ಮನೆ ತಂತ್ರಜ್ಞಾನ ನೂತನ ಸ್ಮಾರ್ಟ್‌’ಫೋನ್ ಬಿಡುಗಡೆ ಮಾಡಿದ ನೋಕಿಯಾ

ನೂತನ ಸ್ಮಾರ್ಟ್‌’ಫೋನ್ ಬಿಡುಗಡೆ ಮಾಡಿದ ನೋಕಿಯಾ

0

ನವದೆಹಲಿ: ಎಚ್‌ಎಂಡಿ ಗ್ಲೋಬಲ್ ಒಡೆತನದ ನೋಕಿಯಾ, ನೂತನ ಸ್ಮಾರ್ಟ್‌’ಫೋನ್ ಬಿಡುಗಡೆ ಮಾಡಿದೆ.

ಜಿ ಸರಣಿಯಲ್ಲಿ ಹೊಸದಾಗಿ ನೋಕಿಯಾ G60 5G ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, 5G ತಂತ್ರಜ್ಞಾನವನ್ನು ಬೆಂಬಲಿಸಲಿದೆ.

ಮೂರು ಪ್ರಮುಖ ಓಎಸ್ ಅಪ್‌’ಗ್ರೇಡ್, ಮೂರು ವರ್ಷಗಳ ಕಾಲ ಸೆಕ್ಯುರಿಟಿ ಅಪ್‌’ಡೇಟ್ ಹಾಗೂ ಎರಡು ವರ್ಷಗಳ ವಾರಂಟಿಯನ್ನು ನೋಕಿಯಾ, ನೂತನ G60 5G ಸ್ಮಾರ್ಟ್‌’ಫೋನ್ ಗ್ರಾಹಕರಿಗೆ ನೀಡಲಿದೆ.

ನೋಕಿಯಾ G60 5G6.58 ಇಂಚಿನ ಫುಲ್‌ಎಚ್‌ಡಿ+ ಡಿಸ್‌’ಪ್ಲೇ, 120Hz ರಿಫ್ರೆಶ್ ರೇಟ್ ಹೊಂದಿರುತ್ತದೆ. ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜೊತೆಗೆ 5+2 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಜತೆಗೆ 8 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.

4500 mAh ಬ್ಯಾಟರಿ, 20W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ. ಸ್ನ್ಯಾಪ್‌’ ಡ್ರ್ಯಾಗನ್ 695 5G ಪ್ರೊಸೆಸರ್ ಸಹಿತ 6 GB ಮತ್ತು 128 GB ಸ್ಟೋರೇಜ್ ಆಯ್ಕೆಯಲ್ಲಿ ಹೊಸ ನೋಕಿಯಾ G60 5G ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯ ಎಂದು ಕಂಪನಿ ಹೇಳಿದೆ.

ಬೆಲೆ ಮತ್ತು ಲಭ್ಯತೆ

ನವೆಂಬರ್ 8 ರಿಂದ ಕಪ್ಪು ಮತ್ತು ಐಸ್ ಬಣ್ಣದಲ್ಲಿ ಹೊಸ ನೋಕಿಯಾ ಸ್ಮಾರ್ಟ್‌ಫೋನ್ ದೊರೆಯಲಿದ್ದು, ದೇಶದಲ್ಲಿ ₹29,999 ದರ ಹೊಂದಿದೆ. ಅಲ್ಲದೆ, ನೋಕಿಯಾ G60 5G ಖರೀದಿಸಿದಾಗ ₹3,599 ದರದ ನೋಕಿಯಾ ಪವರ್ ಇಯರ್‌’ಬಡ್ಸ್ ಉಚಿತವಾಗಿ ದೊರೆಯಲಿದೆ ಎಂದು ನೋಕಿಯಾ ತಿಳಿಸಿದೆ.

ಹಿಂದಿನ ಲೇಖನಸಾರ್ವಜನಿಕ ಸೇವಕರಿಗೆ ಲಂಚ ನೀಡುವ ಸಲುವಾಗಿ ಹಣ ಹಸ್ತಾಂತರಿಸುವ ವ್ಯಕ್ತಿಯನ್ನು ಪಿಎಂಎಲ್ಎ ಅಡಿ ಬಂಧಿಸಬಹುದು: ಸುಪ್ರೀಂ
ಮುಂದಿನ ಲೇಖನಜಾಗತಿಕ  ಬಂಡವಾಳ ಹೂಡಿಕೆದಾರರ ಸಮಾವೇಶ : ವರ್ಚುಯಲ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ