ಇಲ್ಲಿ ನಡೆಯುವುದಿಲ್ಲ. ಈ ನೆಲದ ಸಂಸ್ಕೃತಿಯನ್ನು ಕ್ರಿಶ್ಚಿಯನ್, ಇಸ್ಲಾಂ ಧರ್ಮಗಳು ಒಪ್ಪಿಕೊಳ್ಳಬೇಕು ಎಂದು ಪ್ರತಾಪ್ ಸಿಂಹ ಹೇಳಿದರು.

ಎಲ್ಲಾ ರೀತಿಯ ಒತ್ತಡ, ಟೀಕಾಪ್ರಹಾರದ ನಡುವೆಯೂ ಸಮವಸ್ತ್ರ ಕಡ್ಡಾಯಕ್ಕೆ ಸರಕಾರ ಬದ್ಧವಾಗಿರೋದು ಒಳ್ಳೆಯ ಸಂದೇಶ. ಹಿಜಾಬ್ ಗಾಗಿ ಇಷ್ಟು ಹಠ ಹಿಡಿದು ಯಾಕಾಗಿ ವಿದ್ಯಾರ್ಥಿಗಳು ಕೂತಿದ್ದಾರೆ. ಸಮವಸ್ತ್ರ ಎನ್ನುವುದು ಬರೀ ಬಣ್ಣದ ಉಡುಪಲ್ಲ. ಅದು ಎಲ್ಲಾ ಮಕ್ಕಳು ಸಮಾನರು ಎಂದು ಸಾರುವ ಉಡುಪು. ಎಲ್ಲರು ಕಾಲೇಜಿಗೆ ಜಾಬ್ ಗಾಗಿ ಬರುತ್ತಾರೆ ನೀವು ಹಿಜಾಬ್ ಗಾಗಿ ಬರುತ್ತೀದ್ದೀರಾ.? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.

ಅಧಿಕಾರಕ್ಕಾಗಿ ಸಿದ್ದರಹೀಮ್ ಅಯ್ಯ ಅಂತಾ ಹೆಸರು ಬದಲಾಯಿಸಿಕೊಳ್ಳುತ್ತಾರೆ:

ಹಿಜಾಬ್ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಾಪ್ ಸಿಂಹ ಕಿಡಿಕಾರಿದರು. ಸಿದ್ದರಾಮಯ್ಯ ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ. ಗೋರಿಪಾಳ್ಯದ ಜಮೀರ್ ಅಹಮದ್ ಈಗ ಸಿದ್ದರಾಮಯ್ಯ ಅವರನ್ನು ಚಾಮರಾಜ ಪೇಟೆಯಲ್ಲಿ ಚುನಾವಣೆ ಗೆ ಸ್ಪರ್ಧಿಸಲು ಕರೆಯುತ್ತಿದ್ದಾರೆ. ಅಧಿಕಾರಕ್ಕಾಗಿ ಸಿದ್ದರಾಮಯ್ಯ ಸಿದ್ದರಹೀಮ್ ಅಯ್ಯ ಅಂತಾ ಬೇಕಾದರೆ ಹೆಸರು ಬದಲಾಯಿಸಿ ಕೊಳ್ಳುತ್ತಾರೆ ಎಂದು ಪ್ರತಾಪ್ ಸಿಂಹ ಲೇವಡಿ ಮಾಡಿದರು.

ಹಿಂದಿನ ಲೇಖನಸರ್ವಧರ್ಮ ಸಮನ್ವಯದ ಪ್ರವಚನಕಾರ ಇಬ್ರಾಹಿಂ ಸುತಾರ ಇನ್ನಿಲ್ಲ
ಮುಂದಿನ ಲೇಖನ2023ರ ವಿಧಾನಸಭೆ ಚುನಾವಣೆ: ಶೀಘ್ರದಲ್ಲೇ ಬಿ.ಎಸ್. ಯಡಿಯೂರಪ್ಪ ಅವರಿಂದ ರಾಜ್ಯ ಪ್ರವಾಸ