ಮನೆ ಸಾಹಿತ್ಯ ಏನೇ ಕಷ್ಟ ಬಂದರೂ ಮೂಲ ಸ್ವಭಾವವನ್ನು ಬಿಡಬೇಡಿ, ಇದು ಹೂವಿನ ಪಾಠ

ಏನೇ ಕಷ್ಟ ಬಂದರೂ ಮೂಲ ಸ್ವಭಾವವನ್ನು ಬಿಡಬೇಡಿ, ಇದು ಹೂವಿನ ಪಾಠ

0

ನಮ್ಮ ಜೀವನವು ಕೂಡ ಸದಾ ಹೂವಿನಂತೆ ಅರಳಬೇಕು, ಯಾವುದೇ ಪರಿಸ್ಥಿತಿಯಲ್ಲೂ ನಗುವನ್ನು ನಿಮ್ಮ ಮುಖದಿಂದ ದೂರವಾಗಲು ಬಿಡಬೇಡಿ. ಯಶಸ್ಸು ಸಿಗದಿದ್ದರೂ ಸಂತೋಷವಾಗಿರಲು ಪ್ರಯತ್ನಿಸಿ ಆಗ ಮಾತ್ರ ನೀವು ಜೀವನವನ್ನು ಆನಂದಿಸಲು ಸಾಧ್ಯ. ನಿಮ್ಮ ಮನಸ್ಸಿನಲ್ಲಿ ಗೊಂದಲಗಳಿದ್ದರೆ, ನೀವು ಹಸಿರನ್ನು ಅಥವಾ ಯಾವುದೇ ಹೂವನ್ನು ನೋಡಿದಾಕ್ಷಣ ಎಲ್ಲವನ್ನೂ ಮರೆತುಬಿಡುತ್ತೀರಿ. ಹೂವುಗಳ ನೋಟವು ನಿಮ್ಮ ಮನಸ್ಸಿಗೆ ಆನಂದವನ್ನು ನೀಡುತ್ತದೆ.

ಒತ್ತಡ ಹಾಗೂ ಆತಂಕಕ್ಕೆ ಬಲಿಯಾಗಬೇಡಿ ಹೂವುಗಳಲ್ಲಿ ಹಲವು ವಿಧ, ಹಲವು ಬಣ್ಣ ಅದರ ಕೋಮಲವಾದ ದಳಗಳು ಶಾಖವಿರಲಿ, ಹಿಮವಿರಲಿ, ಮಳೆಗಾಲವಿರಲಿ ಎಲ್ಲವನ್ನೂ ಒಂದೇ ರೀತಿಯಾಗಿ ಎದುರಿಸುತ್ತವೆ, ಹವಾಮಾನದ ಹೊರತಾಗಿಯೂ ದಳಗಳು ಗಟ್ಟಿಯಾಗುವುದಿಲ್ಲ. ಏನೇ ಕಷ್ಟ ಬಂದರೂ ನಿಮ್ಮ ಮೂಲ ಸ್ವಭಾವವನ್ನು ಬಿಡಬಾರದು ಎಂಬುದನ್ನು ಹೂವಿನ ಮೂಲಕ ಕಲಿಯಿರಿ.

ಸಂತೋಷವಾಗಿರಲು ಕಲಿಯಿರಿ ದುರ್ಬಲವಾಗಿದ್ದರೂ, ಹೂವುಗಳು ಯಾವಾಗಲೂ ನಮ್ಮ ಹೃದಯದಲ್ಲಿ ಅಮೂಲ್ಯವಾದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಅವರ ಸೌಮ್ಯತೆ ಮತ್ತು ಸುಗಂಧವು ನಮ್ಮ ದೈನಂದಿನ ಜೀವನದಲ್ಲಿ ಅವರ ಗುರುತು ಬಿಡುತ್ತವೆ. ಕೆಲವೊಂದು ಹೂವುಗಳು ಎಷ್ಟು ಸಣ್ಣಗಿದ್ದರೂ ಆಹಾ ನೋಡು ಎಷ್ಟು ಕ್ಯೂಟ್ ಆಗಿದೆ ಎನ್ನುತ್ತೇವೆ. ಹಾಗೆಯೇ ಇನ್ನೊಬ್ಬರ ಮುಖದಲ್ಲಿ ನಗು ಮೂಡಲು ನಾವೇ ಕಾರಣರಾದಾಗ ನಮಗೆ ತೃಪ್ತಿಯ ಭಾವ ಮೂಡುತ್ತದೆ.

ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವ ಬೆಳೆಸಿಕೊಳ್ಳಿ ಹೂವುಗಳು ಕೊಚ್ಚೆಯಲ್ಲೂ ಅರಳಬಹುದು, ನಿಮ್ಮ ಮನೆಯ ಕಾಂಪೌಂಡ್​ನಲ್ಲಿಯೂ ಅರಳಬಹುದು, ರಸ್ತೆಯ ಬದಿಯಲ್ಲೂ ಅರಳಬಹುದು, ತೋಟದಲ್ಲೂ ಅರಳಬಹುದು, ಆದರೆ ಹೂವಿಗೆ ಬೇಧಭಾವವಿಲ್ಲ, ಹಾಗೆಯೇ ಮನುಷ್ಯ ಕೂಡ ಒಂದೇ ರೀತಿಯಲ್ಲಿರಲು ಪ್ರಯತ್ನಿಸಬೇಕು.

ಹೋರಾಟ ಮಾಡಬೇಕು ಕಷ್ಟ ಪಟ್ಟರೆ ಗೆಲವು ಸಾಧ್ಯ, ಹೂವಿನ ಜತೆ ಮುಳ್ಳುಗಳಿರುತ್ತೆ, ಆದರೆ ಸೌಂದರ್ಯ ಕಡಿಮೆಯಾಗುವುದಿಲ್ಲ. ಆಕಸ್ಮಿಕವಾಗಿ ಹೂವುಗಳನ್ನು ತೆಗೆದುಕೊಂಡರೆ ಕೈಗೆ ಚುಚ್ಚುತ್ತದೆ, ಸೌಜನ್ಯದಿಂದ ವರ್ತಿಸಬೇಕು ಎಂಬುದನ್ನು ಹೂವುಗಳು ಕಲಿಸುತ್ತವೆ. ಅಗತ್ಯವಿದ್ದಲ್ಲಿ ಪ್ರತಿಭಟನೆ ಮಾಡಿ, ಎಲ್ಲಕ್ಕೂ ಕಾಂಪ್ರಮೈಸ್ ಆಗುವ ಅಗತ್ಯವಿಲ್ಲ, ಆದರೆ ಹೂವಿನಿಂದ ನೀವು ಕಲಿಯುವುದು ತುಂಬಾ ಇದೆ.