ಮನೆ ಕಾನೂನು ತ್ರಿಬಲ್ ರೈಡಿಂಗ್ ಅಪಘಾತಕ್ಕೆ ಪರಿಹಾರ ಇಲ್ಲ: ಮದ್ರಾಸ್ ಹೈಕೋರ್ಟ್

ತ್ರಿಬಲ್ ರೈಡಿಂಗ್ ಅಪಘಾತಕ್ಕೆ ಪರಿಹಾರ ಇಲ್ಲ: ಮದ್ರಾಸ್ ಹೈಕೋರ್ಟ್

0

ಚೆನ್ನೈ(Chennai): ದ್ವಿಚಕ್ರ ವಾಹನದಲ್ಲಿ ನಿಯಮ ಮೀರಿ ಮೂವರು ಪ್ರಯಾಣಿಸುತ್ತಿದ್ದ ಕಾರಣ ಚಾಲಕನ ಕುಟುಂಬಕ್ಕೆ ಮೋಟಾರು ವಾಹನಗಳ ನಿಯಮಗಳ ಅನ್ವಯ ಪರಿಹಾರ ನೀಡಲು ಸಾಧ್ಯವಾಗದು. ಜೊತೆಗೆ ಆತ ಇನ್ನಿಬ್ಬರ ಸಾವಿಗೆ ಕಾರಣನಾಗಿದ್ದಾರೆ ಎಂದು ಮದ್ರಾಸ್ ಹೈಕೋರ್ಟ್ ನ್ಯಾ.ಆರ್.ತಾರಣಿ ನೇತೃತ್ವದ ನ್ಯಾಯಪೀಠ ಆದೇಶ ನೀಡಿದೆ.

ಹೀಗಾಗಿ ಮೋಟಾರು ವಾಹನಗಳ ಅಪಘಾತ ನ್ಯಾಯಮಂಡಳಿ (ಎಂಎಸಿಟಿ)ಯ ವಾದ ಒಪ್ಪಲಾಗದು ಎಂದು ಅಭಿಪ್ರಾಯಪಟ್ಟಿದೆ.

ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಮೂವರು ರಸ್ತೆ ಅಪಘಾತದಲ್ಲಿ ಅಸುನೀಗಿದ್ದರು. ಮೋಟಾರು ವಾಹನಗಳ ಅಪಘಾತ ನ್ಯಾಯಮಂಡಳಿ ಪ್ರಕರಣದ ವಿಚಾರಣೆ ನಡೆಸಿ ಬೈಕ್ ಚಾಲಕನ ಕುಟುಂಬಕ್ಕೆ 4,50,000 ರೂ. ಪರಿಹಾರ ಪ್ರಕಟಿಸಿತ್ತು. ಆದರೆ ತೀರ್ಮಾನ ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್ ನಲ್ಲಿ ನಡೆದಿದ್ದ ಮೇಲ್ಮನವಿ ವಿಚಾರಣೆ ವೇಳೆ ನ್ಯಾ.ಆರ್.ತಾರಿಣಿ ನೇತೃತ್ವದ ನ್ಯಾಯಪೀಠ ‘ಅಪಘಾತದ ವೇಳೆ ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುತ್ತಿದ್ದರು, ಇದು ನಿಯಮಗಳಿಗೆ ವಿರುದ್ಧವಾದದ್ದು, ಅವರಿಬ್ಬರೂ ಅಪಘಾತಕ್ಕೆ ಕಾರಣರಾಗಿದ್ದಾರೆ. ಜತೆಗೆ ಬೈಕ್ ಸವಾರ ಕೂಡ ಅವರಿಬ್ಬರ ಸಾವಿಗೆ ಕಾರಣನಾಗಿದ್ದಾನೆ. ಆತನ ಕುಟುಂಬಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತೀರ್ಪು ನೀಡಿದೆ.

ವಿಮಾ ಕಂಪೆನಿ ನ್ಯಾಯಮಂಡಳಿ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಜೊತೆಗೆ ಬೈಕ್ ಸವಾರ ಮದ್ಯ ಸೇವಿಸಿದ್ದ ಘಟನೆ, ನಡೆದ ದಿನಾಂಕ, ಸಮಯವನ್ನು ತಪ್ಪಾಗಿ ನಮೂದಿಸಲಾಗಿದೆ ಎಂದು ವಾದಿಸಿತ್ತು. ಹೀಗಾಗಿ ಸವಾರನಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತು.

ಹಿಂದಿನ ಲೇಖನನರೇಗಾ ಎಂ.ಐ.ಎಸ್ ನಿರ್ವಹಣಾ ಕಾರ್ಯಾಗಾರಕ್ಕೆ ಚಾಲನೆ
ಮುಂದಿನ ಲೇಖನಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ