ನವದೆಹಲಿ(NewDelhi): 25 ಕೆಜಿಗಿಂತ ಕೆಳಗಿನ ಪ್ಯಾಕ್ ಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ. 25 ಕೆಜಿ ಮೇಲ್ಪಟ್ಟ ಧಾನ್ಯ ವಸ್ತುಗಳಿಗೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಿಹಿ ಲಸ್ಸಿ ಧಾನ್ಯಗಳು, ಅಕ್ಕಿ, ಅವಲಕ್ಕಿ, ಮಂಡಕ್ಕಿ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಿರುವುದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿರುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಪ್ಯಾಕ್ ಮಾಡಿರುವ ಬ್ರಾಂಡೆಡ್ ಅಲ್ಲದ ಮತ್ತು ಲೇಬಲ್ ಅಂಟಿಸಿದ ಆಹಾರ ಪದಾರ್ಥಗಳಿಗೆ ಶೇಕಡ 5ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಬ್ರಾಂಡೆಡ್ ಅಲ್ಲದ ಸರಕುಗಳಿಗೆ ತೆರಿಗೆ ಇಲ್ಲವೆಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕ ಮಂಡಳಿ ಸ್ಪಷ್ಟಪಡಿಸಿದೆ.
25 ಕೆಜಿವರೆಗಿನ ಹಿಟ್ಟಿಗೆ ಶೇಕಡ 5 ರಷ್ಟು ಜಿಎಸ್‌ಟಿ ಅನ್ವಯವಾಗಲಿದ್ದು, 25 ಕೆಜಿ ಮೇಲ್ಪಟ್ಟ ಚೀಲಗಳಿಗೆ ವಿನಾಯಿತಿ ನೀಡಲಾಗುವುದು. 10 ಕೆಜಿ, 15 ಕೆಜಿ, 20 ಕೆಜಿ ತೂಕದ ಹಿಟ್ಟಿನ ಚೀಲಗಳಿಗೆ ಜಿಎಸ್’ಟಿ ಅನ್ವಯವಾಗುತ್ತದೆ. ಬ್ರಾಂಡೆಡ್ ಅಲ್ಲದ ಸರಕುಗಳಿಗೆ ತೆರಿಗೆ ಇಲ್ಲವೆಂದು ಸ್ಪಷ್ಟನೆ ನೀಡಲಾಗಿದೆ. 50 ಕೆಜಿವರೆಗೆ ಒಂದೇ ಚೀಲದಲ್ಲಿ ಅಕ್ಕಿ ಇದ್ದರೂ ಅದನ್ನು ಪ್ರಿಪ್ಯಾಕ್ ಮತ್ತು ಲೇಬಲ್ಡ್ ಎಂದು ಪರಗಣಿಸುವುದಿಲ್ಲ ಎಂದು ಹೇಳಿದೆ.