ಮನೆ ಕವನ ” ಮರೀಚಿಕೆ “- ಕವನ

” ಮರೀಚಿಕೆ “- ಕವನ

0

ಬುವಿಯಲಿ ಹಲವರಿಗೆ..

ಬಾಗುವುದಕ್ಕಿಂತ ಬೀಗುವುದಕ್ಕೇ

ಜೀವ ಸದಾ ತುಡಿಯುತ್ತದೆ.

ಆಳಾಗುವುದಕ್ಕಿಂತ ಆಳುವುದಕ್ಕೇ

ಮನ ಸತತ ಮಿಡಿಯುತ್ತದೆ.

ದಣಿವುದಕ್ಕಿಂತ ಧಣಿಯಾಗುವುದಕ್ಕೇ

ದೇಹ ನಿತ್ಯವೂ ಬೇಡುತ್ತದೆ.

ಹಾಗಾಗಿ ತಪಸ್ಸೆಂಬುದು

ಮರೀಚಿಕೆಯಾಗಿಯೇ ಕಂಡಿದೆ, ಯಶಸ್ಸೆಂಬುದು

ತೀರದ ಕನಸಾಗಿಯೇ ಕಾಡಿದೆ.

  • ಎ. ಎನ್. ಆರ್
ಹಿಂದಿನ ಲೇಖನಲೋಕಾಯುಕ್ತ ಬಲೆಗೆ ಬಿದ್ದ ಬಿಬಿಎಂಪಿ ಖಾತೆ ಬದಲಾವಣೆ ಜಂಟಿ ಆಯುಕ್ತ
ಮುಂದಿನ ಲೇಖನಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಚರ್ಚ್ ತೆರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳು