ಮನೆ ಅಪರಾಧ ರೇಣುಕಾ ಸ್ವಾಮಿ ಕೊಲೆ ಕೇಸ್ : ಪವಿತ್ರಾ ಗೌಡ ಎ 1, ದರ್ಶನ್ ಎ 2

ರೇಣುಕಾ ಸ್ವಾಮಿ ಕೊಲೆ ಕೇಸ್ : ಪವಿತ್ರಾ ಗೌಡ ಎ 1, ದರ್ಶನ್ ಎ 2

0

ಬೆಂಗಳೂರು: ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕಾಗಿ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಕೊಲೆ ಮಾಡಿದ ಆರೋಪ ದರ್ಶನ್​ ಮೇಲಿದೆ.

ಕೇಸ್​ ನಲ್ಲಿ ಪವಿತ್ರಾ ಗೌಡ  ಎ1 ಆಗಿದ್ದು, ದರ್ಶನ್​ ಎ2 ಹಾಗೂ ಕೆ. ಪವನ್​ ಎ3 ಆಗಿದ್ದಾನೆ. ಎಲ್ಲರ ಮೆಡಿಕಲ್​ ಟೆಸ್ಟ್​ ಮಾಡಿಸಲಾಗಿದೆ. ಒಟ್ಟು 13 ಜನರನ್ನು ಇಂದು (ಜೂನ್​ 11) ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.

ದರ್ಶನ್​, ಪವಿತ್ರಾ ಗೌಡ ಹಾಗೂ ಅವರ ಸಹಚರರ ವಿರುದ್ಧ ಅನೇಕ ಸಾಕ್ಷಿಗಳು ಸಿಗುತ್ತಿವೆ. ಕೊಲೆ ನಡೆದ ಶೆಡ್ ​ಗೆ ಅದೇ ರಾತ್ರಿ ದರ್ಶನ್​ ಕಾರು ಬಂದಿತ್ತು ಎಂಬುದಕ್ಕೆ ಸಿಸಿಟಿವಿ ದೃಶ್ಯಗಳು ಲಭ್ಯವಾಗಿವೆ. ಪ್ರಾಥಮಿಕ ತನಿಖೆ ನಡೆದಿದೆ.

ಹೆಚ್ಚಿನ ತನಿಖೆಗಾಗಿ ಪೊಲೀಸ್​ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಾಗಿದೆ.

ಹಿಂದಿನ ಲೇಖನ‘ಕಲ್ಕಿ 2898 ಎಡಿ’ ಟ್ರೇಲರ್: 24 ಗಂಟೆಯೊಳಗೆ 13 ಮಿಲಿಯನ್​ ವೀಕ್ಷಣೆ
ಮುಂದಿನ ಲೇಖನತುಮಕೂರು: ಲಕ್ಕಮ್ಮ-ಕೆಂಪಮ್ಮ ಜಾತ್ರೆಯಲ್ಲಿ ಭಾಗಿಯಾಗಿದ್ದ 35 ಜನ ಅಸ್ವಸ್ಥ