ಮನೆ ರಾಜಕೀಯ ಪಿಎಫ್ಐ ಮೇಲೆ ಪೊಲೀಸ್ ದಾಳಿ ನಡೆದಿಲ್ಲ, ಮುಂಜಾಗರೂಕತಾ ಕ್ರಮವಾಗಿ ಮುಖಂಡರು ವಶಕ್ಕೆ: ಸಿಎಂ ಬೊಮ್ಮಾಯಿ

ಪಿಎಫ್ಐ ಮೇಲೆ ಪೊಲೀಸ್ ದಾಳಿ ನಡೆದಿಲ್ಲ, ಮುಂಜಾಗರೂಕತಾ ಕ್ರಮವಾಗಿ ಮುಖಂಡರು ವಶಕ್ಕೆ: ಸಿಎಂ ಬೊಮ್ಮಾಯಿ

0

ಬೆಂಗಳೂರು(Bengaluru): ರಾಜ್ಯಾದ್ಯಂತ ಪಿಎಫ್ಐ ಕಾರ್ಯಕರ್ತರ ಮೇಲೆ ಪೊಲೀಸ್ ದಾಳಿ ನಡೆದಿಲ್ಲ. ಬದಲಾಗಿ ಮುಂಜಾಗರೂಕತಾ ಕ್ರಮವಾಗಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಫ್’ಐ ಕಾರ್ಯಕರ್ತರನ್ನು  ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತಹಶೀಲ್ದಾರರ ಮೂಲಕ ಕೈಗೊಂಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಪೊಲೀಸರು ಹತ್ತು ಹಲವಾರು ಮಾಹಿತಿಯ ಆಧಾರದ ಮೇಲೆ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಅದನ್ನೇ ಕರ್ನಾಟಕ ಹಾಗೂ ಎಲ್ಲಾ ರಾಜ್ಯಗಳ ಪೊಲೀಸರು ಮಾಡಿದ್ದಾರೆ. ಎಷ್ಟು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಪೊಲೀಸರ ಬಳಿ ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು. ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಪಿಎಸ್ಐ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ದಾಳಿ ನಡೆದಿದ್ದು, ಹಲವು ಪಿಎಫ್ಐ ಮುಖಂಡರನ್ನು ಬಂಧಿಸಿದೆ. ಸಮಾಜದಲ್ಲಿ ಶಾಂತಿ ಕದಡುವ ಆರೋಪ ಹಾಗೂ ದುಷ್ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಹಲವರನ್ನು ಬಂಧಿಸಲಾಗಿದೆ.

ಹಿಂದಿನ ಲೇಖನನವರಾತ್ರಿ ಉಪವಾಸದ ಸಮಯದಲ್ಲಿ ಈ ಆಹಾರಗಳನ್ನು ಸೇವಿಸಿ
ಮುಂದಿನ ಲೇಖನಹಿರಿಯ ನಟಿ ಆಶಾ ಪಾರೇಖ್‌ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಗೆ ಆಯ್ಕೆ