ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್ ಮನ್ ಗೆ ಜಂಟಿಯಾಗಿ ಇಂದು 2023ರ ಶರೀರಶಾಸ್ತ್ರ ಅಥವಾ ವೈದ್ಯಕೀಯ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿದೆ.
ನ್ಯೂಕ್ಲಿಯೊಸೈಡ್ ಬೇಸ್ ಮಾರ್ಪಾಡುಗಳಿಗೆ ಸಂಬಂಧಿಸಿದ ಅವರ ಸಂಶೋಧನೆಗಳಿಗಾಗಿ ನೋಬೆಲ್ ಗೌರವ ನೀಡಲಾಗಿದೆ.
ಈ ಆವಿಷ್ಕಾರವು ಕರೋನಾ ವೈರಸ್ ವಿರುದ್ಧ ಪರಿಣಾಮಕಾರಿ MRNA ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿತು. ನೊಬೆಲ್ ಸಮಿತಿಯ ಕಾರ್ಯದರ್ಶಿ ಥಾಮಸ್ ಪರ್ಲ್ ಮನ್ ಕೊರೊಲಿನ್ಸ್ಕಾ ಅವರು ಈ ಪ್ರಶಸ್ತಿಯನ್ನು ನೀಡಿದರು.
2022 ರಲ್ಲಿ ಸ್ವೀಡನ್ ನ ಸ್ವಾಂಟೆ ಪಾಬೊ ಅವರಿಗೆ ಈ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗಿತ್ತು. ಕಟಾಲಿನ್ ಕರಿಕೊ ಅವರು 2022 ರವರೆಗೆ ಬಯೋ ಎನ್ ಟೆಕ್ ನಲ್ಲಿ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸದ್ದರು. ಆರ್ ಎನ್ ಎ ಪ್ರೋಟೀನ್ ಮುಖ್ಯಸ್ಥರಾಗಿದ್ದರು. ನಂತರ ಒಂದು ಸಂಶೋಧನಾ ಕಂಪನಿಯ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಅವರು ಹಂಗೇರಿಯ ಸ್ಜೆಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಇದರ ಜತೆಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪೆರೆಲ್ ಮನ್ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
ಡ್ರೂ ವೈಸ್‌ಮನ್ ಅವರು ಪೆರೆಲ್ ಮನ್ ಲಸಿಕೆ ಸಂಶೋಧನ ಕೇಂದ್ರದ ಪ್ರಾಧ್ಯಾಪಕರಾಗಿದ್ದಾರೆ. ಕಟಾಲಿನ್ ಕರಿಕೊ ಮತ್ತು ಡ್ರೂ ವೈಸ್ ಮನ್ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳು ಅಭೂತಪೂರ್ವ. ಕೊರೊನಾ ಸಮಯದಲ್ಲಿ mRNA ಕೋವಿಡ್ -19 ಲಸಿಕೆಯು ಹೇಗೆ ಪ್ರತಿರಕ್ಷಣಾ ವ್ಯವಸ್ಥೆ ಉಂಟು ಮಾಡುತ್ತದೆ ಎಂಬುದನ್ನು ಸಂಶೋಧನೆ ನಡೆಸಿದ್ದಾರೆ.