ಮನೆ ರಾಜ್ಯ ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡಲು ಯಾವುದೇ: ರಣದೀಪ್ ಸಿಂಗ್ ಸುರ್ಜೇವಾಲಾ

ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡಲು ಯಾವುದೇ: ರಣದೀಪ್ ಸಿಂಗ್ ಸುರ್ಜೇವಾಲಾ

0

ಬೆಳಗಾವಿ: ಸಚಿವ ಸತೀಶ ಜಾರಕಿಹೊಳಿಗೆ ಕಾಂಗ್ರೆಸ್ ನಿಂದ ನೋಟಿಸ್ ನೀಡಲಾಗಿದೆ ಎಂಬ ವಿಚಾರದ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ಪಷ್ಟನೆ ನೀಡಿದ್ದಾರೆ.

Join Our Whatsapp Group

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಹೇಳಿಕೆ ನೀಡಿದ ಅವರು ನನಗೆ ಗೊತ್ತಿಲ್ಲ ಯಾರೂ ಈ ವದಂತಿಗಳನ್ನೆಲ್ಲ ಹಬ್ಬಿಸುತ್ತಿದ್ದಾರೆ ಎಂದು, ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ ಅಲ್ಲದೆ ಬಿಜೆಪಿ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದು ಹೇಳಿದ್ದಾರೆ.

ಬೆಳಗಾವಿಯ ಐತಿಹಾಸಿಕ ಭೂಮಿಯ ಜೊತೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಬಂಧ ದಶಕಗಳಿಂದ ಇದೆ, ಈಗ ಮತ್ತೊಮ್ಮೆ ಜನವರಿ 21ರಂದು ಜೈ ಬಾಪು, ಜೈ ಭೀಮ, ಜೈ ಸಂವಿಧಾನ ರ‍್ಯಾಲಿ ಆಯೋಜನೆ ಮಾಡಲಾಗಿದ್ದು, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಸೇರಿ ದೇಶದ ಎಲ್ಲ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ ಎಂದರು.

ಸಂಸತ್‌ನಲ್ಲಿ ದೇಶದ ಗೃಹಮಂತ್ರಿ ಅಮಿತ್ ಶಾ ಕೇವಲ ಡಾ.ಬಾಬಾಸಾಹೇಬ ಅಂಬೇಡ್ಕರ್ ಅಪಮಾನ ಮಾತ್ರ ಮಾಡಿಲ್ಲ ಡಾ.ಬಾಬಾಸಾಹೇಬ ಅಂಬೇಡ್ಕರ್ ತತ್ವಗಳನ್ನು ನಂಬುವವರ ಬಗ್ಗೆ ಅಪಹಾಸ್ಯ ಮಾಡಿದ್ದಾರೆ, ಸಂವಿಧಾನಿಕ ಅಧಿಕಾರವನ್ನು ಬಿಜೆಪಿಯಿಂದ ಬುಲ್ಡೋಜರ್ ಕೆಳಗೆ ಹಿಸುಕಲಾಗುತ್ತಿದೆ ಹೀಗಾಗಿ ಜನವರಿ 21ರಂದು ಬೆಳಗಾವಿಯಲ್ಲಿ ಜೈ ಬಾಪು ಜೈ ಭೀಮ ಸಂವಿಧಾನ ರ‍್ಯಾಲಿ, ಜನವರಿ 27ರಂದು ಅಂಬೇಡ್ಕರ್ ಜನ್ಮಸ್ಥಾನ ಮಧ್ಯಪ್ರದೇಶದಲ್ಲಿ ರ‍್ಯಾಲಿ ನಡೆಸಲಿದೆ ಎಂದರು.

ಒಂದೆಡೆ ಡಾ.ಬಾಬಾಸಾಹೇಬ ಅಂಬೇಡ್ಕರರಿಗೆ ಅಪಮಾನ ಮಾಡ್ತಾರೆ ಮತ್ತೊಂದೆಡೆ ದಲಿತರು, ಹಿಂದುಳಿದವರ, ಮಹಿಳೆಯರು, ಯುವಕರ ಅಧಿಕಾರ ಕಿತ್ತಕೊಳ್ಳುತ್ತಾರೆ ಹೀಗಾಗಿ ದೇಶಾದ್ಯಂತ ಇಂದು ಹೊಸ ಕ್ರಾಂತಿ ಮಾಡುವ ಅವಶ್ಯಕತೆ ಇದೆ ಹೀಗಾಗಿ ಬೆಳಗಾವಿಯಿಂದ ಹೊರಹೊಮ್ಮುವ ಧ್ವನಿ ದೇಶದ ರಾಜಕಾರಣಕ್ಕೆ ಹೊಸ ದಿಶೆ ನೀಡಲಿದೆ 100 ವರ್ಷಗಳ ಮೊದಲು ಮಹಾತ್ಮ ಗಾಂಧಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾದಾಗ ಆಂಗ್ಲರ ಸರ್ಕಾರದಿಂದ ಸ್ವಾತಂತ್ರ್ಯ ಸಿಕ್ಕಿತ್ತು ಈಗ 100 ವರ್ಷಗಳ ಮೇಲೆ ಭೇದಭಾವ, ಸಂವಿಧಾನ ಮೇಲೆ ದಾಳಿಯ ವಿರುದ್ಧ ಹೊಸ ಕ್ರಾಂತಿಗೆ ಸೂತ್ರವಾಗಲಿದೆ ಇಂದು ಕೆಪಿಸಿಸಿ ಅಧ್ಯಕ್ಷರು ಬಂದು ಸಭೆ ಮಾಡಲಿದ್ದಾರೆ, ಬೆಳಗಾವಿಯ ಸಮಾವೇಶ ಐತಿಹಾಸಿಕವಾಗಲಿದೆ ಎಂದು ಹೇಳಿದರು.