ವಿದ್ಯಾರ್ಥಿಗಳು ಮೊದಲ ದಿನ ಪರೀಕ್ಷೆ ಬರೆದು ಬಂದ ನಂತರ ಸಹಜವಾಗಿಯೇ ಕೆಲವು ಮಂದಿ ತಾಯಿ-ತಂದೆಯರು ಈ ರೀತಿಯಾಗಿ ಪ್ರಶ್ನಿಸುತ್ತಿರುತ್ತಾರೆ. “ಎಗ್ಗಾಮ್ ಚೆನ್ನಾಗಿ ಬರೆದೆಯಾ ? ಎಷ್ಟು ಪ್ರಶ್ನೆಗಳಿಗೆ ಕರೆಕ್ಟ್ ಆನ್ಸರ್ ಮಾಡಿದ್ದೀಯಾ? ಎಲ್ಲಾ ಪ್ರಶ್ನೆಗಳನ್ನು ಬರೆದಿದ್ದೀಯಾ? ಪಾಸಾಗುತ್ತೇನೆ ಎಂಬ ನಂಬಿಕೆ ನಿನಗಿದೆಯೇ? ಯಾಕೋ ನಿನ್ನನ್ನು ನೋಡಿದ್ರೆ…. ಪರೀಕ್ಷೆಯಲ್ಲಿ ಸರಿಯಾಗಿ ಬರೆದಿಲ್ಲ ಅನಿಸುತ್ತದೆ.” ಈ ರೀತಿಯಾಗಿ ಕೇಳುವುದು ತಪ್ಪು ಎಂಬುದನ್ನು ತಾಯಿ-ತಂದೆಯರು ಗುರುತಿಸಬೇಕು. ಅದರಲ್ಲಿ ನೆಗೆಟೀವ್ ಸಜೇಷನ್ ಇದೆ.
ಒಂದು ವೇಳೆ ಆ ದಿನದ ಪರೀಕ್ಷೆಯನ್ನು ಸರಿಯಾಗಿ ಬರೆದಿಲ್ಲವೆಂದಾದರೆ ಅವರನ್ನು ಕಾಡುವ ಈ ರೀತಿಯ ಪ್ರಶ್ನೆಗಳು ಮತ್ತಷ್ಟು ನಿರಾಶರನ್ನಾಗಿಸುತ್ತದೆ. ಆ ಸಮಯದಲ್ಲಿ ಈ ವಿಷಯವನ್ನು ಪ್ರಸ್ತಾಪಿಸದೆ, ಬೇರೆ ವಿಷಯದ ಬಗ್ಗೆ ಕೇಳುವುದೊಳ್ಳೆಯದು. “ಪುಟ್ಟಾ…. ತುಂಬಾ ಆಯಾಸಗೊಂಡಂತಿದ್ದೀಯಾ.. ಬಾ ಮೊದಲು ಊಟ ಮಾಡು. ಬೆಳಗ್ಗೆ ಕೂಡಾ ನೀನು ಸರಿಯಾಗಿ ಟಿಫನ್ ಮಾಡಿಲ್ಲ”, “ಮೊದಲು ಊಟ ಮಾಡಿ ಸ್ವಲ್ಪ ರಿಲ್ಯಾಕ್ಸ್ ಮಾಡು. ಮೈಂಡ್ ಸ್ವಲ್ಪ ಫ್ರೀಯಾಗುತ್ತೆ” ಎನ್ನಬೇಕು ಅಥವಾ “ಬಾ ಚಿನ್ನ ನನಗೊತ್ತು ನೀನು ಚೆನ್ನಾಗಿಯೇ ಬರೆದಿದ್ದೀಯಾ…. ನಡೀ ಮೊದಲಿಗೆ ಊಟ ಮಾಡು. ಇಲ್ಲ ಬೇರೇನಾದ್ರೂ ಮಾಡಿಕೊಡಲೇ….?” ಎಂದು ನೈತಿಕವಾಗಿ ಬೆಂಬಲಿಸಬೇಕು. ಆಗ ಎರಡಾನೆಯಷ್ಟು ಬಲ ಬರುತ್ತದೆ.
ಆದರೆ, ದುರಾದೃಷ್ಟವಶಾತ್ ಕೆಲವು ತಾಯಿ-ತಂದೆಯರು ಆ ತಕ್ಷಣವೇ ಪೋಸ್ಟ್ ಮಾರ್ಟಮ್ ಕೆಲಸವನ್ನು ಪ್ರಾರಂಭಿಸಿಬಿಡುತ್ತಾರೆ. ಈ ಪ್ರಶ್ನೆಗೆ ಏನು ಬರೆದೆ? ಈ ಪ್ರಶ್ನೆಗೆ ಉತ್ತರ ಯಾವ ರೀತಿ ಬರೆದೆ? ಅದಕ್ಕೇನು ಬರೆದೆ? ನಿಜವಾಗಲೂ ಬರೆದಯೋ ಇಲ್ಲೋ….?” ಎನ್ನುತ್ತಾ ಒಂದೇ ಉಸುರಿನಲ್ಲಿ ಟೆನ್ನನ್ ಕ್ರಿಯೇಟ್ ಮಾಡಿಬಿಡುತ್ತಾರೆ. ಆ ಕ್ಷಣದಲ್ಲಿ ವಿದ್ಯಾರ್ಥಿ ತಾನು ಬರೆದದ್ದನ್ನು ಅಕ್ಷರಶಃ ಹೇಳಬಹುದು ಅಥವಾ ಹೇಳಲಾಗದಿರಬಹುದು. ಒಂದು ವೇಳೆ ಹೇಳಲಾಗದಿದ್ದರೆ ತಂದೆ/ತಾಯಿ ಭಯಂಕರವಾಗಿ ಕೂಗಾಡುತ್ತಾ “ಛೀ…ಛೀ ನಿನ್ನ ತಲೇಲಿ ಮೆದುಳಿಲ್ಲೋ, ಸಗಣಿ ತುಂಳ್ಕೊಂಡಿದ್ದೀಯ ನಿನ್ನ ಕರ್ಮ, ನಿನಗೆಷ್ಟೇ ಹೇಳಿದರೂ ನಿನ್ನ ತಲೆಗತ್ತುವುದಿಲ್ಲ. ಹೇಗಾದ್ರೂ ಹಾಳಾಗ್ಹೋಗು…. ನಾವು ಕಷ್ಟಪಟ್ಟು ದುಡಿದ ಹಣವನ್ನೆಲ್ಲಾ ನಿನ್ನ ಈ ಹಾಳಾದ ಓದಿಗೆ ಸುರಿದುಬಿಟ್ಟೆವಲ್ಲಾ….?” ಎಂಬ ಬೈಗುಳ, ಮಾತುಗಳು ಆ ವಿದ್ಯಾರ್ಥಿಯನ್ನು ಬಹಳಷ್ಟು ಘಾಸಿಗೊಳಿಸುತ್ತದೆ. ಅವುಗಳ ಪ್ರಭಾವ ರಾತ್ರಿವರೆಗಿರುತ್ತದೆ.
ಮರುದಿನ ಪರೀಕ್ಷೆಗೆ ಸಂಬಂಧಪಟ್ಟ ಹಾಗೆ ಪುಸ್ತಕಗಳನ್ನು ಓದಿಕೊಳ್ಳಬೇಕೆಂದು ಅದೆಷ್ಟೇ ಪ್ರಯತ್ನಿಸಿದರೂ, ಆ ಬೈಗಳು, ನಿಂದಿಸುವಂತಹ ಮಾತುಗಳು ನೆನಪಿಗೆ ಬರುತ್ತವೆ.
ಆದ್ದರಿಂದ, ಯಾವ ಪರೀಕ್ಷೆಯನ್ನು ಹೇಗೆ ಬರೆದರೋ, ಏನು ಬರೆದರೋ ಎಂಬ ಪೋಸ್ಟ್ ಮಾರ್ಟಮ್ ಅನ್ನು, ಎಲ್ಲಾ ಪರೀಕ್ಷೆಗಳು ಮುಗಿದ ನಂತರವಷ್ಟೇ ಮಾಡಬೇಕೆಂದು ಹೆತ್ತವರಿಗೆ ನನ್ನ ಮನವಿ, ವಿದ್ಯಾರ್ಥಿ ತಾನೇ ತಾನಾಗಿ ಹೇಳಿದರೆ, ಕೇಳಬೇಕೆ ಹೊರತು ಅವರ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಕುರಿತಂತೆ ಪ್ರಸ್ತಾಪಿಸಬಾರದು. ಈ ವಿಷಯದಲ್ಲಿ ಉಪಾಧ್ಯಾಯರಾದ ತಾಯಿ-ತಂದೆಯರು ತಾವಿಲ್ಲಿ ಉಪಾಧ್ಯಾಯರಲ್ಲವೆಂಬ ಸತ್ಯವನ್ನು ಗುರುತಿಸಬೇಕು.
ಪರೀಕ್ಷಾ ಸಮಯದಲ್ಲಿ ಕುಟುಂಬದ ಸದಸ್ಯರು ಕೂಡಾ ಅನುಕೂಲ ವಾತಾವರಣವನ್ನು ಏರ್ಪಡಿಸಿದರೆ ತುಂಬಾ ಒಳ್ಳೆಯದು ಅರ್ಥವಿಲ್ಲದ ಸ್ಪರ್ಧೆ, ಪೈಪೋಟಿಗಳು, ತುಂಟತನದ ಸಲಹೆ, ಜಗಳಗಳು ಕೂಡಾ ಬೇಡ ಹಾಯಾಗಿ ಹರಟೆ ಹೊಡೆಯುತ್ತಾ ತಮ್ಮ ಮಕ್ಕಳಿಗೆ ಉತ್ತಮ ಗೌರವ, ಮರ್ಯಾದೆಗಳನ್ನು ಕೊಡುತ್ತ ಓದಿಕೊಳ್ಳಲು ಪ್ರಶಾಂತವಾದ ವಾತಾವರಣವನ್ನು ಕಲ್ಪಿಸಬೇಕು. ಮಕ್ಕಳ ಪರೀಕ್ಷೆಗಳ ಸಮಯದಲ್ಲಿ ಮನೆಯಲ್ಲಿ ಯಾವುದೇ ರೀತಿಯ ಪಾರ್ಟಿಗಳು, ಮತ್ತು ಔತಣಕೂಟಗಳನ್ನೇರ್ಪಡಿಸಬಾರದು ತಂದೆ ಅದೆಷ್ಟೇ ದೊಡ್ಡ ಅಧಿಕಾರಿಯಾಗಿದ್ದರೂ, ಮಿನಿಸ್ಟರಾಗಿದ್ದರೂ ಬೆಳಗಿನ ಸಮಯದಲ್ಲಿ ಮನೆಯಲ್ಲಿದ್ದರೆ ಒಳ್ಳೆಯದು. ಆದರೆ ಅವರು ಪ್ರಶೋತ್ತರ ಕಾರ್ಯಕ್ರಮವನ್ನಿಡಬಾರದು ಯಕ್ಷ ಪ್ರಶ್ನೆಗಳನ್ನು ಹಾಕಬಾರದು.
ಮನೆಯಲ್ಲಿರುವ ವಿದ್ಯಾರ್ಥಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರ ವಿಷಯದಲ್ಲಿ ಸಹಜವಾಗಿಯೇ ಸ್ವಲ್ಪ ‘ಸೋದರ ವೈರತ್ವ’ (Sibling rivalry) ದಂತಹವು ಇದ್ದೇ ಇರುತ್ತದೆ. ಅವರಲ್ಲಿ ಅಸಂಕಲ್ಪಿತ ಗುರುತಿಸುಕೊಳ್ಳುವಿಕೆಯ ತವಕವಿರುತ್ತದೆ. ಅಂತಹ ಮಕ್ಕಳು ಟಿ.ವಿ. ಚಾನೆಲ್ಸ್ ಬಳಿ ಸ್ಪರ್ಧೆಗಿಳಿಯುತ್ತಾರೆ ಅಥವಾ ನಾನು ಓದಿಕೊಳ್ಳುವ ಸಮಯದಲ್ಲಿ ಯಾರೂ ಟಿ.ವಿ. ಆನ್ ಮಾಡಬಾರದು ಎಂದು ಆರ್ಡರ್ ಮಾಡಬಹುದು ಅವುಗಳನ್ನು ಗಮನಿಸಿ ತಾಯಿ-ತಂದೆಯರು ಉಳಿದ ಮಕ್ಕಳಿಗೆ ಸಮಾಧಾನ ಹೇಳಬೇಕು. ತಾಯಿ ತಂದೆಯರು ಕೂಡಾ ಟಿ.ವಿ ಸೀರಿಯಲ್ಸ್ ನೋಡುವುದನ್ನು ಬಿಡಬೇಕು ತೀರಾ ಅನಿವಾರ್ಯವಿದ್ದರೆ ಬೆಳಗ್ಗೆ 15-20 ನಿಮಿಷ ಕಾರ್ಟೂನ್ ನೆಟ್ವರ್ಕ್, ಸುದಿಗಳು ನೋಡಲು ಬಿಡಬೇಕು. ಅದು ಮನಸ್ಸನ್ನು ಹಗುರ ಮಾಡಬಹುದು.
ಕೊನೆಯದಾಗಿ ಪರೀಕ್ಷೆಗೆ ಹೊರಡುವ ಮುಂಚೆ “ಹುಷಾರು, ಜಾಗ್ರತೆ” ಎಂಬ ಮಾತನ್ನು ಆಡಬೇಡಿ. ಹಾಗೆ ಹೇಳಿದಾಗ ಯಾವ ಅಪಾಯ ಕಾದಿದೆಯೋ ಎಂಬಂತಾಗುತ್ತದೆ. ‘ಗುಡ್ ಲಕ್ ‘ ಅನ್ನಿ ಅಥವಾ ‘ಬೆಸ್ಟ್ ಆಫ್ ಲಕ್” ಅಥವಾ ರ್ಯಾಂಕ್ ನಿನಗೇ ಗ್ಯಾರೆಂಟಿ, ಧೈರ್ಯದಿಂದ ಹೋಗಿ
ಅದ್ಭುತಗಳನ್ನು ಆಶಿಸಬಹುದು ಆದರೆ….
”ಮಾತನಾಡುವ ನಾಯಿಯನ್ನು ಮಾರಲಾಗುತ್ತದೆ” ಎಂಬ ಬೋರ್ಡನ್ನು ನೋಡಿ ಒಬ್ಬ ವ್ಯಕ್ತಿ ಬಾಗಿಲು ಬಡಿದ. ಮನೆಯಾತ ಬಾಗಿಲು ತೆಗೆದ.
‘ ‘ಮಾತನಾಡುವ ನಾಯಿ ಮಾರಾಟಕ್ಕಿದೆ ಎಂಬ ಬೋರ್ಡ್ ಹಾಕಿದ್ದೀರಿ. ನಿಮ್ಮ ನಾಯಿ ನಿಜವಾಗಿಯೂ ಮಾತನಾಡುತ್ತದೆಯೇ?”
”ಹೌದು, ಮಾತನಾಡುತ್ತದೆ” ಎಂದ ಮನೆ ಮಾಲೀಕ
“ನಾಯಿ ಬೆಲೆ ಎಷ್ಟು? ಅದು ಯಾವ ಭಾಷೆಯಲ್ಲಿ ಮಾತನಾಡುತ್ತದೆ…?”
“ಅದರ ಬೆಲೆ ಒಂದು ಸಾವಿರ ಕನ್ನಡದಲ್ಲೇ ಮಾತನಾಡುತ್ತದೆ ಎಂದ
”ಬೇಕಾದರೆ ಆ ವಕ್ಕದ ಕೋಣೆಯಲ್ಲಿದೆ ನೋಡಿ” ಎಂದು ಹೇಳಿದ
ಪಕ್ಕದ ಕೋಣೆಗೆ ಹೋದಾಕ್ಷಣ ‘ಬನ್ನಿ, ನಮಸ್ಕಾರ. ಆ ಕುರ್ಚಿಯಲ್ಲಿ ಕುಳಿತುಕೊಳ್ಳಿ. ಎಂದಿತು ನಾಯಿ ಅದನ್ನು ಖರೀದಿಸಲು ಬಂದಿದ್ದ ಆಸಾಮಿ ಆಶ್ಚರ್ಯಚಕಿತನಾದ.
‘ಹೌದು. ನೀನು ಅದ್ದೇಗೆ ಮಾನವರ ಭಾಷೆಯಲ್ಲಿ ಮಾತನಾಡುತ್ತಿದ್ದೀಯಾ? ಇಷ್ಟಕ್ಕೂ ನೀನು ಇಲ್ಲಿಗೇಕೆ ಬಂದೆ? ನಿನ್ನ ಮಾಲೀಕ ನಿನ್ನನೇಕೆ ಮಾರುತ್ತಿದ್ದಾನೆ? ನಿನ್ನ ಹಾಗೆ ಮಾತನಾಡುವ ಪ್ರಾಣಿಗಳು ಆತನ ಬಳಿ ಇನ್ನೂ ಇವೆಯೇ ?” ಇತ್ಯಾದಿ ಪ್ರಶ್ನೆಗಳನ್ನು ಕೇಳಿದ
ಅದೆಲ್ಲಾ ದೊಡ್ಡ ಕತೆ ಸಾರ್ ಕೂತ್ಕಳ ಹೇಳ್ತೀನಿ ನನಗೆ ಈ ಮನುಷ್ಯ ಭಾಷೆ ಹೇಗೆ ಬಂದಿತೋ ನನಗೂ ಗೊತ್ತಿಲ್ಲ. ನಾನು ಒಬ್ಬ ಹಿರಿದು ಸಚಿವರ ಮನೆಯಲ್ಲಿ ಹುಟ್ಟಿದೆ. ಆ ಮನೆಯಲ್ಲಿರುವವರೆಲ್ಲಾ ನನ್ನನ್ನು ಬಹಳ ಅಭಿಮಾನದಿಂದ ನೋಡಿಕೊಳ್ಳುತ್ತಿದ್ದರು ಆದರೆ ಆ ಮಂತ್ರಿ ಮಹೋದಯರು ಮಾಡುತ್ತಿದ್ದ ಅಕ್ರಮಗಳು ಅಷ್ಟಿಷ್ಟಲ್ಲ ಜನರ ಆಸ್ತಿ ಪಾಸ್ತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಇದನ್ನೆಲ್ಲಾ ನೋಡಿ ನೋಡಿ ಬೇಸತ್ತುಹೋದ ನಾನು ಅದೊಂದು ದಿನ ಅಪರಾಧ ಭ್ರಷ್ಟಾಚಾರ ನಿರೋಧ ಇಲಾಖೆಯವರಿಗೆ ಎಲ್ಲ ವಿವರಗಳನ್ನು ನೀಡಿ ಆತನನ್ನು ಲೆಡ್ ಹ್ಯಾಂಡ್ ಆಗಿ ಹಿಡಿದುಕೊಟ್ಟೆ ಇದರಿಂದಾಗಿ ಆ ಕುಟುಂಬ ಸದಸ್ಯರು ನನ್ನನ್ನು ಕೊಂದುಬಿಡಬೇಕೆಂದು ನೋಡಿದರು ನಾನು ತಪ್ಪಿಸಿಕೊಂಡು ಬಂದು ಈ ಮನೆಯಲ್ಲಿ ತಲೆಮರೆಸಿಕೊಂಡೆ’ ಎಂದು ಕಣ್ಣೀರಿಡುತ್ತ ತನ್ನ ಕಥೆಯನ್ನು ಮುಗಿಸಿತು.
ಅದರ ಮಾತುಗಳನ್ನು ಕೇಳಿದ ಆ ವ್ಯಕ್ತಿಗೆ ತಲೆ ಸುತ್ತಿ ಕೆಳಗೆ ಬೀಳುವಂತಾಯಿತು. ಇದೇನು ನಿಜವೇ? ಕನಸೇ ? ಎಂದು ತನ್ನನ್ನು ತಾನು ಚಿವುಟಿಕೊಂಡು ನೋಡಿದ ನಿಜವೆಂದೆನಿಸಿದ ಮೇಲೆ ಹೊರಕ್ಕೆ ಬಂದು ಆ ಮನೆ ಮಾಲೀಕನೊಂದಿಗೆ “ಅಲ್ಲಾ ಸ್ಟಾರ್, ಇಷ್ಟು ಚೆನ್ನಾಗಿ ಮಾತನಾಡುವ ಪ್ರಾಮಾಣಿಕ ನಾಯಿಯನ್ನು ಏಕೆ ಮಾರಬೇಕೆಂದುಕೊಂಡಿದ್ದೀರಿ?” ಎಂದು ಕೇಳಿದ
”ಅದೇ ಕಣೋ ನಿಜವಾದ ಸಮಸ್ಯೆ ಇದೇ ರೀತಿ ಪ್ರತಿ ದಿನಕ್ಕೊಂದು ಸುಳ್ಳು ಹೇಳುತ್ತಿರುತ್ತದೆ. ಅದನ್ನು ನಂಬಬೇಕೊ, ಬಿಡಬೇಕೊ ಗೊತ್ತಾಗದೆ ಗೊಂದಲದಲ್ಲಿ ಇದ್ದೇನೆ” ಎಂದು ಹೇಳಿದ.
ಇದೊಂದು ಕಥೆಯೇ ಆಗಿರಬಹುದು ಸ್ವಲ್ಪ ಹೊತ್ತು ನಗಾಡಲೂ ಬಹುದು. ಆದರೆ, ಆ ಮಾಲೀಕ, ತನ್ನ ನಾಯಿಗಿರುವ ಪ್ರತಿಭೆಯನ್ನು ಗುರುತಿಸದಿದ್ದದು ಆತನ ಮೂರ್ಖತನ ಕೊನೆಗೆ ಅದನ್ನು ದೂರ ಮಾಡಿಕೊಳ್ಳಲೂ ಸಿದನಾದ ಕೆಲವು ತಾಯಿ-ತಂದೆಯರ ಪರಿಸ್ಥಿತಿಯೂ ಹೀಗೇ ಇದೆ ತಮ್ಮ ಮಕ್ಕಳಿಗೆ ಶೇಕಡ 90ರಷ್ಟು ಅಂಕಗಳು ಬರುತ್ತಿದ್ದರೂ, ಏತಕ್ಕೂ ಕೆಲಸಕ್ಕೆ ಬಾರದ ಅಂಕಗಳು ಬರುತ್ತಿವೆಯೆಂದು, ಇನ್ನೂ ನಾಲೈದು ಗಂಟೆಗಳ ಕಾಲ ಓದದಿದ್ದರೆ ಓದೇ ವೇಸ್ಟ್ ಎಂದು ಹೇಳುತ್ತಿರುತ್ತಾರೆ.
ಮಕ್ಕಳನ್ನು ನನ್ನ ಬಳಿಗೆ ಕೌನ್ಸಿಲಿಂಗ್ ಗೆ ಕರೆತರುವವರಲ್ಲಿ, ಅದರಲ್ಲೂ ಮುಖ್ಯವಾಗಿತಾಯಂದಿರಲ್ಲಿ ಈ ವೈಖರಿ ಕಂಡುಬರುತ್ತದೆ ಇದರಿಂದಾಗಿ ಮಕ್ಕಳಿಗೆ ಓದು ಎಂದರೇನೆ ಬೇಸರವೆನಿಸುತ್ತದೆ. ಓದಿನ ಬಗ್ಗೆ ವಿರೋಧ ಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ ಇಂತಹ ಪರಿಸ್ಥಿತಿ ಕೆಲವು ಕುಟುಂಬಗಳಲ್ಲಿರುವುದರಿಂದ ಇಂದು ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬೇರ್ಪಟ್ಟು ಬೇರೆ ಬೇರೆಯಾಗಿ ಜೀವಿಸುವವರ ಸಂಖ್ಯೆ ಕೂಡಾ ಅಧಿಕವಾಗುತ್ತಿದೆ ಬೇರ್ಪಟ್ಟನಂತರ ಒಬ್ಬರ ಮೌಲ್ಯಗಳು ಒಬ್ಬರಿಗೆ ಗೊತ್ತಾದರೂ, ಪಶ್ಚಾತ್ತಾಪಪಡುವ ವೇಳೆಗೆ ಅವರುಗಳ ಪೈಕಿ ಒಬ್ಬರು ಬೇರೆ ಸಂಗಾತಿಯನ್ನು ಹುಡುಕಿಕೊಂಡು ಹೊಸ ಜೀವನವನ್ನು ಆರಂಭಿಸಿರುತ್ತಾರೆ ಎರಡನೆಯ ವರು ಮಾತ್ರ ಮಾಡಿದ ತಪ್ಪನ್ನು ತಿಳಿದುಕೊಂಡು ಮಾಸಿಕವಾಗಿ ಕುಗ್ಗಿಹೋಗುವುದೋ, ದುರಾಭ್ಯಾಸಗಳಿಗೊಳಗಾಗುವುದೊ ಅಥವಾ ಸನ್ಯಾಸಿಗಳಾಗಿಯೋ ಸ್ಯಾಡಿಸ್ಟ್‌ಗಳಾಗಿಯೇ ಉಳಿದುಬಿಡುತ್ತಾರೆ
ಸಂತೈಸಲು ಒಂದು ಪದತಿಯಿದೆ :
ಯಾರಾದರೊಬ್ಬರಿಗೆ ತೀವ್ರವಾದ ನಷ್ಟವುಂಟಾದಾಗ, ಒಂದು ಮನೆಯಲ್ಲಿ ಮರಣ ಸಂಭವಿಸಿದಾಗ ಅವರನ್ನು ಸಂತೈಸಲು ದೊಡ್ಡ ಮನಸ್ಸು ಬೇಕು “ಓಹ್, ಅಯಾಮ್ ಸ್ಸಾರಿ…”. ”ಅಯ್ಯೋಯ್ಯೋ ನಿಮಗೆಷ್ಟು ಕಷ್ಟವುಂಟಾಯಿತು?” ಗಳಂತಹ ಮಾಮೂಲಿ ಸಾಂಪ್ರದಾಯಿಕ ಮಾತುಗಳಿಗಿಂತ, ಆಲೋಚನೆ ಮಾಡಿ, ಅವರ ಸ್ಥಾನದಲ್ಲಿ ನಾವೇ ಇದ್ದರೆ, ಎಂತಹ ಮಾತುಗಳನ್ನು ಕೇಳಬೇಕೆಂದುಕೊಳ್ಳುತ್ತೆವೆಯೋ. ಅಂತಹ ಮಾತುಗಳನ್ನು ಹೇಳಬೇಕು ಕೆಲವರಿಗೆ ಮಾತುಗಳನ್ನು ಹೇಳಬೇಕು. ಆದರೆ ಅವುಗಳನ್ನು ಕೇಳುವ ಸ್ಥಿತಿಯಲ್ಲಿಲ್ಲದೆ ಅಘಾತಕ್ಕೊಳಗಾದವರಿಗೆ ಸಂತೈಸುವ ಕೈಗಳು, ದುಃಖದ ಭಾರದಿಂದ ದೂರಾಗಲು ತಲೆಯನ್ನಿಟ್ಟು ಒರಗಲು ಭುಜಗಳು, ಹೃದಯಕ್ಕೆ ಅಪ್ಪಿಕೊಳ್ಳುವ ಆತ್ಮೀಯತೆ, ಕಣ್ಣೀರನ್ನು ಒರೆಸುವ ಬೆರಳುಗಳು ಅಗತ್ಯವಾಗುತ್ತವೆ ಅವುಗಳನ್ನು ನೀಡುವುದನ್ನು ”ನಾನ್‌ವರ್ಬಲ್ ಕೌನ್ಸಿಲಿಂಗ್'” ಎನ್ನುತ್ತಾರೆ ಅಂದರೆ ಮಾತುಗಳಿಲ್ಲದ ಕೌನ್ಸಿಲಿಂಗ್.
ಒಳ್ಳೆಯವರಿಗೆ ಕೆಟ್ಟದ್ದು ನಡೆಯುವುದು, ಕೆಟ್ಟವರಿಗೆ ಎಲ್ಲವೂ ಒಳ್ಳೆಯದೇ ನಡೆಯುವುದು ಆಕಸ್ಮಿಕವಿರಬಹುದು ಅದಕ್ಕೆ ದೇವರನ್ನು ರೂಢಿಸುವುದು ನಿಂದಿಸುವುದು, ನಾಸ್ತಿಕನಾಗಿ ಬದಲಾಗಿಬಿಡುವುದು ಅಥವಾ ಮತಾಂತರಗೊಳ್ಳುವುದರಲ್ಲಿ ಸ್ವಲ್ಪವೂ ಅರ್ಥವಿಲ್ಲ ನಡೆದು ಹೋದ ನಷ್ಟದ ಬಗ್ಗೆಯೇ ಯೋಚಿಸುತ್ತಾ ಕೂರದೆ. ಇರುವವರೊಂದಿಗೆ, ವಾಸ್ತವ ಪರಿಸ್ಥಿತಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.
ಆ ರೀತಿಯಾಗಿ ಪದೇಪದೇ ರ್ಯಾಗಿಂಗ್ ಮಾಡಿದ್ದರಿಂದ ತಮ್ಮ ಓದಿಗೆ ಅರ್ಧದಲ್ಲೇ ತಿಲಾಂಜಲಿಯಿತ್ತ ಮಕ್ಕಳು ಬಹಳಷ್ಟಿದ್ದಾರೆ.















