ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಡಿ ಸರಳವಾಗಿ ಮಹಿಳೆಯರಿಗೆ ಹಣ ತಲುಪಿಸಲು ಚರ್ಚೆ ಮಾಡಿದ್ದೇವೆ. ಅರ್ಜಿ ನಮೂನೆ ಬಗ್ಗೆ ಯಾವುದೇ ಗೊಂದಲವಿಲ್ಲ. ಓಟರ್ ಐಡಿ ಸಂಖ್ಯೆ, ಪಾಸ್ ಬುಕ್ ಬೇಡವೆಂದು ಸಿಎಂ ಸೂಚಿಸಿದ್ದಾರೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಈ ಯೋಜನೆಗೆ ಆನ್ ಲೈನ್, ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಗ್ರಾಮೀಣ ಭಾಗದಲ್ಲಿರುವವರು ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಕೂಲಂಕುಷವಾಗಿ ಅಧ್ಯಯನ ಮಾಡಿ ನಿಯಮ ಹಾಕಿದ್ದೇವೆ. ಈಗ ಇರುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಎಪಿಎಲ್ ರೇಷನ್ ಕಾರ್ಡ್ ಗೆ ಹೊಸದಾಗಿ ಅರ್ಜಿ ಹಾಕಿದವರು ಮತ್ತು ಜಿಎಸ್ಟಿ ರಿಟರ್ನ್ ಮಾಡುವರನ್ನು ಈ ಯೋಜನೆಗೆ ಸೇರಿಸುವ ಬಗ್ಗೆ ಮನವಿ ಮಾಡಿದ್ದೇವೆ. ಈಗ ಈ ಯೋಜನೆಯಿಂದ 85-88% ಕುಟುಂಬಗಳು ಲಾಭ ಪಡೆಯಲಿವೆ. ಜನರಿಗೆ ಯಾವುದೇ ಗೊಂದಲ ಇಲ್ಲ. ಸರಿಯಾದ ಕ್ಲಾರಿಟಿ ಇದೆ. ಇಲಾಖೆಯಲ್ಲಿ ಚರ್ಚೆ ಮಾಡಿಯೇ ಎಲ್ಲಾ ನಿರ್ಧಾರ ಮಾಡಿದ್ದೇವೆ ಎಂದರು.
ಎರಡು ತಿಂಗಳು ಡಾಟಾ ಎಂಟ್ರಿಗೆ ತಾತ್ಕಾಲಿಕವಾಗಿ ಕಚೇರಿ ಪ್ರಾರಂಭ ಮಾಡುತ್ತೇವೆ. ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಇಲ್ಲವರಿಗೆ ಸದ್ಯ ಯೋಜನೆ ಸಿಗುವುದಿಲ್ಲ. ಈಗ ಹೊಸದಾಗಿ ಅನೇಕ ಜನ ಅರ್ಜಿ ಹಾಕಿದ್ದಾರೆ. ಆದರೆ ಸದ್ಯ ಕಾರ್ಡ್ಗೆ ಅರ್ಜಿ ಹಾಕಿದ್ದವರಿಗೆ ಯೋಜನೆ ಸಿಗೊಲ್ಲ. ಮುಂದಿನ ದಿನಗಳಲ್ಲಿ ಅವರನ್ನ ಸೇರಿಸುವ ಪ್ರಯತ್ನ ಮಾಡುತ್ತೇವೆ. ಈಗ ಇರುವ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸಚಿವರು ಹೇಳಿದ್ದಾರೆ.
ಅಧಿಕಾರಿಗಳು ಸುಖಾ ಸುಮ್ಮನೆ ಅರ್ಜಿ ರಿಜೆಕ್ಟ್ ಮಾಡುವಂತೆ ಇಲ್ಲ. ಅರ್ಜಿ ರಿಜೆಕ್ಟ್ ಮಾಡಲು ಸಕಾರಣ ಇರಬೇಕು. ಇಲ್ಲದೆ ಹೋದರೆ ಮತ್ತೆ ಫಲಾನುಭವಿಗಳು ಅರ್ಜಿ ಹಾಕಬಹುದು. ಇದೇ 15 ರಿಂದ ಜುಲೈ 15 ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.
ಮಕ್ಕಳು ತೆರಿಗೆ ಪಾವತಿ ಮಾಡಿದ್ರು ಅ ಕುಟುಂಬಕ್ಕೆ ಯೋಜನೆ ಇಲ್ಲ. ಪತಿ-ಪತ್ನಿ ಇಬ್ಬರಲ್ಲಿ ಒಬ್ಬರು ತೆರಿಗೆ ಪಾವತಿ ಮಾಡಿದರೆ ಯೋಜನೆ ಅನ್ವಯ ಇಲ್ಲ ಅಂತ ಆದೇಶವನ್ನು ಸರ್ಕಾರ ಹೊರಡಿಸಿದೆ. ಆದರೆ ಈಗ ಮಕ್ಕಳು ತೆರಿಗೆ ಪಾವತಿ ಮಾಡಿದರೂ ಆ ಕುಟುಂಬಕ್ಕೆ ಯೋಜನೆ ಇಲ್ಲ. ಹಾಗೂ ಸರ್ಕಾರಿ ನೌಕರರು ತೆರಿಗೆ ಪಾವತಿ ಮಾಡ್ತಾರೆ. ಹೀಗಾಗಿ ಸರ್ಕಾರಿ ನೌಕರರಿಗೂ ಯೋಜನೆ ಅನ್ವಯ ಇಲ್ಲ ಎಂದರು.